ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳಿಗೆ ವಿಶ್ವದ ಮೊದಲ ಮಲೇರಿಯಾ ಲಸಿಕೆ ನೀಡಲು WHO ಅನುಮೋದನೆ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನ್ಯೂಯಾರ್ಕ್, ಅಕ್ಟೋಬರ್ 07: ಮಲೇರಿಯಾ ನಿರ್ಮೂಲನೆಯ ಮಹತ್ವದ ಹೆಜ್ಜೆಯಲ್ಲಿ, ಮಕ್ಕಳಿಗೆ ಮೊಟ್ಟ ಮೊದಲ ಮಲೇರಿಯಾ ಲಸಿಕೆ ನೀಡಲು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ.

ಬ್ರಿಟಿಷ್ ಔಷಧ ತಯಾರಕ ಗ್ಲಾಕ್ಸೊಸ್ಮಿತ್‌ ಕ್ಲೈನ್ ಅಭಿವೃದ್ಧಿಪಡಿಸಿದ 'ಆರ್‌ಟಿಎಸ್, ಎಸ್‌/ಎಎಸ್01' RTS,S/AS01 ಮಲೇರಿಯಾ ಅಥವಾ ಮಾಸ್ಕ್ಯುರಿಕ್ಸ್‌ (Mosquirix) ಅನ್ನು ಮಕ್ಕಳಿಗೆ ನೀಡಲು ಶಿಫಾರಸು ಮಾಡಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಟೆಡ್ರೋಸ್ ಅದನೋಮ್ ಗೆಬ್ರೆಯಾಸಿಸ್ ತಿಳಿಸಿದ್ದಾರೆ.

ಪ್ಯಾರಸಿಟಮಲ್‌ನಿಂದ ಝಿಕಾ ಸೋಂಕಿನಿಂದ ಚೇತರಿಕೆ ಸಾಧ್ಯ ಎಂದ ತಜ್ಞಪ್ಯಾರಸಿಟಮಲ್‌ನಿಂದ ಝಿಕಾ ಸೋಂಕಿನಿಂದ ಚೇತರಿಕೆ ಸಾಧ್ಯ ಎಂದ ತಜ್ಞ

'RTS,S/AS01 ಮಲೇರಿಯಾ ಲಸಿಕೆಯನ್ನು 30 ವರ್ಷಗಳಿಗಿಂತ ಹೆಚ್ಚು ಕಾಲಾವಧಿ ನಂತರ ಅಭಿವೃದ್ಧಿಪಡಿಸಲಾಗಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಇದು ಇತಿಹಾಸ ಸೃಷ್ಟಿಸಿದೆ. ಈ ಲಸಿಕೆ ಜಗತ್ತಿಗೆ ಉಡುಗೊರೆಯಾಗಿದೆ' ಎಂದು ಅವರು ಹೇಳಿದ್ದಾರೆ.

WHO Recommends Use Of Worlds First Malaria Vaccine For Children

ಸಹರಾ ಆಫ್ರಿಕಾ ಹಾಗೂ ಮಲೇರಿಯಾ ವ್ಯಾಪಕವಾಗಿ ಹರಡಿರುವ ಇತರೆ ಪ್ರದೇಶಗಳಲ್ಲಿ ಮೊದಲು ಮಕ್ಕಳಿಗೆ ಲಸಿಕೆಯ ಬಳಕೆ ಮಾಡಲು ಶಿಫಾರಸು ಮಾಡಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

'ನಾನು ಮಲೇರಿಯಾ ಸಂಶೋಧಕನಾಗಿ ನನ್ನ ವೃತ್ತಿ ಜೀವನವನ್ನು ಆರಂಭಿಸಿದೆ. ಈ ಭಯಾನಕ ಕಾಯಿಲೆ ವಿರುದ್ಧ ನಾವು ಪರಿಣಾಮಕಾರಿ ಲಸಿಕೆ ಹೊಂದುವ ದಿನಕ್ಕಾಗಿ ಹಂಬಲಿಸುತ್ತಿದ್ದೆ. ಇಂದು ಆ ದಿನ ಬಂದಿದೆ. ವಿಶ್ವದ ಮೊದಲ ಮಲೇರಿಯಾ ಲಸಿಕೆಯ ವ್ಯಾಪಕ ಬಳಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡುತ್ತಿದೆ. ಇದು ಸಾವಿರಾರು ಜನರ ಜೀವ ಉಳಿಸಲಿದೆ' ಎಂದು ಟೆಡ್ರೋಸ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಹರಿಯಾಣದ ಗ್ರಾಮದಲ್ಲಿ 'ರಹಸ್ಯ ಜ್ವರ'ಕ್ಕೆ ಹತ್ತು ದಿನದಲ್ಲೇ ಎಂಟು ಮಕ್ಕಳು ಬಲಿಹರಿಯಾಣದ ಗ್ರಾಮದಲ್ಲಿ 'ರಹಸ್ಯ ಜ್ವರ'ಕ್ಕೆ ಹತ್ತು ದಿನದಲ್ಲೇ ಎಂಟು ಮಕ್ಕಳು ಬಲಿ

'ಸೋಂಕು ಹಾಗೂ ಬ್ಯಾಕ್ಟೀರಿಯಾಗಳ ವಿರುದ್ಧ ಹಲವು ಲಸಿಕೆಗಳು ಅಸ್ತಿತ್ವದಲ್ಲಿವೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಮಲೇರಿಯಾ ವಿರುದ್ಧ ಲಸಿಕೆಯನ್ನು ವ್ಯಾಪಕವಾಗಿ ಬಳಸಲು ಶಿಫಾರಸು ಮಾಡಿದ್ದು ಇದೇ ಮೊದಲು' ಎಂದಿದ್ದಾರೆ.

WHO Recommends Use Of Worlds First Malaria Vaccine For Children

ಘಾನಾ, ಕೀನ್ಯಾ, ಮಲಾವಿಯಲ್ಲಿ ನಡೆಯುತ್ತಿರುವ ಲಸಿಕೆಯ ಆರಂಭಿಕ ಕಾರ್ಯಕ್ರಮದ ಫಲಿತಾಂಶಗಳ ಆಧಾರದ ಮೇಲೆ ಲಸಿಕೆಗೆ ಶಿಫಾರಸು ಮಾಡಲಾಗಿದೆ. 2019ರಿಂದ 8,00,000 ಮಕ್ಕಳನ್ನು ಪ್ರಯೋಗದಲ್ಲಿ ಒಳಪಡಿಸಲಾಗಿದೆ.

'RTS,S/AS01 ಲಸಿಕೆಯು ಪ್ಲಾಸ್ಮೋಡಿಯಂ ಫಾಲ್ಸಿಪಾರಂ ವಿರುದ್ಧ ಕಾರ್ಯನಿರ್ವಹಿಸಲಿದೆ. ಇದು ಐದು ಪರಾವಲಂಬಿ ಜಾತಿಗಳಲ್ಲಿಅತ್ಯಂತ ಮಾರಕವಾಗಿರಲಿದೆ ಎಂದು ಹೇಳಿದ್ದಾರೆ.

ಜ್ವರ, ತಲೆನೋವು, ಸ್ನಾಯುನೋವು, ಶೀತ, ಬೆವರುವಿಕೆ ಮಲೇರಿಯಾದ ಲಕ್ಷಣಗಳಾಗಿವೆ.

'ಮಲೇರಿಯಾಗೆ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಇತಿಹಾಸದಲ್ಲಿ ಮಹತ್ವದ ಹೆಜ್ಜೆಯಾಗಿದೆ. ಆದರೆ ಈ ಲಸಿಕೆಯ ಉತ್ಪಾದನೆ ಹಾಗೂ ವಿತರಣೆಗೆ ಹಣಕಾಸನ್ನು ಹೊಂದಿಸುವುದು ಈಗ ದೊಡ್ಡ ಸವಾಲಾಗಿದೆ' ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಔಷಧ ತಯಾರಕ ಸಂಸ್ಥೆ ಜಿಎಸ್‌ಕೆ ವಾರ್ಷಿಕವಾಗಿ 2028ರವರೆಗೆ 15 ಮಿಲಿಯನ್ ಡೋಸ್ ಮಾಸ್ಕ್ಯುರಿಕ್ಸ್‌ ಲಸಿಕೆ ಉತ್ಪಾದನೆ ಮಾಡಲು ಬದ್ಧವಾಗಿದೆ ಎಂದು ತಿಳಿಸಿದೆ.

ಈ ವರ್ಷ ವಿಶ್ವ ಆರೋಗ್ಯ ಸಂಸ್ಥೆ ನೇತೃತ್ವದ ಜಾಗತಿಕ ಮಾರುಕಟ್ಟೆ ಅಧ್ಯಯನವು ಮಲೇರಿಯಾ ಲಸಿಕೆಗೆ ಆದ್ಯತೆ ನೀಡಿದ್ದವು. ಹಾಗೂ 2030ರ ವೇಳೆಗೆ 50ರಿಂದ 110 ಮಿಲಿಯನ್ ಲಸಿಕೆ ಡೋಸ್‌ಗಳ ಉತ್ಪಾದನೆ ಕುರಿತು ಪ್ರಸ್ತಾಪ ಮಾಡಲಾಗಿತ್ತು. ಮಲೇರಿಯಾ ಅಧಿಕವಾಗಿ ಹರಡುವ ಪ್ರದೇಶಗಳಲ್ಲಿ ಇವುಗಳನ್ನು ಹೆಚ್ಚಾಗಿ ವಿತರಣೆ ಮಾಡುವ ಕುರಿತು ಪ್ರಸ್ತಾಪಿಸಲಾಗಿತ್ತು.

ಪ್ರತಿವರ್ಷ ಮಲೇರಿಯಾ 4,00,000 ಜನರನ್ನು ಬಲಿಪಡಿಯುತ್ತದೆ. ವಿಶ್ವಾದ್ಯಂತ ಮಲೇರಿಯಾಗೆ ತುತ್ತಾಗುವ ಪೈಕಿ ಮಕ್ಕಳ ಸಂಖ್ಯೆ ಹೆಚ್ಚಿದ್ದು, 67% ಮಕ್ಕಳು ಮಲೇರಿಯಾಗೆ ಬಲಿಯಾಗುತ್ತಿದ್ದಾರೆ. ಆಫ್ರಿಕಾದಲ್ಲಿ ಪ್ರತಿ ವರ್ಷ ಐದು ವರ್ಷದೊಳಗಿನ 260000 ಮಕ್ಕಳು ಮಲೇರಿಯಾದಿಂದ ಸಾವನ್ನಪ್ಪುತ್ತಿದ್ದಾರೆ.

RTS,S/AS01 ಮಲೇರಿಯಾ ಲಸಿಕೆಯನ್ನು ಮಕ್ಕಳಿಗೆ ಐದು ತಿಂಗಳಿನಿಂದ 4 ಡೋಸ್‌ಗಳಲ್ಲಿ ನೀಡಬೇಕಾಗುತ್ತದೆ. ಇದು ಮಲೇರಿಯಾ ನಿರ್ಮೂಲನೆಯಲ್ಲಿ ಬಹುದೊಡ್ಡ ಹೆಜ್ಜೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

English summary
World Health Organization (WHO) has recommended broad use of the world's first malaria vaccine for children, as a breakthrough in malaria control
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X