ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ಲಸಿಕೆ 2021ರ ಮಧ್ಯದೊಳಗೆ ಸಿಗುವುದು ಅನುಮಾನ: WHO

|
Google Oneindia Kannada News

ಹಲವು ದೇಶಗಳು ಕೊವಿಡ್ 19 ಲಸಿಕೆ ಉತ್ಪಾದನೆಯಲ್ಲಿ ತೊಡಗಿವೆ. ಡಿಸೆಂಬರ್ ಅಥವಾ 2021ರ ಮಧ್ಯದೊಳಗೆ ಲಸಿಕೆ ಸಿಗುವುದು ಅನುಮಾನ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಸೌತ್‌ಈಸ್ಟ್ ರೀಜನಲ್ ಡೈರೆಕ್ಟರ್ ಡಾ. ಪೂನಮ್ ಖೇತ್ರಪಾಲ್ ಈ ಕುರಿತು ಮಾಹಿತಿ ನೀಡಿದ್ದಾರೆ.

ಜಾಗತಿಕ ಕೊರೊನಾ ಪ್ರಕರಣ ವರದಿಯಾಗದ್ದಕ್ಕಿಂತ 6 ಪಟ್ಟು ಹೆಚ್ಚು: ಸಮೀಕ್ಷೆಜಾಗತಿಕ ಕೊರೊನಾ ಪ್ರಕರಣ ವರದಿಯಾಗದ್ದಕ್ಕಿಂತ 6 ಪಟ್ಟು ಹೆಚ್ಚು: ಸಮೀಕ್ಷೆ

ಮುಂದಿನ ಕೆಲವು ತಿಂಗಳುಗಳಲ್ಲಿ ಯಶಸ್ವಿ ಲಸಿಕೆ ಕಂಡುಬಂದಲ್ಲಿ, 2021ರ ವೇಳೆಗೆ ದೇಶಗಳಲ್ಲಿ ಸಾಕಷ್ಟು ಪ್ರಮಾಣದ ಲಸಿಕೆಗಳು ಲಭ್ಯವಿರುತ್ತದೆ ಎಂದು ನಂಬಲಾಗಿದೆ.

WHO Predicts That Covid-19 Vaccine Unlikely Before Mid 2021

ಜನರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.ಲಸಿಕೆ ಕಂಪನಿಯಲ್ಲಿ ಮುಂಚೂಣಿಯಲ್ಲಿರುವ ಮೂರನೇ ಹಂತದ ಪ್ರಯೋಗ ನಡೆಸುತ್ತಿರುವವರು ವೈಯಕ್ತಿಕ ಲಸಿಕೆಗಳ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯನ್ನು ಮೌಲ್ಯಮಾಪನ ಮಾಡಲು ಹಲವು ತಿಂಗಳುಗಳನ್ನು ತೆಗೆದುಕೊಳ್ಳಲಿದ್ದಾರೆ.

ಪ್ರಯೋಗ ಪೂರ್ಣಗೊಂಡ ಬಳಿಕ ಪರವಾನಗಿ, ಬಳಕೆಗೆ ಅಧಿಕಾರ ಮತ್ತು ಸಾಮೂಹಿಕ ಉತ್ಪಾದನೆಗೆ ತೆಗೆದುಕೊಂಡ ಸಮಯದ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಕೆಲವೊಂದು ಲಸಿಕೆಗಳಿಗೆ ಅನುದಾನದ ಕೊರತೆ ಇದೆ ಎಂದು ಹೇಳಲಾಗಿದೆ.

ಕೋವ್ಯಾಕ್ಸ್ ಪಡೆಯಲು 184 ದೇಶಗಳು ಸಹಿ ಹಾಕಿವೆ. 92 ಕಡಿಮೆ ಆದಾಯ ಇರುವ ದೇಶಗಳು ಕೂಡ ಸೇರಿವೆ.

ಆಕ್ಸ್‌ಫರ್ಡ್ ಯೂನಿವರ್ಸಿಟಿಯ ಆಸ್ಟ್ರಾಜೆನೆಕಾ, ಸಿನೋವಾಕ್, ಸಿನೋಫಾರ್ಮ್, ಕ್ಯಾನ್ಸಿನೋ, ಸ್ಪುಟ್ನಿಕ್ V, ಮಾಡೆರ್ನಾ ಲಸಿಕೆಗಳು ಪ್ರಯೋಗವನ್ನು ನಡೆಸುತ್ತಿವೆ.

Recommended Video

Corona ನಿಯಂತ್ರಿಸಲು ಸರ್ಕಾರ ತೆಗೆದುಕೊಂಡ ಕಠಿಣ ನಿರ್ಧಾರ | Oneindia Kannada

English summary
Even as several countries were planning to roll out coronavirus vaccines as early as in December or January, doses of these vaccine were unlikely to available before early- or mid-2021
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X