ಭಯ ಪಡಬೇಡಿ! ಕೋವಿಡ್ ಹೊಸ ರೂಪಾಂತರಿ JN.1 ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು?
ವಿಶ್ವದಾದ್ಯಂತ ಮತ್ತೆ ಕೋವಿಡ್ 19 ಆತಂಕ ಶುರುವಾಗಿದೆ. ಕೋವಿಡ್‌ನ ಹೊಸ ರೂಪಾಂತರಿ ಜೆಎನ್.1 (JN.1) ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದ್ದು, ಭಾರತದಲ್ಲಿ ಕೂಡ ಆತಂಕಕ್ಕೆ ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಮಂಗಳವಾರ ಹೊಸ ವೈರಸ್ ಬಗ್ಗೆ ಹೇಳಿಕೆ ನೀಡಿದ್ದು, ಜನರಲ್ಲಿ ಸ್ವಲ್ಪ ನೆಮ್ಮದಿ ತರಿಸಿದೆ.
ಜೆಎನ್.1 ಕರೋನವೈರಸ್ ರೂಪಾಂತರಿಯನ್ನು ಅನ್ನು "ಆಸಕ್ತಿಯ ರೂಪಾಂತರ" ಎಂದು ಹೇಳಿರುವ ವಿಶ್ವ ಆರೋಗ್ಯ ಸಂಸ್ಥೆ, ಇದು ಸಾರ್ವಜನಿಕ ಆರೋಗ್ಯಕ್ಕೆ ಹೆಚ್ಚಿನ ಅಪಾಯವನ್ನುಂಟುಮಾಡುವುದಿಲ್ಲ ಎಂದು ಹೇಳಿದೆ.

"ಲಭ್ಯವಿರುವ ಪುರಾವೆಗಳ ಆಧಾರದ ಮೇಲೆ, ಜೆಎನ್.1 ನಿಂದ ಉಂಟಾಗುವ ಹೆಚ್ಚುವರಿ ಜಾಗತಿಕ ಸಾರ್ವಜನಿಕ ಆರೋಗ್ಯ ಅಪಾಯವನ್ನು ಪ್ರಸ್ತುತ ಕಡಿಮೆ ಎಂದು ಮೌಲ್ಯಮಾಪನ ಮಾಡಲಾಗಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಜೆಎನ್.1 ರೂಪಾಂತರಿಯನ್ನು ಹಿಂದೆ ಅದರ ಪೋಷಕ ವಂಶಾವಳಿಯ ಬಿಎ.2.86 ರ ಭಾಗವಾಗಿ ಆಸಕ್ತಿಯ ರೂಪಾಂತರವಾಗಿ ವರ್ಗೀಕರಿಸಲಾಗಿದೆ.
ಈಗಿರುವ ಲಸಿಕೆಗಳೇ ಸಾಕು
ಪ್ರಸ್ತುತ ಲಭ್ಯವಿರುವ ಲಸಿಕೆಗಳು ಜೆಎನ್.1 ಮತ್ತು ಕೋವಿಡ್-19 ವೈರಸ್‌ನ ಇತರ ಚಲಾವಣೆಯಲ್ಲಿರುವ ರೂಪಾಂತರಗಳಿಂದ ತೀವ್ರವಾದ ರೋಗ ಮತ್ತು ಸಾವಿನ ವಿರುದ್ಧ ರಕ್ಷಣೆ ನೀಡುವ ಸಾಮರ್ಥ್ಯ ಹೊಂದಿವೆ ಎಂದು ಯುನೈಟೆಡ್ ನೇಷನ್ಸ್ ಏಜೆನ್ಸಿ ಹೇಳಿದೆ.
ಏಜೆನ್ಸಿಯ ಇತ್ತೀಚಿನ ಅಧ್ಯಯನದ ಪ್ರಕಾರ, ಡಿಸೆಂಬರ್ 8 ರ ವೇಳೆಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸುಮಾರು 15% ರಿಂದ 29% ರಷ್ಟು ಪ್ರಕರಣಗಳಲ್ಲಿ ರೂಪಾಂತರಿ ಜೆಎನ್.1 ಇದೆ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಡಿಸೆಂಬರ್ ಆರಂಭದಲ್ಲಿ ಹೇಳಿದೆ.
ಪ್ರಸ್ತುತ ಚಲಾವಣೆಯಲ್ಲಿರುವ ಇತರ ರೂಪಾಂತರಗಳಿಗೆ ಹೋಲಿಸಿದರೆ ಜೆಎನ್.1 ಸಾರ್ವಜನಿಕ ಆರೋಗ್ಯಕ್ಕೆ ಹೆಚ್ಚಿನ ಅಪಾಯವನ್ನು ಪ್ರಸ್ತುತಪಡಿಸುತ್ತದೆ ಎಂಬುದಕ್ಕೆ ಪ್ರಸ್ತುತ ಯಾವುದೇ ಪುರಾವೆಗಳಿಲ್ಲ ಮತ್ತು ಹೊಸ ಲಸಿಕೆಯು ರೂಪಾಂತರದ ವಿರುದ್ಧ ಅಮೆರಿಕನ್ನರನ್ನು ರಕ್ಷಿಸುತ್ತದೆ ಎಂದು ಹೇಳಿದೆ.
ಸಿಡಿಸಿ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಅಮೆರಿಕದಲ್ಲಿ ಜೆಎನ್.1 ಅನ್ನು ಮೊದಲು ಪತ್ತೆ ಮಾಡಲಾಯಿತು. ಕೋವಿಡ್ ರೂಪಾಂತಿಯ ಏಳು ಸೋಂಕುಗಳನ್ನು ಚೀನಾ ಪತ್ತೆ ಮಾಡಿದೆ.
ಭಾರತದಲ್ಲಿ ಕೂಡ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿದ್ದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಅನ್ನು ಸಿದ್ದವಾಗಿರಿಸಿಕೊಳ್ಳಲಾಗಿದೆ. ಸೋಂಕು ಪತ್ತೆಯಾದವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಸದ್ಯ ಕೇರಳದಲ್ಲಿ ಹೊಸ ವೇರಿಯಂಟ್ ಸೋಂಕು ಪತ್ತೆಯಾಗಿದ್ದು, ಕರ್ನಾಟಕದಲ್ಲಿ ಎಚ್ಚರಿಕೆ ವಹಿಸಲಾಗಿದೆ.












Click it and Unblock the Notifications