ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವುಹಾನ್‌ನಲ್ಲಿ ಕೊರೊನಾ ಸೋಂಕಿನ ಹುಟ್ಟಿಗೆ ಕಾರಣವಾಗಿದ್ದು ಬಾವುಲಿಯಲ್ಲ, ಮೊಲ

|
Google Oneindia Kannada News

ಬೀಜಿಂಗ್,ಫೆಬ್ರವರಿ 19: ವಿಶ್ವಾದ್ಯಂತ ಲಕ್ಷಾಂತರ ಮಂದಿ ಸಾವಿಗೆ ಕಾರಣವಾದ ಕೊರೊನಾ ಸೋಂಕು ಹುಟ್ಟಿದ್ದು, ಬಾವುಲಿಯಿಂದಲ್ಲ ಮೊಲದಿಂದ ಎಂದು ಅಧ್ಯಯನ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ನೀಡಿರುವ ವರದಿಯಲ್ಲಿ ಈ ಕುರಿತು ವಿವರಿಸಲಾಗಿದೆ. ಮೊಲದಿಂದ ಮನುಷ್ಯನಿಗೆ ಸೋಂಕು ಹರಡಿದೆ ಎಂದು ಹೇಳಲಾಗಿದೆ.

ಇಡೀ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿರುವ ಮಾರಕ ಕೊರೊನಾ ವೈರಸ್ ನ ಮೂಲ ತಿಳಿಯಲು ಮೊದಲು ಸೋಂಕು ಪತ್ತೆಯಾದ ಚೀನಾದ ವುಹಾನ್ ಗೆ ತೆರಳಿರುವ ವಿಶ್ವ ಆರೋಗ್ಯ ಸಂಸ್ಥೆಯ ತಂಡ ನೀಡಿರುವ ಮಾಹಿತಿ ಮೇರೆಗೆ ಸೋಂಕು ಪ್ರಸರಣಕ್ಕೆ ಮೊಲಗಳು ಕಾರಣ ಎನ್ನುವುದು ತಿಳಿದುಬಂದಿದೆ.

ವಾಲ್ ಸ್ಟ್ರೀಟ್ ಜರ್ನಲ್ ವರದಿಯಲ್ಲೇನಿದೆ?

ವಾಲ್ ಸ್ಟ್ರೀಟ್ ಜರ್ನಲ್ ವರದಿಯಲ್ಲೇನಿದೆ?

ಈ ಕುರಿತು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದ್ದು, ತಜ್ಞರು ನೀಡಿರುವ ವರದಿಯಲ್ಲಿ ವುಹಾನ್ ನಲ್ಲಿ ಮಾರಕ ಕೊರೋನಾ ಸೋಂಕು ಪ್ರಸರಣವಾಗಲು ವುಹಾನ್ ನ ವೆಟ್ ಮಾರ್ಕೆಟ್ ನಲ್ಲಿದ್ದ ಫೆರೆಟ್ ಬ್ಯಾಡ್ಜರ್ ಗಳು ಮತ್ತು ಮೊಲಗಳು ಕಾರಣ ಎಂದು ಅಭಿಪ್ರಾಯಪಡಲಾಗಿದೆ.

ಚೀನಾದಲ್ಲಿ ಅಧ್ಯಯನ ಪೂರ್ಣಗೊಳಿಸಿದ ವಿಶ್ವ ಆರೋಗ್ಯ ಸಂಸ್ಥೆ

ಚೀನಾದಲ್ಲಿ ಅಧ್ಯಯನ ಪೂರ್ಣಗೊಳಿಸಿದ ವಿಶ್ವ ಆರೋಗ್ಯ ಸಂಸ್ಥೆ

ಕಳೆದ ವಾರ ಕೋವಿಡ್ ಸೋಂಕಿನ ಮೂಲ ಶೋಧಕ್ಕಾಗಿ ಚೀನಾಗೆ ಆಗಮಿಸಿದ್ದ ವಿಶ್ವ ಆರೋಗ್ಯ ಸಂಸ್ಥೆಯ ತಂಡ ತನ್ನ ನಾಲ್ಕು ವಾರಗಳ ಅಧ್ಯಯನವನ್ನು ಪೂರ್ಣಗೊಳಿಸಿತ್ತು. ಬಳಿಕ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ್ದ ತಂಡ ವುಹಾನ್ ವೈರಸ್ ಲ್ಯಾಬ್ ನಿಂದ್ ವೈರಸ್ ಸೋರಿಕೆಯಾಗಿಲ್ಲ. ಬದಲಿಗೆ ವುಹಾನ್ ನ ವೆಟ್ ಮಾರ್ಕೆಟ್ ನಲ್ಲಿ ಸೋಂಕು ಪ್ರಸರಣವಾದ ಕುರಿತು ಶಂಕೆ ಇದೆ. ಮಾರ್ಕೆಟ್ ಗೆ ತರಲಾಗಿದ್ದ ಬಾವಲಿಗಳಿಂದ ಸೋಂಕು ಪ್ರಸರಣವಾಗಿದೆ. ಬಾವಲಿಗಳಲ್ಲಿದ್ದ ವೈರಸ್ ಮತ್ತೊಂದು ಮಾಧ್ಯಮದ ಮೂಲಕ ಮಾನವರಿಗೆ ಹಬ್ಬಿದೆ ಎಂದು ಹೇಳಿತ್ತು.

ಈ ಎರಡು ಪ್ರಾಣಿಗಳಿಂದ ಸೋಂಕು ಹರಡಿದೆ

ಈ ಎರಡು ಪ್ರಾಣಿಗಳಿಂದ ಸೋಂಕು ಹರಡಿದೆ

ಈ ಎರಡು ಪ್ರಾಣಿಗಳ ಮೂಲಕ ವೈರಸ್ ಮಾನವರ ದೇಹ ಹೊಕ್ಕಿದೆ ಎಂದು ಹೇಳಲಾಗಿದ್ದು, ಅದಾಗ್ಯೂ ವೆಟ್ ಮಾರ್ಕೆಟ್ ಗೆ ಪೂರೈಕೆಯಾಗುತ್ತಿದ್ದ ಇತರೆ ಪ್ರಾಣಿಗಳ ಕುರಿತೂ ಅಧ್ಯಯನ ಮುಂದುವರೆದಿದ್ದು, ಮಾರುಕಟ್ಟೆಗೆ ಸರಬರಾಜಾಗುತ್ತಿದ್ದ ಸತ್ತ ಮತ್ತು ಜೀವಂತ ಪ್ರಾಣಿಗಳ ಹಿನ್ನಲೆ ಮತ್ತು ಸಂಪೂರ್ಣ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಮಿಂಕ್ ಫಾರ್ಮ್ ಕುರಿತು ಚೀನಾ ಏನು ಹೇಳಿತ್ತು

ಮಿಂಕ್ ಫಾರ್ಮ್ ಕುರಿತು ಚೀನಾ ಏನು ಹೇಳಿತ್ತು

ಇನ್ನು ಯೂರೋಪ್ ನಲ್ಲಿ ಕೋವಿಡ್ ಸೋಂಕು ಪ್ರಸರಣಕ್ಕೆ ಮಿಂಕ್ ಫಾರ್ಮ್ ಗಳು ಕಾರಣ ಎಂದು ಈ ಹಿಂದೆ ಚೀನಾ ಹೇಳಿತ್ತು. ಈ ಕುರಿತಂತೆ ಅಧ್ಯಯನ ನಡೆಸಿದ್ದ ಚೀನಾ ವಿಜ್ಞಾನಿಗಳು, ಮಾನವರು ಮತ್ತು ಮಿಂಕ್ ಗಳ ನಡುವೆ ಸೋಂಕು ಪ್ರಸರಣವಾದ ಕುರಿತು ಮಾಹಿತಿ ನೀಡಿದ್ದರು. ಹೀಗಾಗಿ ಮಿಂಕ್ ಫಾರ್ಮ್ ಗಳ ಬಗ್ಗೆಯೂ ತನಿಖೆ ನಡೆಸಬೇಕು ಎಂದೂ ಚೀನಾ ಆಗ್ರಹಿಸಿತ್ತು.

English summary
World Health Organization (WHO) experts investigating the pandemic's origins suggest that ferret badgers and rabbits, which were sold at a Wuhan market in China, could have played a role in spreading the novel coronavirus to humans, The Wall Street Journal reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X