ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ಅಲ್ಪಸಂಖ್ಯಾತರಿಗೆ ತೆರೆದ ವೈಟ್ ಹೌಸ್ ಬಾಗಿಲು

|
Google Oneindia Kannada News

ವಾಷಿಂಗ್ ಟನ್, ಆಗಸ್ಟ್, 19: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ವೈಟ್ ಹೌಸ್ ಗೆ ಲೈಂಗಿಕ ಅಲ್ಪಸಂಖ್ಯಾತರೊಬ್ಬರನ್ನು ಖಾಯಂ ಉದ್ಯೋಗಿಯಾಗಿ ಕೆಲಸಕ್ಕೆ ತೆಗೆದುಕೊಂಡಿದ್ದಾರೆ. ಲಿಂಗ ಸಮಾನತೆಯ ದೃಷ್ಟಿಯಲ್ಲಿ ಇದೊಂದು ಮಹತ್ವದ ಹೆಜ್ಜೆ ಆಗಿದ್ದು ವೈಟ್ ಹೌಸ್ ನ ಸಿಬ್ಬಂದಿ ನೇಮಕ ಪ್ರಕ್ರಿಯೆಯನ್ನು ದೃಢಪಡಿಸಿದ್ದಾರೆ.

ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟ ನಡೆಸುತ್ತಿದ್ದ ರಫಿ ಫ್ರೀಡ್ ಮೆನ್-ಗರ್ಸ್ ಪನ್ ಅವರನ್ನು ವೈಟ್ ಹೌಸ್ ನ ನಿರ್ದೇಶಕರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. ಎಲ್ಲ ಸಮುದಾಯದ ಮುಖಂಡರು ಈ ನೇಮಕವನ್ನು ಸ್ವಾಗತ ಮಾಡಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಫ್ರೀಡ್ ಮೆನ್-ಗರ್ಸ್ ಆದರ್ಶರಾಗಿ ನಿಲ್ಲಲಿದ್ದಾರೆ ಎಂದು ಹೇಳಿದ್ದಾರೆ.[ಸಲಿಂಗಿಗಳ ಮದುವೆಗೆ ಅಸ್ತು ಎಂದ ಸುಪ್ರೀಂಕೋರ್ಟ್]

White House gets first transgender full-time member of staff

ರಫಿ ಅವರ ಸಾಮಾಜಿಕ ಕೆಲಸದ ಬಗ್ಗೆ ಮೊದಲಿನಿಂದಲೂ ಗೊತ್ತಿತ್ತು. ಸ್ನೇಹಿತರೊಬ್ಬರು ಅವರ ಸಾಧನೆ ಮತ್ತು ಸವಾಲು ಎದುರಿಸಿದ ರೀತಿಯನ್ನು ತಿಳಿಸಿಕೊಟ್ಟ ಮೇಲೆ ವೈಟ್ ಹೌಸ್ ನಲ್ಲಿಯೇ ಉತ್ತಮ ಹುದ್ದೆಯೊಂದನ್ನು ನೀಡಿದ್ದೇವೆ ಎಂದು ಎನ್ ಸಿಟಿಇ ಕಾರ್ಯಕಾರಿ ನಿರ್ದೇಶಕಿ ಮಾರಾ ಕೆಯ್ಸಿಂಗ್ ತಿಳಿಸಿದ್ದಾರೆ.[ಸಲಿಂಗಕಾಮ ರೋಗ ಲಕ್ಷಣವಲ್ಲ: ಮನೋರೋಗ ವೈದ್ಯರು]

ಎಲ್ ಜಿಬಿಟಿ ಸಮುದಾಯಕ್ಕೆ ಸಮಾನತೆ ಕಲ್ಪಿಸಿಕೊಡುವ ಬಗ್ಗೆ ಬರಾಕ್ ಒಬಾಮಾ ಹಿಂದೆಯೇ ಮಾತನಾಡಿದ್ದರು. ಈಗ ಮಂಗಳಮುಖಿಯೊಬ್ಬರನ್ನು ಅಧಿಕೃತ ಸಿಬ್ಬಂದಿಯನ್ನಾಗಿ ನೇಮಕ ಮಾಡಿಕೊಂಡಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

English summary
The White House has hired the first openly transgender full time member of staff, said officials. Raffi Freedman-Gurspan, a former policy adviser at the National Center for Transgender Equality, has been appointed as an outreach and recruitment director in the White House Office of Presidential Personnel, reported CNN.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X