ಯಾವ ದೇಶ ಹೊಸ ವರ್ಷವನ್ನು ಮೊದಲ ಮತ್ತು ಕೊನೆಯದಾಗಿ ಆಚರಿಸುತ್ತದೆ?
ಹೊಸ ವರ್ಷದ ಆಚರಣೆಗೆ ಇನ್ನೇನು ಕ್ಷಣ ಗಣನೆ ಶುರುವಾಗಿದೆ. ವಿಶ್ವದೆಲ್ಲೆಡೆ ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಜನ ಕಾತುರದಿಂದ ಕಾಯುತ್ತಿದ್ದಾರೆ. ಪಾರ್ಟಿ, ಮೋಜು ಮಾಡಲು ಜನ ಉತ್ಸುಹಕರಾಗಿದ್ದಾರೆ. ಹೊಸ ವರ್ಷದ ಆಚರಣೆಯನ್ನು ಹಲವೆಡೆ ವಿವಿಧ ದಿನದಂದು ಆಚರಿಸಲಾಗುತ್ತದೆ. ಕೆಲವೆಡೆ ಡಿಸೆಂಬರ್ 31ರಂದು ರಾತ್ರಿ 12ಗಂಟೆಗೆ ಆಚರಿಸಿದೆ, ಇನ್ನೂ ಕೆಲ ಕಡೆ ಜನವರಿ 1ರಂದು ಆಚರಿಸಲಾಗುತ್ತದೆ.
ಪ್ರಪಂಚದ ಎಲ್ಲಾ ಭಾಗಗಳು ಒಂದೇ ಸಮಯದಲ್ಲಿ ಹೊಸ ವರ್ಷವನ್ನು ಆಚರಿಸುವುದಿಲ್ಲ. 2023 ರ ಕೌಂಟ್‌ಡೌನ್ ಪ್ರಪಂಚದಾದ್ಯಂತ ಮಧ್ಯರಾತ್ರಿಯ ಮೊದಲು ಪ್ರಾರಂಭವಾದರೂ, ಎಲ್ಲರೂ ಒಂದೇ ಸಮಯದಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳುವುದಿಲ್ಲ.
ವಿವಿಧ ದೇಶಗಳು ತಮ್ಮ ಸಂಪ್ರದಾಯಗಳು ಮತ್ತು ಹಬ್ಬಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಹೊಸ ವರ್ಷವನ್ನು ಮೊದಲ ಮತ್ತು ಕೊನೆಯದಾಗಿ ಆಚರಿಸುವ ದೇಶಗಳು ಇಲ್ಲಿವೆ:

ಯಾವ ದೇಶವು ಮೊದಲು ಹೊಸ ವರ್ಷವನ್ನು ಆಚರಿಸುತ್ತದೆ?
ಓಷಿಯಾನಿಯಾವು ಹೊಸ ವರ್ಷದ ಆಚರಣೆಯನ್ನು ಮೊದಲು ಆಚರಿಸುತ್ತದೆ. ಟೊಂಗಾ, ಕಿರಿಬಾಟಿ ಮತ್ತು ಸಮೋವಾಟಿನಿ ಪೆಸಿಫಿಕ್ ದ್ವೀಪ ರಾಷ್ಟ್ರಗಳು ಎಲ್ಲಾ ದೇಶಗಳಿಗಿಂತಲು ಮೊದಲು ಹೊಸ ವರ್ಷವನ್ನು ಆಚರಿಸುತ್ತವೆ. ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 10ಗಂಟೆಗೆ ಡಿಸೆಂಬರ್ 31 ರಂದು ಹಾಗೂ ಜನವರಿ 1 ರಂದು ಮಧ್ಯಾಹ್ನ 3:30ಕ್ಕೆ ಹೊಸ ವರ್ಷವನ್ನು ಆಚರಿಸಲಾಗುತ್ತದೆ.
ಯಾವ ದೇಶವು ಕೊನೆಗೆ ಹೊಸ ವರ್ಷವನ್ನು ಆಚರಿಸುತ್ತದೆ?
ಯುನೈಟೆಡ್ ಸ್ಟೇಟ್ಸ್ ಹತ್ತಿರದ ಜನವಸತಿಯಿಲ್ಲದ ದ್ವೀಪಗಳಾದ ಬೇಕರ್ ಐಲ್ಯಾಂಡ್ ಮತ್ತು ಹೌಲ್ಯಾಂಡ್ಗಳು ಹೊಸ ವರ್ಷವನ್ನು ಸ್ವಾಗತಿಸುವ ಸ್ಥಳಗಳಾಗಿವೆ. ಇಲ್ಲಿ ಆಚರಣೆಯನ್ನು ಭಾರತೀಯ ಕಾಲಮಾನದ ಪ್ರಕಾರ ಜನವರಿ 1 ರಂದು 12 pm GMT ಅಥವಾ 5:30 ಕ್ಕೆ ಆಚರಿಸಲಾಗುತ್ತದೆ.












Click it and Unblock the Notifications