ಸಂಸತ್ತಿಗೆ 44 ದಿನಗಳ ಹಸುಗೂಸಿನೊಂದಿಗೆ ಎಂಟ್ರಿಕೊಟ್ಟಿದ್ದ ಸಂಸದೆ: ಉದ್ಯೋಗಸ್ಥ ತಾಯಂದಿರಿಗೆ ಇವರೇ ಸ್ಫೂರ್ತಿ ನೋಡಿ

ಸಂಸತ್ತು ಎಂದರೇನೆ ಅಲ್ಲಿ ಚರ್ಚೆ ಭಾಷಣ ಇವೆಲ್ಲ ಇದ್ದೆ ಇರುತ್ತದೆ. ಅದರಲ್ಲೂ ಯುರೋಪಿಯನ್ ಸಂಸತ್ತು ಎಂದರೆ ಅಲ್ಲಿ ಕೇವಲ ಗಂಭೀರ ಚರ್ಚೆಗಳು, ಔಪಚಾರಿಕ ಭಾಷಣಗಳು ಹಾಗೂ ಪ್ರಮುಖ ನಿರ್ಧಾರಗಳು ಮಾತ್ರ ಇರುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, 2010ರಲ್ಲಿ ಈ ಕಟ್ಟುನಿಟ್ಟಾದ ಹಾಗೂ ಗಂಭೀರ ವಾತಾವರಣದ ನಡುವೆ ಒಂದು ಅಚ್ಚರಿಯ ಘಟನೆ ನಡೆದಿತ್ತು. ಕೇವಲ 44 ದಿನಗಳ ಹಸುಗೂಸೊಂದು ಯುರೋಪಿಯನ್ ಸಂಸತ್ತಿನೊಳಗೆ ಪ್ರವೇಶಿಸಿತ್ತು.

ಹೌದು, ಆ ದಿನ ಇಡೀ ಪ್ರಪಂಚವೇ ಆ ಪುಟ್ಟ ಮಗುವಿನತ್ತ ತಿರುಗಿ ನೋಡುವಂತೆ ಮಾಡಿದ್ದು ಇಟಲಿಯ ಮಹಿಳಾ ರಾಜಕಾರಣಿ ಲಿಚಿಯಾ ರೊಂಜುಲ್ಲಿ (Licia Ronzulli). ಈ ಘಟನೆಯು ಕೇವಲ ಒಂದು ಸುದ್ದಿಯಾಗದೆ, ವಿಶ್ವಾದ್ಯಂತ ಇರುವ ಉದ್ಯೋಗಸ್ಥ ತಾಯಂದಿರ ಜೀವನ, ಸವಾಲುಗಳು ಹಾಗೂ ಕಾರ್ಪೊರೇಟ್ ನಿರೀಕ್ಷೆಗಳ ಕುರಿತು ದೊಡ್ಡ ಮಟ್ಟದ ಚರ್ಚೆಯನ್ನೇ ಹುಟ್ಟುಹಾಕಿತ್ತು. ಈ ಘಟನೆ ಇದೀಗ ಮತ್ತೆ ವೈರಲ್‌ ಆಗುತ್ತಿದೆ.

When An Italian Politician Brought Her 44-Day-Old Baby To European Parliament The Global Lesson

ಯುರೋಪಿಯನ್ ಸಂಸತ್ತನಲ್ಲಿ ಅಂದು ನಡೆದಿದ್ದೇನು?

ಇಟಲಿಯ ಸಂಸದೆ ಲಿಚಿಯಾ ರೊಂಜುಲ್ಲಿ ಅವರು 2010ರಲ್ಲಿ ನಡೆದ ಸಂಸದೀಯ ಅಧಿವೇಶನಕ್ಕೆ ತಮ್ಮ 44 ದಿನಗಳ ಪುಟ್ಟ ಮಗಳು ವಿಟ್ಟೋರಿಯಾಳನ್ನ ಕರೆತಂದಿದ್ದರು. ಭಾಷಣಗಳು, ರಾಜಕೀಯ ಚರ್ಚೆಗಳು ನಡೆಯುವ ಜಾಗದಲ್ಲಿ ಪುಟ್ಟ ಮಗುವೊಂದರ ಅಳು ಅಥವಾ ನಗು ಕೇಳಿಸುವುದು ಸಾಮಾನ್ಯ ಸಂಗತಿಯಾಗಿರಲಿಲ್ಲ. ಆದರೆ, ಲಿಚಿಯಾ ಪಾಲಿಗೆ ಆ ದಿನ ಒಂದು ಸ್ಪಷ್ಟ ಸಂದೇಶವನ್ನ ಸಾರುವ ದಿನವಾಗಿತ್ತು.

"ನಿಮಗೆ ಕೆಲಸ ಮಾಡಲು ಒಂದು ವೃತ್ತಿ ಇದ್ದ ಮಾತ್ರಕ್ಕೆ, ನಿಮ್ಮ ವೈಯಕ್ತಿಕ ಜೀವನ ಅಥವಾ ತಾಯ್ತನ ಅಲ್ಲಿಗೆ ನಿಂತುಹೋಗುವುದಿಲ್ಲ" ಎಂಬುದನ್ನ ಅವರು ಜಗತ್ತಿಗೆ ತೋರಿಸಿಕೊಟ್ಟರು. ಅಷ್ಟೇ ಅಲ್ಲದೆ, ನಂತರದ ಹಲವು ವರ್ಷಗಳ ಕಾಲ ಪುಟ್ಟ ವಿಟ್ಟೋರಿಯಾ ತನ್ನ ತಾಯಿಯೊಂದಿಗೆ ಹಲವು ಸಂಸದೀಯ ಅಧಿವೇಶನಗಳಲ್ಲಿ ಕಾಣಿಸಿಕೊಂಡಳು. ಸಂಸತ್ತಿನ ನಾಲ್ಕು ಗೋಡೆಗಳ ನಡುವೆ ಸೆರೆಯಾದ ಆ ತಾಯಿ-ಮಗಳ ಫೋಟೋಗಳು ವಿಶ್ವಾದ್ಯಂತ ವೈರಲ್ ಆದವು.

ಇದು ಕೇವಲ ಒಂದು ಮಹಿಳೆಯ ಕಥೆಯಾಗಿರದೆ, ಪ್ರತಿಯೊಬ್ಬ ಉದ್ಯೋಗಸ್ಥ ತಾಯಿಯ ಧ್ವನಿಯಾಗಿ ಬದಲಾಯಿತು.

ವೃತ್ತಿ ಮತ್ತು ಕುಟುಂಬ: ಪೋಷಕರ ಮೇಲಿನ ಜವಾಬ್ದಾರಿಗಳು

ಮಹಿಳೆಯೊಬ್ಬಳು ತಾಯಿಯಾದ ತಕ್ಷಣ ಆಕೆ ತನ್ನ ವೃತ್ತಿಜೀವನಕ್ಕೆ, ತನ್ನ ಮಹತ್ವಾಕಾಂಕ್ಷೆಗಳಿಗೆ ವಿದಾಯ ಹೇಳಬೇಕು ಎಂಬುದು ಸಮಾಜದ ಲಿಖಿತ ನಿಯಮವಲ್ಲ. ಒಬ್ಬ ಪೋಷಕರಾಗಿ ತಮ್ಮ ವೃತ್ತಿಜೀವನಕ್ಕೆ ಶೇಕಡಾ 100ರಷ್ಟು ಬದ್ಧತೆಯನ್ನ ತೋರುತ್ತಲೇ, ತಮ್ಮ ಮಗುವಿನ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಯಾಗಿರಲು ಸಾಧ್ಯವಿದೆ ಎಂಬುದನ್ನ ಈ ಘಟನೆ ಸಾಬೀತುಪಡಿಸಿತ್ತು.

ಕಚೇರಿಯ ಹೊರಗೆ ಒಬ್ಬ ವೃತ್ತಿಪರ ವ್ಯಕ್ತಿಗೆ ತನ್ನದೇ ಆದ ಕುಟುಂಬದ ಜವಾಬ್ದಾರಿಗಳಿರುತ್ತವೆ. ಕೇವಲ ತಾಯಿಯಾದರು ಅಥವಾ ಪೋಷಕರಾದರು ಎಂಬ ಒಂದೇ ಕಾರಣಕ್ಕೆ ವೃತ್ತಿಜೀವನದಲ್ಲಿ ಸಿಗುವ ಅವಕಾಶಗಳನ್ನ, ಬೆಳವಣಿಗೆಯ ಹಾದಿಯನ್ನ ಬಿಟ್ಟುಕೊಡಬೇಕಾದ ಅನಿವಾರ್ಯತೆ ಇಲ್ಲ. ಗುರಿ ಮುಟ್ಟುವ ಛಲವಿದ್ದರೆ, ವೃತ್ತಿ ಮತ್ತು ಕುಟುಂಬ ಎರಡನ್ನೂ ಸಮಾನವಾಗಿ ನಿಭಾಯಿಸಬಹುದು.

ಬದಲಾಗಬೇಕಿದೆ ಕಾರ್ಪೊರೇಟ್ ಮನಸ್ಥಿತಿ

ಖಂಡಿತವಾಗಿಯೂ, ಪ್ರತಿಯೊಬ್ಬರಿಗೂ ತಮ್ಮ ಮಕ್ಕಳನ್ನ ಕೆಲಸದ ಸ್ಥಳಕ್ಕೆ ಕರೆತರುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಪ್ರತಿಯೊಂದು ಉದ್ಯೋಗ, ಕುಟುಂಬದ ಪರಿಸ್ಥಿತಿ ಮತ್ತು ಕೆಲಸದ ವಾತಾವರಣ ಭಿನ್ನವಾಗಿರುತ್ತದೆ. ಆದರೆ, ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಪ್ರಗತಿಯ ಹಾದಿ. ಮಹಿಳಾ ಸಬಲೀಕರಣ ಅಥವಾ ಪ್ರಗತಿ ಎಂದರೆ ಕೇವಲ ಹೊಸ ನೀತಿಗಳನ್ನ ರೂಪಿಸುವುದು ಅಥವಾ ದೊಡ್ಡ ದೊಡ್ಡ ಘೋಷಣೆಗಳನ್ನ ಮಾಡುವುದಲ್ಲ.

ಬದಲಿಗೆ, ಉದ್ಯೋಗದ ಸ್ಥಳದಲ್ಲಿ ಮಹಿಳೆಯರ ಜೀವನದ ಸವಾಲುಗಳನ್ನ ಅರ್ಥಮಾಡಿಕೊಳ್ಳುವುದು. ಕೆಲಸದ ಸ್ಥಳದಲ್ಲಿ ಗೌರವ ಪಡೆಯಲು ಹಾಗೂ ತಮ್ಮ ವೃತ್ತಿಯಲ್ಲಿ ಗುರುತಿಸಿಕೊಳ್ಳಲು, ಜನರು ತಮ್ಮ ಜೀವನದ ಜವಾಬ್ದಾರಿಗಳನ್ನು ಅಥವಾ ತಾಯ್ತನವನ್ನ ಮುಚ್ಚಿಡಬೇಕಾದ ಅಗತ್ಯವಿಲ್ಲ ಎಂಬ ಸತ್ಯವನ್ನ ವ್ಯವಸ್ಥೆ ಒಪ್ಪಿಕೊಳ್ಳಬೇಕಿದೆ. ಈ ಮನಸ್ಥಿತಿ ಬದಲಾದಾಗ ಮಾತ್ರ ಮಹಿಳೆಯರಿಗೆ ನಿಜವಾದ ಬೆಂಬಲ ಸಿಕ್ಕಂತಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+