ಬಾಂಬ್ ಗಳ ಮಹಾತಾಯಿ ಅಂದರೆ ಏನು? ವಿವರಗಳು

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಏಪ್ರಿಲ್ 14: ಅದು ಬಾಂಬ್ ನ ಹೆಗ್ಗಳಿಕೆ ಅನ್ನೋದಾದರೆ ಅಮೆರಿಕದವರು ಆಫ್ಘಾನಿಸ್ತಾನದಲ್ಲಿ ಹಾಕಿರುವುದು ಪ್ರಬಲವಾದ ಬಾಂಬ್ ಎಂಬುದರಲ್ಲಿ ದೂಸರಾ ಮಾತಿಲ್ಲ. ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳನ್ನು ಗುರಿಯಾಗಿಸಿಕೊಂಡು ಆಫ್ಘಾನಿಸ್ತಾನದಲ್ಲಿ ಅಮೆರಿಕ ಮಾಡಿದ ದಾಳಿಯಲ್ಲಿ ಬಳಸಿರುವುದು ಅಣು ಬಾಂಬ್ ಅಲ್ಲದಿರಬಹುದು. ಆದರೆ ಬಾಂಬ್ ಗಳ 'ತಾಯಿ' ಅನ್ನಿಸಿಕೊಳ್ಳುವ ಸಾವಿನ ಹಪಹಪಿ ಇರುವಂಥದ್ದು ಎಂಬುದರಲ್ಲಿ ಅನುಮಾನವಿಲ್ಲ.

ಇದರ ಹೆಸರು ಜಿಬಿಯು-43 ಅಥವಾ ಮಾಸಿವ್ ಆರ್ಡಿನೆನ್ಸ್ ಏರ್ ಬ್ಲಾಸ್ಟ್. ಇದನ್ನು ಎಲ್ಲ ಬಾಂಬ್ ಗಳ ತಾಯಿ ಅಂತಲೂ ಕರೆಯುತ್ತಾರೆ. ಇಸ್ಲಾಮಿಕ್ ಸ್ಟೇಟ್ ಉಗ್ರರು ಅಡಗಿರುವ ನಂಗರ್ ಹಾರ್ ನ ಪ್ರಾಂತ್ಯದಲ್ಲಿ ಇದನ್ನು ಎಂಸಿ-130 ವಿಮಾನದಿಂದ ಹಾಕಲಾಗಿದೆ. ಈ 'ಬಾಂಬ್ ತಾಯಿಯ' ಬಗ್ಗೆ ಮಾಹಿತಿ ಇಲ್ಲಿದೆ.[ಅಫ್ಘಾನಿಸ್ತಾನದ ಇಸ್ಲಾಮಿಕ್ ಉಗ್ರರ ಮೇಲೆ ಅಮೆರಿಕದಿಂದ ಬಾಂಬ್ ದಾಳಿ]

What we know about the

* ಈ ಬಾಂಬ್ ಅನ್ನು ಅಭಿವೃದ್ಧಿ ಪಡಿಸಿದವರು ವಾಯು ಸೇನೆ ಸಂಶೋಧನಾ ಪ್ರಯೋಗಾಲಯದ ಆಲ್ಬರ್ಟ್ ಎಲ್ ವೈಮೋರ್ಟ್ಸ್.
* ಈ ಬಾಂಬ್ ಮೊದಲು ಪರೀಕ್ಷೆ ಮಾಡಿದ್ದು 2003ರಲ್ಲಿ. ಫ್ಲೋರಿಡಾದ ಇಗ್ಲಿನ್ ವಾಯು ಸೇನಾ ನೆಲೆಯಲ್ಲಿ.

What we know about the

* ಅಣು ಬಾಂಬ್ ಹೊರತುಪಡಿಸಿದರೆ ತೀರಾ ಭಯಂಕರ ಪರಿಣಾಮ ಬೀರುವ ಬಾಂಬ್ ಇದು.
What we know about the

* ಇದು ಸ್ಫೋಟಗೊಳ್ಳುವ ಸ್ಥಳದಿಂದ ಇಪ್ಪತ್ತು ಮೈಲು ದೂರದವರೆಗೆ ಅದರ ಹೊಗೆ ಕಾಣಿಸಿಕೊಳ್ಳುತ್ತದೆ.
* ಬಾಂಬ್ ನ ತೂಕ 21,600 ಪೌಂಡ್. ಇದರ ತಯಾರಿಕೆ ವೆಚ್ಚ 16 ಮಿಲಿಯನ್ ಅಮೆರಿಕನ್ ಡಾಲರ್.
What we know about the

* ಇರಾಕ್ ಸೇನೆ ವಿರುದ್ಧ ಮಾನಸಿಕ ವಿಜಯ ಸಾಧಿಸುವ ಉದ್ದೇಶದಿಂದ ಈ ಬಾಂಬ್ ನ ರೂಪಿಸಲಾಯಿತು
* ಸದ್ದಾಂ ಹುಸೇನ್ ವಿರುದ್ಧ ಬಳಸುವ ಕಾರಣಕ್ಕಾಗಿ ರೂಪುಗೊಂಡಿತು[ಸಿರಿಯಾ ವಿರುದ್ಧ ವೈಮಾನಿಕ ದಾಳಿ, 60 ಕ್ಷಿಪಣಿ ಉಡಾಯಿಸಿದ ಅಮೆರಿಕ]
What we know about the

* ಸುಲಭಕ್ಕೆ ಗುರಿ ಮುಟ್ಟಲು ಸಾಧ್ಯವಿಲ್ಲದ ಸ್ಥಳಗಳಾದ ಗುಹೆ, ಕಂದಕಗಳನ್ನು ತಲುಪಲು ಈ ಬಾಂಬ್ ರೂಪುಗೊಂಡಿದೆ
* ಈ ಬಾಂಬ್ ನಲ್ಲಿ ಜಿಪಿಎಸ್ ಇದ್ದು, ಶತ್ರುಗಳನ್ನೇ ಗುರಿ ಮಾಡಿಕೊಂಡು ನಿಖರ, ನಿರ್ದಿಷ್ಟ ದಾಳಿ ಮಾಡಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
On Thursday, the United States of America dropped the most powerful non-nuclear bomb on Afghanistan to target a cave used by Islamic State militants. Here is what we should know about the 'Mother of all Bombs.'
Please Wait while comments are loading...