ಬ್ರಿಟನ್ನಿನ ಸಂಸದೆ ಜೋ ಕಾಕ್ಸ್ ದುರಂತ ಅಂತ್ಯ

Posted By:
Subscribe to Oneindia Kannada

ಲಂಡನ್, ಜೂನ್ 16: ಲೇಬರ್ ಪಕ್ಷದ ಸಂಸದೆ ಜೋ ಕಾಕ್ಸ್ ದುರಂತ ಅಂತ್ಯ ಕಂಡಿದ್ದಾರೆ. 41 ವರ್ಷ ವಯಸ್ಸಿನ ಕಾಕ್ಸ್ ಅವರು ತಮ್ಮ ಕ್ಷೇತ್ರವಾದ ಪಶ್ಚಿಮ ಯಾರ್ಕ್ ಶೈರ್ ನ ಬಿರ್ಸ್ಟಾಲ್ ಎಂಬಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾಗ, ದುಷ್ಕರ್ಮಿಯೊಬ್ಬನ ಗುಂಡಿಗೆ ಬಲಿಯಾಗಿದ್ದಾರೆ. ಪತಿ ಡೇವಿಡ್ ಕಾಕ್ಸ್ ಹಾಗೂ ಇಬ್ಬರು ಮಕ್ಕಳನ್ನು ಆಗಲಿದ್ದಾರೆ.

ಬಿರ್ಸ್ಟಾಲ್ ನ ಗ್ರಂಥಾಲಯ ಕಟ್ಟಡದ ಬಳಿ ಈ ಗುಂಡಿನ ದಾಳಿ ನಡೆದಿದ್ದು, ತಕ್ಷಣವೇ ಸಂಸದೆ ಜೋ ಅವರನ್ನು ಏರ್ ಆಂಬುಲೆನ್ಸ್ ಮೂಲಕ ಲೀಡ್ಸ್ ನ ಆಸ್ಪತೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

West Yorkshire: British MP Jo Cox shot and Killed

ಪ್ರತ್ಯಕ್ಷ ದರ್ಶಿ ಹಿಶೆಮ್ ಬೆನ್ ಅಬ್ದಲ್ಲಾ ಪ್ರಕಾರ, ಗುಂಡು ಹಾರಿಸಿದ ವ್ಯಕ್ತಿ 'Britain First' ಎಂದು ಘೋಷಣೆ ಕೂಗಿ ನಂತರ ಗುಂಡು ಹಾರಿಸಿದ, ಬ್ಯಾಗೊಂದರಲ್ಲಿ ಗನ್ ಇಟ್ಟುಕೊಂಡಿದ್ದ.


ಆತನ ಬಳಿ ಇದ್ದ ಗನ್ ಪ್ರಥಮ ವಿಶ್ವ ಯುದ್ಧ ಅಥವಾ ಮನೆಯಲ್ಲಿ ತಯಾರಿಸಿದ ಕಚ್ಚಾ ಗನ್ ನಂತೆ ಇತ್ತು ಎಂದಿದ್ದಾರೆ.

ಘಟನೆ ನಡೆದ ಕೆಲ ಕ್ಷಣಗಳಲ್ಲೇ ಪಶ್ಚಿಮ ಯಾರ್ಕ್ ಶೈರ್ ಪೊಲೀಸರು ಗುಂಡಿನ ದಾಳಿ ನಡೆಸಿದ 52 ವರ್ಷ ವಯಸ್ಸಿನ ಶಂಕಿತನೊಬ್ಬನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಬಿಬಿಸಿ ಈ ಬಗ್ಗೆ ಟ್ವೀಟ್ ಮಾಡಿದೆ.


ಜೋ ಕಾಕ್ಸ್ ಅವರ ಹತ್ಯೆ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಬಹುಶಃ ಯುಕೆ ವಲಸೆ ನೀತಿಯೇ ಕಾರಣ ಇರಬಹುದು ಎಂದು ಶಂಕಿಸಲಾಗಿದೆ.

ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಯುಕೆ ಪ್ರಧಾನಿ ಡೇವಿಡ್ ಕ್ಯಾಮರೂನ್ ಹಾಗೂ ಲಂಡನ್ ಮೇಯರ್ ಸಾದಿಕ್ ಖಾನ್ ಅವರು ತಮ್ಮ ಟ್ವೀಟ್ ಖಾತೆ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
West Yorkshire: British Labour party lawmaker Jo Cox (41) died after being shot and stabbed in her constituency Birstall.
Please Wait while comments are loading...