ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾಗತಿಸಿ: ಕುವೈತ್ ಕನ್ನಡ ಕೂಟ 2022ರ ಕಾರ್ಯಕಾರಿ ಸಮಿತಿ

|
Google Oneindia Kannada News

ಕುವೈಟ್: ಕಳೆದ 37 ವರ್ಷಗಳಿಂದ ಕುವೈತ್‌ನಲ್ಲಿ ಅಸ್ತಿತ್ವದಲ್ಲಿರುವ ಭಾರತದ, ಕರ್ನಾಟಕ ರಾಜ್ಯ ಮೂಲದ ಸಾಮಾಜಿಕ, ಸಾಂಸ್ಕೃತಿಕ ಸಂಘವಾದ ಕುವೈತ್ ಕನ್ನಡ ಕೂಟದ (ಕು.ಕ.ಕೂ.) ವಾರ್ಷಿಕ ಮಹಾಸಭೆಯನ್ನು ಇತ್ತೀಚಿಗೆ ನಡೆಸಲಾಯಿತು. ಕುವೈತ್ ಕನ್ನಡ ಕೂಟ (ಕು.ಕ.ಕೂ.) - 2022ರ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಪಟ್ಟಿ ಮುಂದಿದೆ.

ಮಹಾಸಭೆಯ ಜೊತೆಜೊತೆಗೆ ವಿವಿಧ ವಿನೋದಾವಳಿಯನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮವು ಮನಸೂರೆಗೊಂಡಿತು, ಸದಸ್ಯರ ಮೆಚ್ಚುಗೆಗೆ ಪಾತ್ರವಾಯಿತು. 2022ರ ಕೂಟದ ಆಡಳಿತ ಮಂಡಳಿಯಾಗಿ ಕಾರ್ಯ ನಿರ್ವಹಣೆಯನ್ನು ಮಾಡಲು ಹಾಗೂ ಮೇಲ್ವಿಚಾರಣೆ ನೆಡೆಸಲು ಹೊಸ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ರಾಜೇಶ ವಿಠ್ಠಲ್ ರವರು ಸರ್ವಾನುಮತದಿಂದ ಚುನಾಯಿತರಾದ ಸದಸ್ಯರನ್ನು ಘೋಷಿಸಿದರು.

8 ಲಕ್ಷ ಭಾರತೀಯರಿಗೆ ಕಟಂಕವಾದ ಕುವೈಟ್ Expat ಕಾನೂನು?8 ಲಕ್ಷ ಭಾರತೀಯರಿಗೆ ಕಟಂಕವಾದ ಕುವೈಟ್ Expat ಕಾನೂನು?

ಅಧ್ಯಕ್ಷರು: ಕೇಕಣಾಜೆ ಚಿನ್ಮಯ
ಉಪಾಧ್ಯಕ್ಷರು: ಉದಯ್ ಬಿ. ವರ್ಣೇಕರ್
ಪ್ರಧಾನ ಕಾರ್ಯದರ್ಶಿ: ಸುರೇಶ್ ಶ್ಯಾಮ್ ರಾವ್ ನೇರಂಬಳ್ಳಿ
ಖಜಾಂಚಿ: ನಾಳಿಯೆಂಡ ಕಾರ್ಯಪ್ಪ

ಚುನಾಯಿತರಾದ ಸದಸ್ಯರು 2022 ರ ವರ್ಷಕ್ಕೆ ಕುವೈತ್ ಕನ್ನಡ ಕೂಟದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಸಭೆಯಲ್ಲಿ ನೆರೆದ ಸದಸ್ಯರು ಅಧಿಕಾರ ಪದಗ್ರಹಣ ಮಾಡಿದ ಹೊಸ ಕಾರ್ಯಕಾರಿ ಸಮಿತಿಯವರಿಗೆ ಶುಭ ಹಾರೈಸಿದರು.

Welcome Kuwait Kannada Koota (KKK) – Executive Committee 2022

ಕುವೈತ್ ಕನ್ನಡ ಕೂಟ: ಕುವೈತಿನಲ್ಲಿ ನೆಲಸಿರುವ ಅನಿವಾಸಿ ಭಾರತೀಯರ ಸಂಘಗಳಲ್ಲಿ ಹಳೆಯ ಮತ್ತು ಪ್ರಬುದ್ಧ ಸಂಘಗಳಲ್ಲಿ ಗಣನೆಗೆ ಬರುತ್ತದೆ. ಕೆಲವೇ ಕುಟುಂಬಗಳು ಹಬ್ಬ ಹರಿದಿನಗಳಲ್ಲಿ ಒಟ್ಟಾಗಿ ಸೇರಿ ಸಂಭ್ರಮಿಸುತ್ತಿದ್ದ ಪುಟ್ಟ ಸಮಾವೇಶವಾಗಿ ಉದಯಿಸಿದ ಕುವೈತ್ ಕನ್ನಡ ಕೂಟ ಇಂದು 200 ಕ್ಕೂ ಹೆಚ್ಚು ಸದಸ್ಯಕುಟುಂಬಗಳ ಬಲವುಳ್ಳ 37 ವರ್ಷ ಹಳೆಯ ಮಹತ್ತರ ಸಂಘಟನೆಯಾಗಿ ಬೆಳೆದಿದೆ.

ರಾಷ್ಟ್ರಕವಿ ಪ್ರೊ.ಜಿ.ಎಸ್.ಶಿವರುದ್ರಪ್ಪ, ನಟ ಸಿ ಆರ್ ಸಿಂಹ, ನಾಡೋಜ ಡಾ. ನಿಸಾರ್ ಅಹ್ಮದ್, ಸಿನಿಮಾ ದಿಗ್ಗಜ ಶ್ರೀ ಗಿರೀಶ್ ಕಾಸರವಳ್ಳಿ, ಸಾಹಿತಿ ಶ್ರೀ ಜಯಂತ್ ಕಾಯ್ಕಿಣಿಯವರಲ್ಲದೇ ಮಾಹಿತಿ ತಂತ್ರಜ್ಞಾನ ದಿಗ್ಗಜ ಡಾ. ನಾರಾಯಣ ಮೂರ್ತಿ, ಶ್ರೀಮತಿ ಸುಧಾಮೂರ್ತಿ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಹಾಸ್ಯ ಮಾತುಗಾರ್ತಿ ಶ್ರೀಮತಿ ಸುಧಾ ಬರಗೂರ್ ಹೀಗೆ ಹತ್ತು ಹಲವು ನಾಡಿನ ಗಣ್ಯರು ಕುವೈತ್ ಕನ್ನಡ ಕೂಟದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ಹಬ್ಬದ ಮೆರುಗನ್ನು ಹೆಚ್ಚಿಸಿದ್ದಾರೆ,

Welcome Kuwait Kannada Koota (KKK) – Executive Committee 2022

ಪ್ರತಿ ವರ್ಷ "ದಾಸೋತ್ಸವ" ಎಂಬ ಭಕ್ತಿ ಆರಾಧನೆಯ ಕಾರ್ಯಕ್ರಮದೊಂದಿಗೆ ಚಟುವಟಿಕೆಗಳ ಸರಣಿಯನ್ನು ಪ್ರಾರಂಭಿಸುತ್ತದೆ. ರಾಜ್ಯೋತ್ಸವ ಕಾರ್ಯಕ್ರಮ ಕೂಟದ ಪ್ರಮುಖ ಕಾರ್ಯಕ್ರಮ. ಆಟೋಟಗಳ ಸ್ಪರ್ಧೆಗಳು, ಹೊರಾಂಗಣ ಮತ್ತು ಒಳಾಂಗಣ ಕ್ರೀಡಾ ಆಯೋಜನೆಗಳ ಮೂಲಕ ಕೂಟವು ಸದಸ್ಯರ ದೇಹಾರೋಗ್ಯ ಮತ್ತು ಸಹಬಾಳ್ವೆಯ ಉಲ್ಲಾಸಮಯ ವಾತವರಣಕ್ಕೆ ನಾಂದಿಹಾಡಿದರೆ, ತನ್ನದೇ ರೀತಿಯ ಸೃಜನ ಸಾಮರ್ಥ್ಯದ ಅನಾವರಣಕ್ಕೆಂದೇ ಹೊರತರುವ "ಮರಳ ಮಲ್ಲಿಗೆ" ಸಂಚಿಕೆಯ "ಮರಳ ಮಲ್ಲಿಗೆ" ದಿನಾಚರಣೆ ಕೂಟದ ಚಟುವಟಿಕೆಗಳ ವೈವಿಧ್ಯಕ್ಕೆ ಸಾಕ್ಷಿ. ವರ್ಷದ ಕೊನೆಯ ಕಾರ್ಯಕ್ರಮದಲ್ಲಿ ಹೊಸವರ್ಷ, ಕ್ರಿಸ್ಮಸ್ ಮತ್ತು ಸಂಕ್ರಾಂತಿಗಳ ಸಮ್ಮಿಶ್ರ ಕಾರ್ಯಕ್ರಮಗಳ ಆಯೋಜನೆಯ ಜೊತೆಗೆ ಸರ್ವ ಸಮ್ಮತಿಯಿಂದ ಆಯ್ಕೆಯಾಗುವ ಹೊಸ ಕಾರ್ಯಕಾರಿ ಸಮಿತಿ ಕೂಟದ ಸಾಮರಸ್ಯಕ್ಕೆ ಹಿಡಿದ ಕೈಗನ್ನಡಿ.

English summary
Kuwait Kannada Koota (KKK), a socio cultural association Karnataka state origin, existing in Kuwait for the last 37years, conducted its Annual General Body Meeting recently informed Suresh Shyam Rao Neramballi, General Secretary of Kuwait Kannada Koota with you from Kuwait.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X