ಮಾಜಿ ಪತ್ನಿಗೆ ಮರು ಮದುವೆ, ಪುಟಿನ್ ಕೂಡಾ ಸಿದ್ಧರಾದಂತೆ!

Posted By:
Subscribe to Oneindia Kannada

ಮಾಸ್ಕೋ, ಜ.27: ಜಗತ್ತಿನ ಶಕ್ತಿಶಾಲಿ ನಾಯಕರ ಪೈಕಿ ಒಬ್ಬರಾಗಿರುವ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಪುಟಿನ್ ಅವರ ಮಾಜಿ ಪತ್ನಿಗೆ ಮರು ಮದುವೆಯಾಗುವ ವಿಷಯ ತಿಳಿದ ಪುಟಿನ್ ಅವರು ತಾವು ಮದುವೆಗೆ ಸಿದ್ಧ ಎಂದಿದ್ದಾರೆ ಎಂಬ ವರದಿ ಇಲ್ಲಿದೆ.

ಆದರೆ, ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸ ಕ್ರೆಮ್ಲಿನ್ ನಲ್ಲಿದ್ದು, ಈ ಸುದ್ದಿ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಆದರೆ, ರಷ್ಯಾದ ಪತ್ರಿಕೆಗಳಲ್ಲಿ ಈ ಬಗ್ಗೆ ಗುಲ್ಲೆಬ್ಬಿದೆ.[ಪುಟಿನ್ ಭಾರತ ಭೇಟಿ ಉದ್ದೇಶವಾದರೂ ಏನು?]

Wedding on cards for Vladimir Putin?

ರಷ್ಯಾದ ಮಾಜಿ ಪ್ರಥಮ ಮಹಿಳೆ ಲಿಯುಡ್ಮಿಲಾ ಅವರು 37 ವರ್ಷ ವಯಸ್ಸಿನ ಅರ್ಥರ್ ಓಕೆರೆಟ್ನಿ ಎಂಬವರನ್ನು ಮದುವೆಯಾಗುತ್ತಿದ್ದಾರೆ. ಪುಟಿನ್ ಅವರ ರಾಜಕೀಯ ಪಕ್ಷ ಯುನೈಟೆಡ್ ರಷ್ಯಾಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಆರ್ಟ್ ಶೋ ಸೆಂಟರ್ ಕಂಪನಿಯಲ್ಲಿ ಈತ ಕಾರ್ಯನಿರ್ವಹಿಸುತ್ತಾನೆ.[ಭಾರತದಲ್ಲೇ ಎಕೆ 47 ತಯಾರಿಸಲಾಗುತ್ತದೆ, ಏಕೆ?]

ಏರ್ ಲೈನ್ ಸಂಸ್ಥೆಯೊಂದರಲ್ಲಿ ಪರಿಚಾರಕಿಯಾಗಿದ್ದ ಲಿಯುಡ್ಮಿಲಾ ಅವರು 1983ರಲ್ಲಿ ಪುಟಿನ್ ಅವರು ಮದುವೆಯಾಗಿದ್ದರು. ಎರಡು ಹೆಣ್ಣು ಮಕ್ಕಳನ್ನು ಪಡೆದಿದ್ದಾರೆ. ಜುಲೈ 2013ರಲ್ಲಿ ಪುಟಿನ್ -ಲಿಯುಡ್ಮಿಲಾ ವಿವಾಹ ವಿಚ್ಛೇದನ ಪಡೆದುಕೊಂಡರು.

ವಿವಾಹ ವಿಚ್ಛೇದನ ಪಡೆದ ಮೇಲೆ ಮತ್ತೆ ಮದುವೆಯಾಗುವುದಿಲ್ಲ ಎಂದಿದ್ದ ಪುಟಿನ್, ಒಂದು ವೇಳೆ ಲಿಯುಡ್ಮಿಲಾ ಅವರು ಮರು ಮದುವೆಯಾದರೆ ನೋಡೋನ ಎಂದಿದ್ದರು. 63 ವರ್ಷ ವಯಸ್ಸಿನ ಪುಟಿನ್ ಅವರು 30ರ ಹರೆಯ ಜಿಮ್ನಾಸ್ಟ್ ಕಬಯೆವಾ ಜೊತೆ ಬಾಂಧವ್ಯ ಹೊಂದಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಇಬ್ಬರು ಇದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Russian President Vladimir Putin may remarry soon as his ex-wife has reportedly remarried. However, the Kremlin remained tight lipped over the reported marriage of president's ex-wife.
Please Wait while comments are loading...