ಐಸಿಸ್ ಮುಖ್ಯಸ್ಥ ಅಬು ಬಕರ್ ಅಲ್ ಬಗ್ದಾದಿ ಹತ್ಯೆ?

By: ವಿಕಾಸ್ ನಂಜಪ್ಪ
Subscribe to Oneindia Kannada

ಮಾಸ್ಕೊ, ಜೂನ್ 16: ಐಸಿಸ್ ಮುಖ್ಯಸ್ಥ ಅಬು ಬಕರ್ ಅಲ್ ಬಗ್ದಾದಿಯನ್ನು ಹತ್ಯೆ ಮಾಡಿರುವುದಾಗಿ ವರದಿಗಳಿವೆ. ನಾವು ಈ ವರದಿಗಳನ್ನು ಪರಿಶೀಲಿಸುತ್ತಿದ್ದೇವೆ ರಷ್ಯಾದ ರಕ್ಷಣಾ ಇಲಾಖೆ ಹೇಳಿದೆ.

ಈ ಕುರಿತು ವರದಿ ಮಾಡಿರುವ ರಷ್ಯಾದ ಪ್ರಮುಖ ಮಾಧ್ಯಮ ರಷ್ಯಾ ಟುಡೆ, "ರಷ್ಯಾ ಮತ್ತು ಸಿರಿಯಾ ನೇತೃತ್ವದ ಪಡೆಗಳು ಐಸಿಸ್ ಉನ್ನತ ಮಟ್ಟದ ಸಭೆ ನಡೆಯುತ್ತಿದ್ದ ಪ್ರದೇಶದ ಮೇಲೆ ಮಾರ್ಚ್ 28ರಂದೇ ವೈಮಾನಿಕ ದಾಳಿ ನಡೆಸಿವೆ. ಈ ದಾಳಿಯಲ್ಲಿ ಹಲವು ಪ್ರಮುಖ ಐಸಿಸ್ ಉಗ್ರರು ಸತ್ತಿರುವುದಾಗಿ ರಷ್ಯಾ ಹೇಳಿದೆ. ಇದರಲ್ಲೇ ಐಸಿಸ್ ಮುಖ್ಯಸ್ಥ ಅಬು ಬಕರ್ ಅಲ್ ಬಗ್ದಾದಿ ಸಾವನ್ನಪ್ಪಿದ್ದಾನೆ ಎಂಬ ವರದಿಗಳಿವೆ. ನಾವು ಈ ವರದಿಯನ್ನು ಪರಿಶೀಲಿಸುತ್ತಿರುವುದಾಗಿ ರಷ್ಯಾದ ರಕ್ಷಣಾ ಇಲಾಖೆ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದೆ," ಎಂದು ವರದಿ ಮಾಡಿದೆ.

ರಷ್ಯಾದ ಈ ಹೇಳಿಕೆ ಅಂತರಾಷ್ಟ್ರೀಯ ಭಯೋತ್ಪಾದಕ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದೆ. ಹಲವು ಮಾಧ್ಯಮಗಳು ಈಗಾಗಲೇ ಬಗ್ದಾದಿ ಸಾವನ್ನಪ್ಪಿದ್ದಾನೆ ಎಂದು ವರದಿ ಮಾಡಿವೆ. ಆದರೆ ಈ ಕುರಿತು ಅಧಿಕೃತ ಪ್ರಕಟಣೆ, ಅಮೆರಿಕಾ, ಸಿರಿಯಾ, ರಷ್ಯಾ, ಇರಾಕ್ ಕಡೆಯಿಂದ ಹೊರ ಬಿದ್ದಿಲ್ಲ. ಹೀಗಾಗಿ ಇನ್ನೂ ಬಗ್ದಾದಿ ಹತ್ಯೆ ಅಧಿಕೃತವಾಗಿಲ್ಲ.

 We killed ISIS chief Bhagdadi, Russia claims

ಇತ್ತೀಚೆಗೆ ಐಸಿಸ್ ಉಗ್ರಗಾಮಿ ಸಂಘಟನೆಯ ಆಪರೇಷನ್ ಗಳಲ್ಲಿ ಅಬು ಬಕರ್ ಅಲ್ ಬಗ್ದಾದಿ ನಾಪತ್ತೆಯಾಗಿದ್ದ. ಆದರೆ ಆತ ಸತ್ತಿದ್ದಾನೆ ಎಂದು ರುಜುವಾತಾಗಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Russia has claimed that it has killed Islamic State chief Abu Bakr al-Bhagdadi. The country also said that it had killed scores of other militants. Bhagdadi has been missing in action for long.
Please Wait while comments are loading...