ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರೇ ನಾವ್ ಮಾಡುತ್ತಿರುವುದು ಯುದ್ಧವೇ ಅಲ್ಲ; ರಷ್ಯಾ ಸಚಿವರೇ ಹೀಗೆ ಹೇಳುವುದಾ!?

|
Google Oneindia Kannada News

ನವದೆಹಲಿ, ಏಪ್ರಿಲ್ 1: ಉಕ್ರೇನ್‌ನಿಂದ ಯಾವುದೇ ಬೆದರಿಕೆ ಎದುರಾಗಬಾರದು ಎನ್ನುವ ನಿಟ್ಟಿನಲ್ಲಿ ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ, ಆದರೆ ಅದನ್ನೇ ನೀವು ಯುದ್ಧ ಎಂದು ಕರೆಯುತ್ತೀರಿ ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಹೇಳಿದ್ದಾರೆ.

ಭಾರತ ಪ್ರವಾಸ ಕೈಗೊಂಡಿರುವ ರಷ್ಯಾ ವಿದೇಶಾಂಗ ಸಚಿವರು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ತದನಂತರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸೆರ್ಗೆ ಲಾವ್ರೊವ್, ಉಕ್ರೇನ್ ಮೇಲೆ ನಾವು ಯುದ್ಧವನ್ನೇ ಮಾಡುತ್ತಿಲ್ಲ ಎನ್ನುವ ಹೇಳಿಕೆ ನೀಡಿದರು.

ದುಬಾರಿ ದುನಿಯಾದಲ್ಲಿ ಭಾರತಕ್ಕೆ ಬಂಪರ್ ಆಫರ್ ನೀಡಿರುವ ರಾಷ್ಟ್ರ ಯಾವುದು?ದುಬಾರಿ ದುನಿಯಾದಲ್ಲಿ ಭಾರತಕ್ಕೆ ಬಂಪರ್ ಆಫರ್ ನೀಡಿರುವ ರಾಷ್ಟ್ರ ಯಾವುದು?

ಉಕ್ರೇನ್‌ನ ಮೇಲೆ ರಷ್ಯಾ ಯುದ್ಧವನ್ನು ನಡೆಸುತ್ತಿಲ್ಲ. ಭವಿಷ್ಯದಲ್ಲಿ ಕೀವ್ ನಮ್ಮ ಮೇಲೆ ಬೆದರಿಕೆ ಹಾಕಬಾರದು ಎನ್ನುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿತ್ತಿದ್ದೇವೆ ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಹೇಳಿದ್ದಾರೆ.

ಯುದ್ಧ ನಡೆಸುವುದು ನಮ್ಮ ಉದ್ದೇಶ ಅಲ್ಲವೇ ಅಲ್ಲ ಎಂದ ಸಚಿವ

ಯುದ್ಧ ನಡೆಸುವುದು ನಮ್ಮ ಉದ್ದೇಶ ಅಲ್ಲವೇ ಅಲ್ಲ ಎಂದ ಸಚಿವ

ರಷ್ಯಾ ನಡೆಸುತ್ತಿರುವ ಕಾರ್ಯಾಚರಣೆಯ ಗುರಿ ಒಂದೇ, ದೇಶದ ಸುರಕ್ಷತೆ ಮತ್ತು ರಕ್ಷಣೆಗೆ ಕೀವ್ ನಿಂದ ಯಾವುದೇ ಆಪತ್ತು ಬಾರದು. "ನೀವು ಅದನ್ನೇ ಯುದ್ಧ ಎಂದು ಕರೆಯುತ್ತೀರಿ. ಆದರೆ ಅದು ಸತ್ಯವಲ್ಲ. ಇದೇ ವಿಶೇಷ ಕಾರ್ಯಾಚರಣೆ ಆಗಿದ್ದು, ಸೇನಾ ಮೂಲಸೌಕರ್ಯಗಳನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ರಷ್ಯಾಗೆ ಕೀವ್ ಕಡೆಯಿಂದ ಭವಿಷ್ಯದಲ್ಲಿ ಯಾವುದೇ ಬೆದರಿಕೆಯು ಎದುರಾಗದಂತೆ ಮುನ್ನೆಚ್ಚರಿಕೆ ವಹಿಸುವುದಷ್ಟೇ ಈ ಆಕ್ರಮಣದ ಗುರಿಯಾಗಿದೆ," ಎಂದು ಸಚಿವ ಲಾವ್ರೊವ್ ಹೇಳಿದ್ದಾರೆ.

ರಷ್ಯಾ-ಉಕ್ರೇನ್ ನಡುವೆ ಭಾರತ ಮಧ್ಯಸ್ಥಿಕೆ ವಹಿಸಲಿ

ರಷ್ಯಾ-ಉಕ್ರೇನ್ ನಡುವೆ ಭಾರತ ಮಧ್ಯಸ್ಥಿಕೆ ವಹಿಸಲಿ

"ಭಾರತವು ಒಂದು ಪ್ರಮುಖ ದೇಶವಾಗಿ ಗುರುತಿಸಿಕೊಂಡಿದೆ. ಭಾರತವು ಸಮಸ್ಯೆಯ ಪರಿಹಾರವನ್ನು ಒದಗಿಸುವ ಪಾತ್ರವನ್ನು ವಹಿಸುತ್ತದೆ. ಭಾರತವು ಅಂತರರಾಷ್ಟ್ರೀಯ ಸಮಸ್ಯೆಗಳಿಗೆ ನ್ಯಾಯಯುತ ಮತ್ತು ತರ್ಕಬದ್ಧವಾದ ದೃಷ್ಟಿಕೋನವನ್ನು ಹೊಂದಿದ್ದರೆ, ಅಂತಹ ಪ್ರಕ್ರಿಯೆಯನ್ನು ನಾವು ಬೆಂಬಲಿಸುತ್ತೇವೆ. ರಷ್ಯಾ ಮತ್ತು ಉಕ್ರೇನ್ ನಡುವೆ ಸಂಧಾನ ಸಭೆಯಲ್ಲಿ ಭಾರತವು ಮಧ್ಯಸ್ಥಿಕೆ ವಹಿಸಬಹುದು," ಎಂದು ಅವರು ಹೇಳಿದರು.

ಬೈಡನ್ ಎಚ್ಚರಿಕೆ ಬಳಿಕ ಭಾರತ-ಯುಎಸ್ ಸಂಬಂಧವನ್ನು ಹದಗೆಡುವ ಅಪಾಯಬೈಡನ್ ಎಚ್ಚರಿಕೆ ಬಳಿಕ ಭಾರತ-ಯುಎಸ್ ಸಂಬಂಧವನ್ನು ಹದಗೆಡುವ ಅಪಾಯ

ರಷ್ಯಾ ಮತ್ತು ಉಕ್ರೇನ್ ನಡುವೆ ಮತ್ತೊಂದು ಸುತ್ತಿನ ಸಂಧಾನ

ರಷ್ಯಾ ಮತ್ತು ಉಕ್ರೇನ್ ನಡುವೆ ಮತ್ತೊಂದು ಸುತ್ತಿನ ಸಂಧಾನ

ಉಕ್ರೇನ್ ರಾಜಧಾನಿ ಕೀವ್ ಮತ್ತು ಚೆರ್ನಿಹಿವ್ ಬಳಿ ಸೇನಾ ಚಟುವಟಿಕೆಗಳನ್ನು ಕಡಿತಗೊಳಿಸುವುದಾಗಿ ಈಗಾಗಲೇ ಮಾಸ್ಕೋ ಹೇಳಿದೆ. ಇದರ ಬೆನ್ನಲ್ಲೇ ಉಕ್ರೇನ್ ಮತ್ತು ರಷ್ಯಾ ನಡುವಿನ ಹಗೆತನವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು ಎಂದು ಸಚಿವ ಸೆರ್ಗೆ ಲಾವ್ರೊವ್ ತಿಳಿಸಿದ್ದಾರೆ.

ಕಳೆದ ಮಾರ್ಚ್ 29ರಂದು ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆದ ಸಂಧಾನ ಸಭೆಯಲ್ಲಿ ರಷ್ಯಾ ಆಕ್ರಮಣಕ್ಕೆ ಬೆದರಿದ ಉಕ್ರೇನ್ ತಟಸ್ಥ ನಿಲುವು ತಾಳುವುದಾಗಿ ಹೇಳಿದೆ. ನಂತರ ಉಕ್ರೇನ್ ರಾಜಧಾನಿ ಕೀವ್ ಮತ್ತು ಚೆರ್ನಿಹಿವ್ ಬಳಿ ಸೇನಾ ಚಟುವಟಿಕೆಗಳನ್ನು ಕಡಿತಗೊಳಿಸುವುದಾಗಿ ಮಾಸ್ಕೋ ಹೇಳಿದೆ. ಆ ಮೂಲಕ ಮಂಗಳವಾರ ನಡೆದ ಸಂಧಾನ ಮಾತುಕತೆ ಯಶಸ್ವಿಯಾಗಿದೆ. ರಷ್ಯಾದೊಂದಿಗಿನ ಇತ್ತೀಚಿನ ಸುತ್ತಿನ ಸಂಧಾನ ಮಾತುಕತೆಗಳಲ್ಲಿ ಭದ್ರತಾ ಒಕ್ಕೂಟವನ್ನು ಸೇರುವುದರ ಬದಲಿಗೆ ತಟಸ್ಥ ನಿಲುವು ತಾಳುವುದಾಗಿ ಕೀವ್ ನಿಯೋಗವು ಪ್ರಸ್ತಾಪಿಸಿದೆ. ಅಂದರೆ ನ್ಯಾಟೋ ಸೇರಿದಂತೆ ಇತರೆ ಯಾವುದೇ ಸೇನಾ ಮೈತ್ರಿಕೂಟವನ್ನು ಸೇರುವುದಿಲ್ಲ ಅಥವಾ ಸೇನೆ ನೆಲೆಗಳನ್ನು ಆಯೋಜಿಸುವುದಿಲ್ಲ ಎಂದು ನಿಯೋಗವು ಹೇಳಿದೆ.

ರಷ್ಯಾ ದಾಳಿಯಲ್ಲಿ ಉಕ್ರೇನ್ 153 ಮಕ್ಕಳ ದುರ್ಮರಣ

ರಷ್ಯಾ ದಾಳಿಯಲ್ಲಿ ಉಕ್ರೇನ್ 153 ಮಕ್ಕಳ ದುರ್ಮರಣ

ಉಕ್ರೇನ್ ಮೇಲೆ ರಷ್ಯಾದ ಸೇನಾ ಕಾರ್ಯಾಚರಣೆ ಆರಂಭವಾಗಿದೆ ಒಂದೂವರೆ ತಿಂಗಳು ಕಳೆದಿದೆ. ಫೆಬ್ರವರಿ 24ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಸಮರ ಸಾರಿದರು. ಅಲ್ಲಿಂದ್ ಇಲ್ಲಿಯವರೆಗೆ ಉಭಯ ರಾಷ್ಟ್ರಗಳ ನಡುವೆ ದಾಳಿ-ಪ್ರತಿದಾಳಿ ನಡೆಯುತ್ತಿವೆ. ಉಕ್ರೇನಿನಲ್ಲಿ 153ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದು, 245 ಮಕ್ಕಳು ಗಾಯಗೊಂಡಿದ್ದಾರೆ. ಎರಡು ರಾಷ್ಟ್ರಗಳ ಮಧ್ಯೆ ಯುದ್ಧ ಆರಂಭವಾಗಿ 37 ದಿನಗಳೇ ಕಳೆದಿವೆ. ಆದರೆ ಈಗ ರಷ್ಯಾ ವಿದೇಶಾಂಗ ಸಚಿವರು ಮಾತ್ರ ನಾವು ಯುದ್ಧ ಮಾಡುತ್ತಿಲ್ಲ ಎನ್ನುತ್ತಿದ್ದಾರೆ.

Recommended Video

ಸಿದ್ದಗಂಗಾ ಮಠದಲ್ಲಿ ಅಪ್ಪು ಫೋಟೋ ಹಿಡಿದು ಕುಣಿದು ಕುಪ್ಪಳಿಸಿದ ಹುಡುಗರು | Oneindia Kannada

English summary
We are taking Safety measures, you just call its War; Russian Minister Lavrov reaction about Ukraine and Russia War.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X