ವಿಡಿಯೋ : ಪ್ಲಾಸ್ಟಿಕ್ ಟಬ್ ನಲ್ಲೇ ಜೀವಿಸುತ್ತಿರುವ ಯುವತಿ

By: ಸುಮಾ ಮುದ್ದಾಪುರ
Subscribe to Oneindia Kannada

ಆಕೆ ತನ್ನ ಜೀವನದ 19 ವರ್ಷದ ಜೀವನವನ್ನ ಒಂದು ಪ್ಲಾಸ್ಟಿಕ್ ಟಬ್‌ನಲ್ಲೆ ಕಳೆದಿದ್ದಾಳೆ ಅಂದ್ರೆ ನೀವು ನಂಬಲೇ ಬೇಕು. ಯಾರಿವಳು? ಟಬ್ ನಲ್ಲಿ ಏಕೆ ಜೀವಿಸುತ್ತಿದ್ದಾಳೆ? ಮುಂದೆ ಓದಿ...

ಈ ದೇಹ ಆ ದೇವರು ಕೊಟ್ಟ ಅಪರೂಪವಾದ ಒಂದು ವರ. ನಡೆದಾಡಲು ಕಾಲು, ಕೆಲಸ ಮಾಡೋಕೆ ಕೈ, ಉಸಿರಾಡೋಕೆ ಮೂಗು, ಈ ಪ್ರಕೃತಿ ಸೌಂದರ್ಯನ ನೋಡಿ ಸವಿಯೋಕೆ ಕಣ್ಣು, ಸುಮಧುರವಾದ ಶಬ್ದಗಳನ್ನು ಕೇಳಿಸಿಕೊಳ್ಳೋಕೆ ಕಿವಿ, ಇಷ್ಟಪಟ್ಟಿದ್ದನ್ನ ಹೊಟ್ಟೆ ತುಂಬಾ ತಿನ್ನೋಕೆ, ಮನಸಾರೇ ಮಾತಾಡೋಕೆ ಬಾಯಿ. ಪ್ರತಿಯೊಬ್ಬರಿಗೂ ಅಚ್ಚುಕಟ್ಟಾದ ದೇಹ. ಅಬ್ಬಾ ಅದ್ಯಾವ ಶಿಲ್ಪಿ ಕಡೆದನೋ ಈ ದೇಹವನ್ನ ಅಲ್ವಾ...?

ಇಂಥ ದೇಹವನ್ನು ನಾವು ಚೆನ್ನಾಗಿ ನೋಡಿಕೊಬೇಕು ಕಣ್ರೀ.. ಯಾಕೆಂದ್ರೆ ಮನುಷ್ಯನನ್ನು ಸೇರಿ ಇಡೀ ಜಗತ್ತಿನಲ್ಲಿ ಮಿಲಿಯನ್ ಗಟ್ಟಲೇ ಪ್ರಾಣಿಗಳಿವೆ. ಆದ್ರೆ ಮನುಷ್ಯನಿಗೆ ಮಾತ್ರ ಇವೆಲ್ಲ ಅಚ್ಚುಕಟ್ಟಾಗಿ ಇರೋದು.

ಇಲ್ಲಿ ಶ್ರೀಮಂತ ಬಡವ ಅನ್ನೋ ಭೇದ ಭಾವಗಳು ಮನುಷ್ಯನಿಗೆ ಇವೆ ನಿಜ. ಆದರೆ ಆ ದೇವರಿಗೆ ಇಲ್ಲ. ಅದಕ್ಕೆ ಅವನು ಬಡವನಾದರೂ, ಶ್ರೀಮಂತನಾದ್ರೂ ಇಬ್ಬರಿಗೂ ಎರಡೇ ಕಾಲು, ಎರಡೇ ಕೈ, ಎರಡು ಕಣ್ಣು, ಒಂದೇ ಮೂಗು, ಒಂದೇ ಬಾಯಿ ಕೊಟ್ಟಿರೋದು.

ಹೀಗೆ ಎಲ್ಲಾ ಸರಿಯಾಗಿರುವ ದೇಹದಲ್ಲಿ ಏನಾದರೊಂದು ಊನ ಉಂಟಾದರೆ ಎಷ್ಟು ಕಷ್ಟವಾಗುತ್ತೆ ಅಂದ್ರೆ ಅದರ ಯಾತನೆ ದೇಹ ಊನ ಇದ್ದವರಿಗೇ ಗೊತ್ತು. ಕೈ ಇಲ್ಲದೇ, ಕಾಲಿಲ್ಲದೇ ಹುಟ್ಟಿದವರನ್ನ ನೀವು ನೋಡಿರ್ತೀರಿ.

ಅಂತಹವರ ಪರಿಸ್ಥಿತಿ ನೋಡಿದ್ರೆ ಅಯ್ಯೋ ಅನ್ಸುತ್ತೆ. ಆದ್ರೆ ಇಲ್ಲೊಬ್ಬ ಯುವತಿಗೆ ಅರ್ಧ ದೇಹವೇ ಇಲ್ಲ. ಆದ್ರೂ ಆಕೆ ಬದುಕಿದ್ದಾಳೆ. ಆಕೆ ಜೀವಂತವಾಗಿದ್ದು, ಮನೆಗಳಲ್ಲಿ ನಾವು ಬಳಸೋ ಪ್ಲಾಸ್ಟಿಕ್ ಟಬ್‌ನಲ್ಲಿ ಜೀವನ ನಡೆಸುತ್ತಿದ್ದಾಳೆ.

ಅರೇ ಏನಿದು ಅಂತ ಆಶ್ಚರ್ಯವಾಗ್ತಾ ಇದ್ಯಾ...?

ಅರೇ ಏನಿದು ಅಂತ ಆಶ್ಚರ್ಯವಾಗ್ತಾ ಇದ್ಯಾ...?

ಅರೇ ಏನಿದು ಅಂತ ಆಶ್ಚರ್ಯವಾಗ್ತಾ ಇದ್ಯಾ...? ಹೌದು ನಿಮಗಿದು ಆಶ್ಚರ್ಯವಾದ್ರೂ ಇದು ಸತ್ಯ. ನೈಜಿರಿಯಾದ ಕನೋ ಎನ್ನುವ ಪ್ರಾಂತ್ಯದಲ್ಲಿ 19 ವರ್ಷದ ಅರ್ಧ ದೇಹ ಬೆಳವಣಿಗೆಯಾಗದ ರಹ್ಮಾ ಹರುನಾ ಎಂಬ ಯುವತಿ ಇದ್ದಾಳೆ. ಆಕೆ ತನ್ನ 19ವರ್ಷದ ಜೀವನವನ್ನ ಒಂದು ಪ್ಲಾಸ್ಟಿಕ್ ಟಬ್‌ನಲ್ಲೆ ಕಳೆದಿದ್ದಾಳೆ ಅಂದ್ರೆ ನೀವು ನಂಬಲೇ ಬೇಕು.

 ಹುಟ್ಟಿದ ಆರು ತಿಂಗಳ ನಂತರ ಬೆಳವಣಿಗೆ ನಿಂತು ಹೋಯ್ತು

ಹುಟ್ಟಿದ ಆರು ತಿಂಗಳ ನಂತರ ಬೆಳವಣಿಗೆ ನಿಂತು ಹೋಯ್ತು

ರಹ್ಮಾ ಹುರಿನಾ ಹುಟ್ಟಿದ ಆರು ತಿಂಗಳವರೆಗೂ ಆರೋಗ್ಯವಾಗೇ ಇದ್ದಳು. ತದನಂತರ ಆಕೆಯ ದೇಹದ ಅರ್ಧ ಭಾಗ ಬೆಳವಣಿಗೆಯೇ ಆಗಿಲ್ಲ. ರಹ್ಮಾ ದೇಹ ಬೆಳವಣಿಗೆ ಹೊಂದಿರೋದು ಬರೀ ತಲೆಯಲ್ಲಿ ಮಾತ್ರ.

ದೇಹಕ್ಕೆ ಇನ್ನೂ 6 ತಿಂಗಳ ಮಗು ಪ್ರಾಯ

ದೇಹಕ್ಕೆ ಇನ್ನೂ 6 ತಿಂಗಳ ಮಗು ಪ್ರಾಯ

ಇನ್ನು ಮಿಕ್ಕ ಸೊಂಟದ ಕೆಳಭಾಗ ಆಕೆ 6 ತಿಂಗಳ ಮಗುವಾಗಿದ್ದಾಗ ಹೇಗೆ ಇತ್ತೋ ಹಾಗೇ ಉಳಿದು ಬಿಟ್ಟಿದೆ. ಆಕೆಯ ಸ್ಥಿತಿಯನ್ನ ಕಂಡು ಆಕೆಯ ಕುಟುಂಬ ಕಣ್ಣೀರಲ್ಲಿ ಕೈತೊಳಿತಾ ಇದೆ...

ವೈದ್ಯರು ಕೈ ಚೆಲ್ಲಿದ ಮೇಲೆ

ವೈದ್ಯರು ಕೈ ಚೆಲ್ಲಿದ ಮೇಲೆ

ಕುಟುಂಬದವರು ರಹ್ಮಾಳನ್ನ ಅದೇಷ್ಟೋ ವೈದರ ಬಳಿ ಚಿಕಿತ್ಸೆಗಾಗಿ ತೋರಿಸಿದ್ದಾರೆ. ಆದರೆ ಹಣ ಮಾತ್ರ ನೀರಿನಂತೆ ಖರ್ಚಾಗಿದ್ದು ಬಿಟ್ಟರೇ ಆಕೆಯ ಸ್ಥಿತಿ ಮಾತ್ರ ಹಾಗೇ ಇದೆ. ವೈದ್ಯರು ಕೈ ಚೆಲ್ಲಿದ ಮೇಲೆ ಇದು ದೇವರ ಶಾಪ ಎಂದು ಕುಟುಂಬ ನಂಬಿದೆ.


ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A 19 year old girl Rahma Haruna born without limbs lives her life in a plastic bowl. Rahma’s family in Kano, Nigeria do their best to provide her with a fulfilling life and transport her around the village in a plastic bowl.
Please Wait while comments are loading...