ಬಾಲಿಯ ಅಗಂಗ್ ಪರ್ವತದಲ್ಲಿ ಜ್ವಾಲಾಮುಖಿ, ಸಾವಿರಾರು ಮಂದಿ ಸ್ಥಳಾಂತರ

Posted By:
Subscribe to Oneindia Kannada
   ಬಾಲಿಯ ಅಗಂಗ್ ಪರ್ವತದಲ್ಲಿ ಜ್ವಾಲಾಮುಖಿ | Oneindia Kannada

   ಇಂಡೋನೇಷ್ಯಾದ ದ್ವೀಪ ಬಾಲಿಗೆ ಪ್ರವಾಸ ಹೋಗುವ ಇರಾದೆಯಲ್ಲಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ಅಲ್ಲಿನ ಅಗಂಗ್ ಪರ್ವತದಲ್ಲಿ ಜ್ವಾಲಾಮುಖಿ ಹೆಚ್ಚಾಗಿದ್ದು, ಬೂದಿಯುಗುಳುತ್ತಿದೆ. ಪರಿಸ್ಥಿತಿ ತೀರಾ ಗಂಭೀರವಾಗಿರುವುದರಿಂದ ಅಲ್ಲಿನ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಸಾವಿರಾರು ಪ್ರವಾಸಿಗರನ್ನು ಅಲ್ಲಿಂದ ಸ್ಥಳಾಂತರ ಮಾಡಲಾಗುತ್ತಿದೆ.

   2018ರಲ್ಲಿ ಭೂಕಂಪದ ಭಯೋತ್ಪಾದನೆಗೆ ತತ್ತರಿಸಲಿದೆ ಬುವಿ

   ಬಾಲಿ ದ್ವೀಪ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಳ ಹೆಸರುವಾಸಿ. ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ. ಕಳೆದ ಸೆಪ್ಟೆಂಬರ್ ನಿಂದ ಅಗಂಗ್ ಪರ್ವತದಲ್ಲಿ ಜ್ವಾಲಾಮುಖಿ ಪ್ರಮಾಣ ಹೆಚ್ಚಾಗಿದೆ. ನವೆಂಬರ್ 21ರಿಂದ ಪರ್ವತದಿಂದ ಹೊಗೆ ಹಾಗೂ ಬೂದಿ ಕಾಣಿಸಿಕೊಳ್ಳುವುದು ತುಂಬ ಹೆಚ್ಚಾಗಿದೆ.

   volcano in Bali, Indonesia, is erupting and spewing ash

   ಆಕಾಶದೆತ್ತರಕ್ಕೆ ಹೊಗೆ ಕಾಣಿಸಿಕೊಂಡಿದ್ದು, ಇಂಡೋನೇಷ್ಯಾ ಸರಕಾರ ಎಚ್ಚರಿಕೆಯನ್ನು ನೀಡಿದೆ. 1963ರಲ್ಲಿ ಪರ್ವತದಲ್ಲಿ ಜ್ವಾಲಾಮುಖಿ ಕಾಣಿಸಿಕೊಂಡು, ದ್ವೀಪದಲ್ಲಿ 1600 ಮಂದಿ ಮೃತಪಟ್ಟಿದ್ದರು. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಪರ್ವತದ ಸಮೀಪ ವಾಸವಿರುವವರನ್ನು ಸಮರೋಪಾದಿಯಲ್ಲಿ ಸ್ಥಳಾಂತರ ಮಾಡಲಾಗುತ್ತಿದೆ.

   ವೈರಲ್ ವಿಡಿಯೋ: ಇರಾನ್-ಇರಾಕ್ ಭೀಕರ ಭೂಕಂಪದ ಎದೆನಡುಗಿಸುವ ದೃಶ್ಯ

   ಈ ದ್ವೀಪದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಿದ್ದು, ಪರ್ವತದಲ್ಲಿ ಕಾಣಿಸಿಕೊಂಡಿರುವ ಜ್ವಾಲಾಮುಖಿಯ ಪ್ರಮಾಣ ಕಡಿಮೆ ಆಗಲಿ ಎಂದು ಸ್ಥಳೀಯರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   volcano in Bali, Indonesia, is erupting and spewing ash, forcing the closure of the island's main airport and the evacuation of thousands of residents.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ