Job for Nanny: ಮಕ್ಕಳನ್ನು ನೋಡಿಕೊಳ್ಳಲು ಅಜ್ಜಿ ಬೇಕಾಗಿದ್ದಾರೆ: ಸಂಬಳ 80 ಲಕ್ಷಕ್ಕಿಂತ ಹೆಚ್ಚು-ಯುಎಸ್ ಉದ್ಯಮಿ ನೀಡಿದ ಜಾಹೀರಾತು
ಅಮೆರಿಕಾದಲ್ಲಿರುವ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಅವರು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ದಾದಿಯನ್ನು ಹುಡುಕುತ್ತಿದ್ದಾರೆ. ಈ ಬಗ್ಗೆ ಅವರು ಜಾಹೀರಾತನ್ನು ನೀಡಿದ್ದಾರೆ.
ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಅವರು ಅಮೆರಿಕದ ರಿಪಬ್ಲಿಕನ್ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರು. 2015ರಲ್ಲಿ ಅವರು ಅಪೂರ್ವ ಟಿ ರಾಮಸ್ವಾಮಿ ಅವರನ್ನು ವಿವಾಹವಾದರು. ರಾಮಸ್ವಾಮಿ ದಂಪತಿಗೆ ಈಗ ಇಬ್ಬರು ಗಂಡು ಮಕ್ಕಳಿದ್ದಾರೆ. ಇತ್ತೀಚೆಗೆ ರಾಮಸ್ವಾಮಿ ಅವರು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ದಾದಿ (ಅಜ್ಜಿ) ಬೇಕಾಗಿದ್ದಾರೆ ಎಂದು ಜಾಹೀರಾತು ನೀಡಿದ್ದಾರೆ. ಇದಕ್ಕಾಗಿ ಅವರು 80 ಲಕ್ಷಗಳು ಅಥವಾ ಅದಕ್ಕಿಂತ ಹೆಚ್ಚು ವೇತನವನ್ನು ನೀಡುತ್ತಿದ್ದಾರೆ.

EstateJobs.com ಎಂಬ ವೆಬ್‌ಸೈಟ್‌ನಲ್ಲಿ ರಾಮಸ್ವಾಮಿ ಅವರು ಜಾಹೀರಾತು ನೀಡಿದ್ದಾರೆ. ನಮ್ಮ ಕುಟುಂಬದಲ್ಲಿ ಒಬ್ಬರಾಗುವಂತ ಕಾಳಜಿ, ಮಮತೆ, ಪ್ರೀತಿ, ವಿಶ್ವಾಸ ಹೊಂದಿರುವ ಮಹಿಳೆ ಅರ್ಜಿ ಸಲ್ಲಿಸಬಹುದು. ಕೆಲಸಕ್ಕಾಗಿ ಬರುವವರು ವಾರಕ್ಕೆ 84 ರಿಂದ 96 ಗಂಟೆಗಳವರೆಗೆ ಕೆಲಸ ಮಾಡಬೇಕಾಗುತ್ತದೆ. ಆಯ್ಕೆಯಾದ ಅಜ್ಜಿ ವಾರದಲ್ಲಿ ಒಂದು ದಿನ ರಜೆ ಪಡೆಯುತ್ತಾರೆ.
ಅವರು ಮಕ್ಕಳಿಗೆ ನಿರಂತರ ದೈನಂದಿನ ದಿನಚರಿಯನ್ನು ಒದಗಿಸಬೇಕು. ಅವರೊಂದಿಗೆ ಒಬ್ಬ ಬಾಣಸಿಗ, ಮನೆಗೆಲಸಗಾರ ಮತ್ತು ಖಾಸಗಿ ಭದ್ರತೆಯನ್ನು ಒಳಗೊಂಡಂತೆ ಮೀಸಲಾದ ತಂಡ ಇರುತ್ತದೆ. ಈ ತಂಡದ ಸಹಾಯದೊಂದಿಗೆ ಅಜ್ಜಿ ಮಕ್ಕಳನ್ನು ನೋಡಿಕೊಳ್ಳಬೇಕು ಎಂದು ಖಾಲಿ ಹುದ್ದೆಯ ಸ್ಪಷ್ಟಣೆಯ ಜಾಹೀರಾತಿನಲ್ಲಿ ನೀಡಲಾಗಿದೆ. ಇಷ್ಟೇ ಅಲ್ಲ ಆಯ್ಕೆಯಾದ ಮಹಿಳೆ ಮಕ್ಕಳ ಮನರಂಜನೆ ಮತ್ತು ಕ್ರೀಡೆಗಳ ಸಂಪೂರ್ಣ ಕಾಳಜಿ ವಹಿಸಬೇಕು.
ಈ ಜಾಹೀರಾತು ನೀಡಿದವರು ಯಾರೆಂದು ಬಹಿರಂಗಪಡಿಸಲಾಗಿಲ್ಲ. ಆದರೆ ಖಾಲಿ ಹುದ್ದೆಯಲ್ಲಿ ಬರೆದಿರುವ ಎಲ್ಲಾ ವಿವರಗಳು ವಿವೇಕ್ ರಾಮಸ್ವಾಮಿ ಅವರ ಕುಟುಂಬದ ಕಡೆಗೆ ಸೂಚಿಸುತ್ತವೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ. ಸದ್ಯ ವಿವೇಕ್ ಬಹಿಯೊ ರಾಜ್ಯದ ಸಿನ್ನಿನಾಟಿಯಲ್ಲಿ ನೆಲೆಸಿದ್ದಾರೆ. ವಿವೇಕ್ ರಾಮಸ್ವಾಮಿ ಅವರ ಪೂರ್ವಜರು ತಮಿಳು ಹಿನ್ನೆಲೆಯ ಕೇರಳದವರು. ವಿವೇಕ್ ಅವರು ಅಮೆರಿಕದಲ್ಲಿ ಔಷಧಿ ಉದ್ಯಮದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿದ್ದಾರೆ.
2024 ರ ಚುನಾವಣೆಯಲ್ಲಿ ಜೋ ಬಿಡೆನ್ ಅವರನ್ನು ಎದುರಿಸಲು ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ವಿವೇಕ್ ರಾಮಸ್ವಾಮಿ ಮುಂಚೂಣಿಯಲ್ಲಿದ್ದಾರೆ.
ಅಮೆರಿಕದ ಪೌರತ್ವದ ಬಗೆಗಗಿನ ವಿಚಾರದಲ್ಲಿ ಕೋಲಾಹಲ ಸೃಷ್ಟಿಸಿದ ವಿವೇಕ್
ರಿಪಬ್ಲಿಕನ್ ಪಕ್ಷದೊಳಗೆ ಅಧ್ಯಕ್ಷೀಯ ರೇಸ್‌ಗೆ ಸೇರಲು ಅಭ್ಯರ್ಥಿಗಳ ನಡುವೆ ಪೈಪೋಟಿ ಇದೆ. ರಿಪಬ್ಲಿಕನ್ ಪಕ್ಷದ ಚರ್ಚೆಯಲ್ಲಿ ಅಧ್ಯಕ್ಷೀಯ ಉಮೇದುವಾರಿಕೆಯ ಮುಂಚೂಣಿಯಲ್ಲಿರುವ ವಿವೇಕ್ ರಾಮಸ್ವಾಮಿ ಅವರು ಅಮೆರಿಕದಲ್ಲಿ ಸಾಕಷ್ಟು ಕೋಲಾಹಲವನ್ನು ಸೃಷ್ಟಿಸಿದ್ದಾರೆ. ಅಕ್ರಮ ವಲಸಿಗರ ಮಕ್ಕಳಿಗೆ 'ಹುಟ್ಟಿನಿಂದ ಅಮೆರಿಕದ ಪೌರತ್ವ' ಎಂಬ ನಿಯಮವನ್ನು ರದ್ದುಗೊಳಿಸುವುದನ್ನು ಪ್ರತಿಪಾದಿಸಿದ್ದಾರೆ.












Click it and Unblock the Notifications