Video: ಓಮನ್ ಬೀಚ್‌ನಲ್ಲಿ ಮಕ್ಕಳೊಂದಿಗೆ ಕೊಚ್ಚಿಕೊಂಡು ಹೋದ ಭಾರತೀಯ ವ್ಯಕ್ತಿ!

ನವದೆಹಲಿ, ಜುಲೈ 13: ಕ್ಷಣಮಾತ್ರದ ಸಂತೋಷ ಬದುಕಿನ ಖುಷಿಯನ್ನೇ ಕಿತ್ತುಕೊಳ್ಳಬಹುದು ಎಂಬುದಕ್ಕೆ ನಮ್ಮ ಕೆಣ್ಣೆದುರಿಗೆ ಸಾಕಷ್ಟು ಉದಾಹರಣೆಗಳು ಸಿಗುತ್ತದೆ. ಅಂಥದ್ದೇ ಒಂದು ಘಟನೆಯನ್ನು ಸಾರಿ ಹೇಳುವ ವಿಡಿಯೋ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಮುದ್ರ ತೀರದಲ್ಲಿ ಉಕ್ಕಿ ಬರುವ ಅಲೆಗಳಿಗೆ ಎದೆಯೊಡ್ಡಿ ನಿಲ್ಲುವ ಜನರು, ಅವರನ್ನೇ ಎಳೆದುಕೊಂಡು ಹೋಗುವ ವೇಗದಲ್ಲಿ ನುಗ್ಗಿ ಬರುವ ಸಮುದ್ರದ ಅಲೆಗಳು. ಈ ಅಲೆಗಳ ಹೊಡೆತಕ್ಕೆ ಸಿಲುಕಿ ತೇಲುತ್ತಾ ಸಮುದ್ರದಲ್ಲಿ ಮರೆಯಾಗುವ ಪ್ರವಾಸಿಗರು. ಇಂಥದೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಮಾಡುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿ ಸದ್ದು ಮಾಡಿದ ಆ ವಿಡಿಯೋದಲ್ಲಿ ಕೊಚ್ಚಿ ಹೋದವರು ಭಾರತೀಯ ಮೂಲದವರೇ ಎಂಬುದು ಇದೀಗ ಗೊತ್ತಾಗಿದೆ. ಓಮನ್ ಬೀಚ್‌ನಲ್ಲಿ ಕೊಚ್ಚಿಕೊಂಡು ಹೋಗಿರುವವರ ಕುರಿತು ಮಾಹಿತಿಯನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

Viral Video: Indian Man and 2 Children Swept Away On Oman Beach

ಸಮುದ್ರದಲ್ಲಿ ಕೊಚ್ಚಿ ಹೋದ ಮಹರಾಷ್ಟ್ರದ ವ್ಯಕ್ತಿ: ಓಮನ್‌ನ ಸಮುದ್ರ ತೀರದಲ್ಲಿ ಆಟವಾಡುತ್ತಿದ್ದ ಮಹಾರಾಷ್ಟ್ರದ ವ್ಯಕ್ತಿ ಮತ್ತು ಆತನ ಆರು ವರ್ಷದ ಮಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ವ್ಯಕ್ತಿಯ ಒಂಬತ್ತು ವರ್ಷದ ಮಗಳು ಕೂಡ ಕಾಣೆಯಾಗಿದ್ದು, ಆಕೆಗಾಗಿ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಶಶಿಕಾಂತ್ ಮ್ಮಾನೆ (42), ಅವರ ಪತ್ನಿ ಮತ್ತು ಮಕ್ಕಳಾದ ಶ್ರುತಿ (9) ಮತ್ತು ಶ್ರೇಯಸ್ (6) ದುಬೈನಲ್ಲಿ ವಾಸಿಸುತ್ತಿದ್ದು, ಒಂದು ದಿನದ ಪ್ರವಾಸಕ್ಕಾಗಿ ಭಾನುವಾರ ನೆರೆಯ ಒಮಾನ್‌ಗೆ ತೆರಳಿದ್ದರು ಎಂಜು ಅವರ ಸಹೋದರ ಹೇಳಿದ್ದಾರೆ.

ಮತ್ತೊಬ್ಬ ಪ್ರವಾಸಿಗರು ತೆಗೆದ ಘಟನೆಯ ವಿಡಿಯೋದಲ್ಲಿ ಶೃತಿ ಮತ್ತು ಶ್ರೇಯಸ್ ನೀರಿನಲ್ಲಿ ಆಟವಾಡುತ್ತಿದ್ದಾಗ ಬಲವಾದ ಅಲೆಯ ಹೊಡೆತಕ್ಕೆ ಸಿಲುಕಿದ್ದಾರೆ. ಅವರನ್ನು ಉಳಿಸುವ ಪ್ರಯತ್ನದಲ್ಲಿ ಅವರ ತಂದೆ ನೀರಿನಲ್ಲಿ ಹಿಂಬಾಲಿಸಿದರು, ಆದರೆ ಉಳಿಸುವುದಕ್ಕಾಗಿ ಹಿಂಬಾಲಿಸಿದ ಶಶಿಕಾಂತ್ ಮುಳುಗಿದರು ಎಂದು ಗೊತ್ತಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+