Video: ಉಕ್ರೇನ್ ನೆಲದ ಈ ದೃಶ್ಯ ನೋಡಿದ್ರೆ ಕಣ್ಣೀರು ಕಪಾಳಕ್ಕೆ ಬರುತ್ತೆ!
ಕೀವ್, ಮಾರ್ಚ್ 8: ಅಮ್ಮನ ಮಡಿಲು ಇಲ್ಲ, ಅಪ್ಪನ ಹೆಗಲೂ ಇಲ್ಲ. ಪುಟ್ಟ ಮಗುವಿನ ಮನಸಿನ ಹೋಯ್ದಾಟವನ್ನು ಕೇಳಿಸಿಕೊಳ್ಳುವವರೂ ಯಾರಿಲ್ಲ. ಯಾವಾಗ ಏನಾಗುತ್ತೋ ಎನ್ನುವ ಆತಂಕದ ನಡುವೆ ಯುದ್ಧ ಭೂಮಿಯಲ್ಲಿ ಏಕಾಂಗಿಯಾಗಿ ನಡೆದುಕೊಂಡು ಹೋಗುತ್ತಿರುವ ಮಗುವಿನ ವೇದನೆಗೆ ಇದೊಂದು ದೃಶ್ಯ ಸಾಕ್ಷಿ ಆಗಿ ನಿಲ್ಲುತ್ತದೆ.
ಯುದ್ಧ ಎಂದರೆ ವಿನಾಶ. ಅನಾದಿ ಕಾಲದಿಂದಲೂ ನಡೆದ ಘಟನೆಗಳಿಂದ ಬುದ್ಧಿ ಕಲಿಯದ ರಷ್ಯಾ, ಉಕ್ರೇನ್ ನೆಲದಲ್ಲಿ ರಾಕ್ಷಸನಂತೆ ವರ್ತಿಸುತ್ತಿದೆ. ಪುಟಿನ್ ಅಧಿಕಾರದಾಹಕ್ಕೆ ಪುಟ್ಟ ಮಕ್ಕಳು, ಮಹಿಳೆಯರು, ವೃದ್ಧರು ಅನಾಥರಾಗಿ ಬೀದಿಯಲ್ಲಿ ನಿಲ್ಲುವಂತ ದುಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ.
Heart breaking 😥 #UkraineRussiaWar #Poland pic.twitter.com/XGG2eoLd9Y
— Jeeva Bharathi (@sjeeva26) March 9, 2022
ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧವು 14ನೇ ದಿನಕ್ಕೆ ಕಾಲಿಟ್ಟಿದೆ. ವೈಮಾನಿಕ ದಾಳಿ, ಶೆಲ್ ದಾಳಿ, ಬಾಂಬ್ ದಾಳಿ ಹಾಗೂ ಬಂದೂಕಿನಿಂದ ಸಿಡಿಯುವ ಗುಂಡಿನ ಸುರಿಮಳೆಗೆ ಅದೆಷ್ಟೋ ಜೀವಗಳು ನೆಲದ ನಂಟನ್ನೇ ಕಳೆದುಕೊಂಡು ಉಸಿರು ಚೆಲ್ಲಿವೆ.

ಕಣ್ಣೀರು ಹಾಕುತ್ತಾ ಹೆಜ್ಜೆ ಹಾಕಿದ ಪುಟ್ಟ ಬಾಲಕ:
ರಷ್ಯಾ ನಡೆಸಿದ ಯುದ್ಧದಿಂದ ಉಕ್ರೇನ್ ನೆಲದಲ್ಲಿ ನರಕ ಸದೃಶ್ಯ ಸ್ಥಿತಿ ನಿರ್ಮಾಣವಾಗಿದೆ. ತಂದೆ-ತಾಯಿ ಮತ್ತು ಕುಟುಂಬ ಸದಸ್ಯರನ್ನು ಕಾಣದ ಪುಟ್ಟ ಬಾಲಕನೊಬ್ಬ ನಡುರಸ್ತೆಯಲ್ಲಿ ಕಣ್ಣೀರು ಹಾಕುತ್ತಾ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದರ ಮಧ್ಯೆ ರಷ್ಯಾ ಸೇನೆಯು ತನ್ನ ದಾಳಿಯನ್ನು ಮುಂದುವರಿಸಿದ್ದು, ಪೂರ್ವ ಉಕ್ರೇನ್‌ನ ಸೆವೆರೊಡೊನೆಸ್ಟ್ಕ್‌ನ ಪಟ್ಟಣದಲ್ಲಿ ರಷ್ಯಾದ ಮಿಲಿಟರಿ ದಾಳಿಯಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications