ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಢೀರ್ ಭೀಕರ ಭೂಕಂಪ: ನಡುಗಿದ ತೈವಾನ್- ಸುನಾಮಿ ಎಚ್ಚರಿಕೆಗೆ ಜನ ತಲ್ಲಣ!

|
Google Oneindia Kannada News

ತೈವಾನ್‌ನ ಆಗ್ನೇಯ ಕರಾವಳಿಯಲ್ಲಿ ಭಾನುವಾರ 6.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ವರದಿ ಮಾಡಿದೆ. ಪ್ರಬಲ ಭೂಕಂಪನದ ಪರಿಣಾಮವಾಗಿ ಜಪಾನ್ ನಲ್ಲಿ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ಆರಂಭದಲ್ಲಿ 7.2 ತೀವ್ರತೆಯಲ್ಲಿ ಕಂಪಿಸಿದ ಭೂಮಿ ಬಳಿಕ 6.9 ತೀವ್ರತೆಗೆ ಇಳಿಕೆಯಾಗಿದೆ. ಭೂಮಿ ಕಂಪನಕ್ಕೆ ಇಡೀ ರೈಲು ಅಲುಗಾಡಿದೆ. ಬೃಹತ್ ಕಟ್ಟಡಗಳು ಧರೆಗೆ ಉರುಳಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಎನ್‌ಡಿಟಿವಿ ಪತ್ರಕರ್ತ ಉಮಾಶಂಕರ್ ಸಿಂಗ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ವಿಡಿಯೊದಲ್ಲಿ, ಭೂಕಂಪದ ಪರಿಣಾಮವು ನಿಲ್ದಾಣದಲ್ಲಿ ನಿಂತಿರುವ ರೈಲು ಅಲುಗಾಡುತ್ತಿರುವುದನ್ನು ಕಾಣಬಹುದು. "ಭೂಕಂಪದ ಸಮಯದಲ್ಲಿ ನಿಲ್ದಾಣದಲ್ಲಿ ನಿಂತಿರುವ ರೈಲು ಹೇಗೆ ಅಲುಗಾಡಿತು ಎಂಬುದನ್ನು ನೋಡಿ?" ಎಂದು ವಿಡಿಯೋ ಸಮೇತ ಟ್ವೀಟ್ ಮಾಡಿದ್ದಾರೆ.

ರಾಯಿಟರ್ಸ್ ವರದಿಯ ಪ್ರಕಾರ, ಭೂಕಂಪ ಮಧ್ಯಾಹ್ನ 2:44 ಕ್ಕೆ 10 ಕಿಲೋಮೀಟರ್ ಆಳದಲ್ಲಿ, ಟೈಟುಂಗ್‌ನ ಉತ್ತರಕ್ಕೆ 50 ಕಿಲೋಮೀಟರ್ (30 ಮೈಲಿ) ದೂರದಲ್ಲಿ ಸಂಭವಿಸಿದೆ. ಸೆಂಟ್ರಲ್ ನ್ಯೂಸ್ ಏಜೆನ್ಸಿ (CNA) ಪ್ರಕಾರ, ಭೂಕಂಪನದ ಬಳಿಕ ಯುಲಿ ಗ್ರಾಮದ ಬೃಹತ್ ಕಟ್ಟಡವೊಂದು ಕುಸಿದಿದೆ. ಅದೇ ಪ್ರದೇಶದಲ್ಲಿ ಶನಿವಾರ 6.6 ತೀವ್ರತೆಯಲ್ಲಿ ಹಲವು ಬಾರಿ ಭೂಮಿ ಕಂಪಿಸಿದೆ. ಹೀಗೆ ಭಾನುವಾರದ ಭೂಕಂಪವು ಹೆಚ್ಚು ಬಲವಾಗಿತ್ತು. ಇದರಿಂದಾಗಿ ಜಪಾನ್‌ನ ಹವಾಮಾನ ಸಂಸ್ಥೆ ತೈವಾನ್ ಬಳಿಯ ದೂರದ ದ್ವೀಪಗಳಿಗೆ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ.

ಸುಮಾರು 4 ಗಂಟೆಗೆ (0700 GMT) ಒಂದು ಮೀಟರ್‌ನಷ್ಟು ಎತ್ತರದ ಅಲೆಗಳು ಬರುವ ನಿರೀಕ್ಷೆಯಿದೆ. ಪೀಡಿತ ದ್ವೀಪಗಳಿಂದ ಲೈವ್ ಟಿವಿ ತುಣುಕಗಳ ಮೂಲಕ ತಕ್ಷಣವೇ ಹೆಚ್ಚಿನ ಅಲೆಗಳ ಸ್ಪಷ್ಟ ಲಕ್ಷಣಗಳನ್ನು ಸೆರೆಹಿಡಿಯುವ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಕಟ್ಟಡಗಳು ನೆಲ ಸಮ

ಕಟ್ಟಡಗಳು ನೆಲ ಸಮ

ತೈವಾನ್‌ನ ಯುಜಿಂಗ್ ಪ್ರದೇಶದಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು ಸುನಾಮಿ ಎಚ್ಚರಿಕೆ ನೀಡಲಾಗಿದೆ. ತೈವಾನ್‌ನ ಯುಜಿಂಗ್‌ನಿಂದ ಪೂರ್ವಕ್ಕೆ 85 ಕಿಮೀ ದೂರದಲ್ಲಿ ಭಾನುವಾರ ಮಧ್ಯಾಹ್ನ 12:14 ಕ್ಕೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪವು 7.2 ರಷ್ಟಿದೆ ಎಂದು ಯುಎಸ್ ಭೂಕಂಪ ವಿಜ್ಞಾನ ಕೇಂದ್ರ ವರದಿ ಮಾಡಿದೆ. ಈ ಪ್ರಬಲ ಭೂಕಂಪದಿಂದಾಗಿ ವಿವಿಧ ಪ್ರದೇಶಗಳಲ್ಲಿ ಕಟ್ಟಡಗಳು, ರಸ್ತೆಗಳು ನಲುಗಿವೆ. ಅದರಲ್ಲೂ ಕರಾವಳಿ ಭಾಗದ ಕಟ್ಟಡಗಳು ತತ್ತರಿಸಿವೆ. ಇದರಿಂದ ಹಲವರು ಗಾಬರಿಯಿಂದ ರಸ್ತೆಯಲ್ಲಿ ಓಡಾಡಿದ ದೃಶ್ಯಗಳು ವೈರಲ್ ಆಗಿವೆ. ಈ ಪ್ರಬಲ ಭೂಕಂಪದಿಂದಾಗಿ ಸೇತುವೆಗಳು ಹೆಚ್ಚು ಹಾನಿಗೊಳಗಾಗಿವೆ. ಹಳಿಗಳು ಬಿರುಕು ಬಿಟ್ಟಿವೆ. ಪ್ರಾಣ ಹಾನಿಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ವಿವಿದೆಡೆ ಭೂಕಂಪ

ವಿವಿದೆಡೆ ಭೂಕಂಪ

ಇದಲ್ಲದೆ, ಭೂಕಂಪದಿಂದಾಗಿ ಚಿಕ್ ಮತ್ತು ಲ್ಯುಶಿಶಿ ಪರ್ವತ ಪ್ರದೇಶಗಳಲ್ಲಿ ಬಂಡೆಗಳು ರಸ್ತೆಗೆ ಉರುಳಿವೆ. ಇದರಿಂದ ಈ ಭಾಗಕ್ಕೆ ತೆರಳಿದ್ದ 600ಕ್ಕೂ ಹೆಚ್ಚು ಜನರು ಬೇರೆಲ್ಲೂ ತೆರಳಲಾಗದೆ ಪರದಾಡುತ್ತಿದ್ದಾರೆ. ಅಲ್ಲದೇ ಕಲ್ಲು ಬಿದ್ದು 3 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ತೈವಾನ್ ದೂರದರ್ಶನದ ವರದಿಗಳ ಪ್ರಕಾರ ಅವರನ್ನು ರಕ್ಷಿಸಲಾಗಿದೆ ಮತ್ತು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ಅಂತೆಯೇ ಭೂಕಂಪನದ ಹಿಂದಿನ ದಿನ ತೈವಾನ್ ನ ಆಗ್ನೇಯ ಭಾಗದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.4ರಷ್ಟು ದಾಖಲಾಗಿರುವ ಭೂಕಂಪನದಿಂದಾಗಿ ಕಪಾಟಿನಲ್ಲಿ ಸಂಗ್ರಹವಾಗಿದ್ದ ವಸ್ತುಗಳು ಕಂಪನದಿಂದಾಗಿ ಕೆಳಗೆ ಬೀಳುವ ದೃಶ್ಯಗಳು ವೈರಲ್ ಆಗಿವೆ. ಭೂಕಂಪದಿಂದಾಗಿ ಕೌಶಿಯುಂಕ್‌ನಲ್ಲಿ ಮೆಟ್ರೋ ರೈಲು ಸೇವೆಯನ್ನು ತಕ್ಷಣವೇ ಸ್ಥಗಿತಗೊಳಿಸಲಾಯಿತು. ಇದರ ಕಂಪನಗಳು ತೈಪೆಯಲ್ಲೂ ಕಂಡುಬಂದಿದೆ ಎಂದು ಹೇಳಲಾಗುತ್ತದೆ.

ಆಧುನಿಕ ರೀತಿಯಲ್ಲಿ ಕಾಮಗಾರಿ ಚುರುಕು

ಆಧುನಿಕ ರೀತಿಯಲ್ಲಿ ಕಾಮಗಾರಿ ಚುರುಕು

ಮುಂದಿನ ದಿನಗಳಲೂ ಭೂಕಂಪ ಸಂಭವಿಸುವ ಸಾಧ್ಯತೆ ಇರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ದ್ವೀಪವು ಎರಡು ಟೆಕ್ಟೋನಿಕ್ ಪ್ಲೇಟ್‌ಗಳ ಜಂಕ್ಷನ್‌ಗೆ ಸಮೀಪದಲ್ಲಿರುವ ಕಾರಣ, ತೈವಾನ್‌ನಲ್ಲಿ ಭೂಕಂಪಗಳು ಆಗಾಗ್ಗೆ ಸಂಭವಿಸುತ್ತವೆ. ಭೂಕಂಪನದ ಬಳಿಕ ಸಂತ್ರಸ್ತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸರ್ಕಾರದ ವತಿಯಿಂದ ರಕ್ಷಣಾ ಕಾರ್ಯಕ್ಕೆ ಅನುಗುಣವಾಗಿ ಆಧುನಿಕ ರೀತಿಯಲ್ಲಿ ಕಾಮಗಾರಿಯನ್ನು ಚುರುಕುಗೊಳಿಸಲಾಗಿದೆ.

ಜಪಾನ್ ಹವಾಮಾನ ಸಂಸ್ಥೆ ಎಚ್ಚರಿಕೆ

ಜಪಾನ್ ಹವಾಮಾನ ಸಂಸ್ಥೆ ಎಚ್ಚರಿಕೆ

ಅಂತೆಯೇ, ತೈವಾನ್ ಕರಾವಳಿಯಲ್ಲಿ ಭೂಕಂಪದ ಕೇಂದ್ರಬಿಂದುದಿಂದ 300 ಕಿಮೀ ದೂರದಲ್ಲಿ ಅಪಾಯಕಾರಿ ಸುನಾಮಿ ಅಲೆಗಳು ಉದ್ಭವಿಸಬಹುದು ಎಂದು ಯುಎಸ್ ಸುನಾಮಿ ಎಚ್ಚರಿಕೆ ಕೇಂದ್ರ ಹೇಳಿದೆ. ಭೂಕಂಪದ ನಂತರ, ಒಕಿನಾವಾ ಪ್ರಿಫೆಕ್ಚರ್‌ನ ಕರಾವಳಿ ಪ್ರದೇಶದಲ್ಲಿ 1 ಮೀಟರ್ ಎತ್ತರದ ಸುನಾಮಿ ಅಲೆಗಳು ಸಂಭವಿಸಬಹುದು ಎಂದು ಜಪಾನ್ ಹವಾಮಾನ ಸಂಸ್ಥೆ ಎಚ್ಚರಿಕೆ ನೀಡಿದೆ. ಫುಜಿಯಾನ್, ಗುವಾಂಗ್‌ಡಾಂಗ್, ಜಿಯಾಂಗ್‌ಸು ಮತ್ತು ಶಾಂಘೈ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ನಡುಕ ಸ್ಪಷ್ಟವಾಗಿ ಕಂಡುಬಂದಿದೆ ಎಂದು ಚೀನಾ ಭೂಕಂಪ ನೆಟ್‌ವರ್ಕ್ ಕೇಂದ್ರ ತಿಳಿಸಿದೆ. ಸೆಪ್ಟೆಂಬರ್ 1999 ರಲ್ಲಿ ತೈವಾನ್‌ನ ಅತ್ಯಂತ ಭೀಕರ ಭೂಕಂಪವು 7.6-ತೀವ್ರತೆಯ ಕಂಪನವಾಗಿದ್ದು, ಇದು 2,400 ಕ್ಕೂ ಹೆಚ್ಚು ಜನರನ್ನು ಮೃತಪಟ್ಟಿದ್ದರು.

English summary
The US Geological Survey (USGS) reported that a magnitude 6.9 earthquake struck off the southeast coast of Taiwan on Sunday. This time, the scene of the train shaking like a toy has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X