ವಿಡಿಯೋ: ಕಾಂಗೋದಲ್ಲಿ ಉದ್ಘಾಟನೆಯ ವೇಳೆ ಕುಸಿದ ಸೇತುವೆ: ನೆಟ್ಟಿಗರ ಅಪಹಾಸ್ಯ
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ (DRC) ಉದ್ಘಾಟಿಸುವ ವೇಳೆ ಸೇತುವೆ ಕುಸಿದು ಬಿದ್ದ ಘಟನೆ ನಡೆದಿದೆ. ಕೆಲ ಅಧಿಕಾರಿಗಳು ಸೇತುವೆ ಮೇಲೆ ನಿಂತು ರಿಬ್ಬನ್ ಕತ್ತರಿಸುವ ವೇಳೆ ಸೇತುವೆ ಅಲುಗಾಡಿ ಕುಸಿದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಅಪಘಾತದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸೇತುವೆ ನಿರ್ಮಾಣದ ಗುಣಮಟ್ಟವನ್ನು ಜನರು ಅಪಹಾಸ್ಯ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಸ್ಥಳೀಯರು ನದಿ ದಾಟಲು ಈ ಕಿರು ಸೇತುವೆಯನ್ನು ನಿರ್ಮಿಸಲಾಗಿದೆ. ಸೇತುವೆಯ ಮೊದಲು ಇದ್ದ ತಾತ್ಕಾಲಿಕ ರಚನೆಯು ಆಗಾಗ್ಗೆ ಒಡೆಯುತ್ತದೆ ಎಂದು ಸ್ಥಳೀಯ ಖಾಮಾ ಪ್ರೆಸ್ ಸುದ್ದಿ ಸಂಸ್ಥೆ ತಿಳಿಸಿದೆ.
Bridge collapses while being commissioned in DR Congo. pic.twitter.com/hIzwKWBx9g
— Africa Facts Zone (@AfricaFactsZone) September 5, 2022
ಅಧಿಕಾರಿಗಳು ಜಮಾಯಿಸುತ್ತಿದ್ದಂತೆ ಭಾರ ಹೆಚ್ಚಾಗಿ ಸೇತುವೆ ಕುಸಿದಿದೆ ಎಂದು ಸ್ಥಳೀಯ ಖಾಮಾ ಪ್ರೆಸ್ ಸುದ್ದಿ ಸಂಸ್ಥೆ ತಿಳಿಸಿದೆ. ಇದರಿಂದ ಸೇತುವೆಯನ್ನು ಮರುನಿರ್ಮಾಣ ಮಾಡಲಾಗಿತ್ತು. ಆದರೆ ಅಧಿಕೃತ ಕಾರ್ಯಕ್ರಮವೊಂದರಲ್ಲಿ ಅಧಿಕೃತವಾಗಿ ಉದ್ಘಾಟನೆ ಮಾಡಲು ಅಧಿಕಾರಿಗಳು ಸೇತುವೆಯ ಮೇಲೆ ನಿಂತಿರುತ್ತಾರೆ. ಸೇತುವೆಯ ಒಂದು ತುದಿಯಲ್ಲಿ ಕೆಂಪು ರಿಬ್ಬನ್ ಕತ್ತಿರುಸುವುದರೊಂದಿಗೆ ಉದ್ಘಾಟನೆ ಪೂರ್ಣಗೊಳ್ಳುತ್ತಿತ್ತು. ಆದರೆ ಪ್ರತಿನಿಧಿಗಳಲ್ಲಿ ಒಬ್ಬರು - ಮಹಿಳೆ - ರಿಬ್ಬನ್ ಕತ್ತರಿಸಲು ಕತ್ತರಿ ತೆಗೆದ ತಕ್ಷಣ, ಸೇತುವೆಯು ಅಧಿಕಾರಿಗಳ ಭಾರಕ್ಕೆ ಕುಸಿದಿದೆ.

ಮಹಿಳಾ ಅಧಿಕಾರಿಯು ಸಹಾಯ ಕೋರಿ ಸುರಕ್ಷಿತವಾಗಿ ಜಿಗಿದಿದ್ದಾರೆ. ಭದ್ರತಾ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ಬೀಳುವ ಸೇತುವೆಯಿಂದ ಎಳೆದಿದ್ದಾರೆ. ಉಳಿದ ಸದಸ್ಯರು ಅದೃಷ್ಟವಶಾತ್ ನೆಲಕ್ಕೆ ಬೀಳಲಿಲ್ಲ. ಸಿಕ್ಕಿಬಿದ್ದ ಅಧಿಕಾರಿಗಳಿಗೆ ಸಹಾಯ ಮಾಡಲು ಇತರರು ತಕ್ಷಣವೇ ಧಾವಿಸುತ್ತಿರುವುದು ಕಂಡುಬರುತ್ತದೆ. ಕಳೆದ ವಾರ ಈ ಘಟನೆ ನಡೆದಿದೆ. ಸೇತುವೆ ಕುಸಿದು ಎರಡು ತುಂಡಾಗಿದೆ.
"ಈ ಸೇತುವೆಯ ವೆಚ್ಚವು ಒಂದು ಮಿಲಿಯನ್ ಡಾಲರ್‌ಗಿಂತ ಹೆಚ್ಚು. ಇದು ತೆರಿಗೆದಾರರ ಹಣವಾಗಿದೆ" ಎಂದು ಬಳಕೆದಾರರು ಟ್ವೀಟ್ ಮಾಡಿದ್ದಾರೆ. "ಈ ಸೇತುವೆಯನ್ನು ರಿಬ್ಬನ್ ಹಿಡಿದಿಟ್ಟುಕೊಂಡಿತ್ತು" ಎಂದು ಇನ್ನೊಬ್ಬರು ಟ್ವಿಟರ್‌ನಲ್ಲಿ ಅಪಹಾಸ್ಯ ಮಾಡಿದ್ದಾರೆ.












Click it and Unblock the Notifications