ಕಳೆದ ವರ್ಷ ಪ್ರೇಮಿಗಳ ದಿನಾಚರಣೆಯ ಹಿಂದಿನ ದಿನ 95 ಮಿಲಿಯನ್ ಉಚಿತ ಕಾಂಡೋಮ್‌ಗಳ ವಿತರಣೆ, ಈ ಬಾರಿ ಎಷ್ಟು?
ಬ್ಯಾಂಕಾಕ್: ಪ್ರೇಮಿಗಳ ದಿನಾಚರಣೆ ಹತ್ತಿರ ಬಂತೆಂದರೆ ಸಾಕು ಬಹುತೇಕ ಜೋಡಿಗಳು ಮೈಮರೆತು ಲೈಂಗಿಕವಾಗಿ ತೊಡಗಿಕೊಳ್ಳುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಆದ್ದರಿಂದ ಈ ದೇಶದಲ್ಲಿ ಪ್ರೇಮಿಗಳ ದಿನದ ಹಿಂದಿನ ದಿನ ಉಚಿತ ಕಾಂಡೋಮ್‌ಗಳನ್ನು ನೀಡಲಾಗುತ್ತದೆ. ಕಳೆದ ವರ್ಷ 95 ಮಿಲಿಯನ್ ಉಚಿತ ಕಾಂಡೋಮ್‌ಗಳನ್ನು ವಿತರಿಸಲಾಗಿದೆ. ಇನ್ನೂ ಈ ಬಾರಿ ಎಷ್ಟು ವಿತರಣೆ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕಳೆದ ಬಾರಿ 2023ರ ಪ್ರೇಮಿಗಳ ದಿನದ ಮುನ್ನವೇ ಸುರಕ್ಷಿತೆ ಮತ್ತು ಲೈಂಗಿಕವಾಗಿ ಹರಡುವ ರೋಗಗಳು (ಎಸ್‌ಟಿಡಿ) ಮತ್ತು ಹದಿಹರೆಯದ ಗರ್ಭಧಾರಣೆಯನ್ನು ತಡೆಯಲು, ಥೈಲ್ಯಾಂಡ್ 95 ಮಿಲಿಯನ್ ಉಚಿತ ಕಾಂಡೋಮ್‌ಗಳನ್ನು ವಿತರಿಸಿತ್ತು. ಇನ್ನು ಈ ಬಾರಿ ಅದಕ್ಕೂ ಹೆಚ್ಚು ಕಾಂಡೋಮ್‌ಗಳನ್ನು ವಿತರಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಹಾಗೆಯೇ ಕಾಂಡೋಮ್‌ಗಳ ವಿಧಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಕಾಂಡೋಮ್‌ಗಳು ನಾಲ್ಕು ಗಾತ್ರಗಳಲ್ಲಿ ಲಭ್ಯವಿರುತ್ತವೆ ಮತ್ತು ದೇಶಾದ್ಯಂತದ ಆಸ್ಪತ್ರೆಗಳ ಔಷಧಾಲಯಗಳು ಮತ್ತು ಪ್ರಾಥಮಿಕ ಚಿಕಿತ್ಸಾ ಘಟಕಗಳಿಂದ ಪಡೆಯಬಹುದಾಗಿದೆ ಎಂದು ಥೈಲ್ಯಾಂಡ್ ಸರ್ಕಾರದ ವಕ್ತಾರ ರಚಡಾ ಧ್ನಾಡಿರೆಕ್ ಹೇಳಿದ್ದಾರೆ. ಯುನಿವರ್ಸಲ್ ಹೆಲ್ತ್‌ಕೇರ್ ಕಾರ್ಡ್ ಹೊಂದಿರುವವರು ಒಂದು ವರ್ಷದವರೆಗೆ ವಾರಕ್ಕೆ 10 ಕಾಂಡೋಮ್‌ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ಏಕೆ ಉಚಿತ ಕಾಂಡೋಮ್‌ಗಳ ವಿತರಣೆ?: ಅನಗತ್ಯ ಗರ್ಭಧಾರಣೆ ಮತ್ತು ಲೈಂಗಿಕವಾಗಿ ಹರಡುವ ರೋಗಗಳಾದ ಸಿಫಿಲಿಸ್, ಗೊನೊರಿಯಾ, ಕ್ಲಮೈಡಿಯ, ಗರ್ಭಕಂಠದ ಕ್ಯಾನ್ಸರ್, ಎಚ್‌ಐವಿ, ಏಡ್ಸ್ ಹರಡುವುದನ್ನು ತಡೆಯಲು ಕಾಂಡೋಮ್‌ಗಳನ್ನು ಉಚಿತವಾಗಿ ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಎನ್‌ಎಚ್‌ಎಸ್‌ಒ ಹೇಳಿದೆ.
ಲೂಬ್ರಿಕೇಟಿಂಗ್ ಜೆಲ್‌ನೊಂದಿಗೆ ಉಚಿತ ಕಾಂಡೋಮ್‌ಗಳನ್ನು ವಿತರಿಸಲಾಗುವುದು ಎಂದು ಥಾಯ್ಲೆಂಡ್‌ನ ರಾಷ್ಟ್ರೀಯ ಆರೋಗ್ಯ ಭದ್ರತಾ ಕಚೇರಿ (NHSO), ಪ್ರಧಾನ ಕಾರ್ಯದರ್ಶಿ ಜಡೇಜ್ ತಮ್ಮತಾಚಾರಿ ಹೇಳಿದ್ದಾರೆ. ಉಚಿತ ಕಾಂಡೋಮ್‌ಗಳನ್ನು ಪಡೆಯಲು ಬಯಸುವ ಜನರು ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಕಾಂಡೋಮ್‌ಗಳನ್ನು ಸ್ವೀಕರಿಸಲು ಗೊತ್ತುಪಡಿಸಿದ ಔಷಧಿ ಅಂಗಡಿ, ಸಮುದಾಯ ಚಿಕಿತ್ಸಾಲಯಗಳು ಅಥವಾ ರಾಜ್ಯ-ಚಾಲಿತ ಆರೋಗ್ಯ ಕಚೇರಿಗಳನ್ನು ಆಯ್ಕೆ ಮಾಡಬೇಕಾಗುತ್ತದೆ.
ಸ್ಮಾರ್ಟ್‌ಫೋನ್‌ಗೆ ಪ್ರವೇಶವನ್ನು ಹೊಂದಿರದ ಜನರು ಥಾಯ್ ರಾಷ್ಟ್ರೀಯ ಗುರುತಿನ ಚೀಟಿಯನ್ನು ತೋರಿಸುವ ಮೂಲಕ ಗೊತ್ತುಪಡಿಸಿದ ಸೇವಾ ಮಳಿಗೆಗಳಲ್ಲಿ ಉಚಿತ ಕಾಂಡೋಮ್‌ಗಳಿಗಾಗಿ ನೋಂದಾಯಿಸಿಕೊಳ್ಳಬಹುದು. "ಗೋಲ್ಡ್ ಕಾರ್ಡ್ ಹೊಂದಿರುವವರಿಗೆ ಉಚಿತ ಕಾಂಡೋಮ್ ನೀಡುವ ಅಭಿಯಾನವು ರೋಗಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ" ಎಂದು ರಾಚಡಾ ಆಗ ಹೇಳಿದ್ದರು.
ಗೋಲ್ಡ್ ಕಾರ್ಡ್ ಅಥವಾ 30-ಬಹ್ತ್ ಯೋಜನೆಯು ಯುನಿವರ್ಸಲ್ ಕವರೇಜ್ ಯೋಜನೆಯಾಗಿದ್ದು, ಇದು ಥೈಲ್ಯಾಂಡ್‌ನ ಜನರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಮೂರು ಆರೋಗ್ಯ ಕಾರ್ಯಕ್ರಮಗಳಲ್ಲಿ ದೊಡ್ಡದಾಗಿದೆ. 2023ರ ವರದಿಗಳ ಪ್ರಕಾರ, ಥೈಲ್ಯಾಂಡ್ ಇತ್ತೀಚಿನ ವರ್ಷಗಳಲ್ಲಿ STDಗಳ ಹೆಚ್ಚಳಕ್ಕೆ ಸಾಕ್ಷಿಯಾಗಿದೆ, ಸಿಫಿಲಿಸ್ ಮತ್ತು ಗೊನೊರಿಯಾ 2021 ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು. ಹೆಚ್ಚು ಪೀಡಿತರಲ್ಲಿ 15 ಮತ್ತು 19 ಮತ್ತು 20 ಮತ್ತು 24ರ ನಡುವಿನ ವಯಸ್ಸಿನವರು ಸೇರಿದ್ದಾರೆ.












Click it and Unblock the Notifications