3ನೇ ಮಹಾಯುದ್ಧ: ಉ.ಕೊರಿಯಾ ಸರ್ವನಾಶ ಅಂತು ಅಮೆರಿಕ!

ಸಿಯೋಲ್: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಾಗೂ ದಕ್ಷಿಣ ಕೊರಿಯಾ ಜಗಳ ಈಗ 3ನೇ ಮಹಾಯುದ್ಧದ ಸ್ವರೂಪ ಪಡೆಯುತ್ತಿದೆ. ಇತ್ತೀಚೆಗೆ ಪರಮಾಣು ಕ್ಷಿಪಣಿ ಪ್ರಯೋಗಿಸಿ ಅಮೆರಿಕ ಮತ್ತು ದಕ್ಷಿಣ ಕೊರಿಯಾಗೆ ಬೆದರಿಕೆ ಹಾಕಿದ್ದ ಕಿಮ್ ಜಾಂಗ್ ಉನ್‌ಗೆ ಅಮೆರಿಕ ಸರ್ವನಾಶ ಮಾಡುವ ಎಚ್ಚರಿಕೆ ನೀಡಿದೆ. ಇದು ಮತ್ತೊಮ್ಮೆ ಜಗತ್ತಿನ ನಿದ್ದೆಗೆಡಿಸಿದೆ.

ಹೌದು, ಬೇಡ ಬೇಡ ಎಂದರೂ ಪದೇಪದೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಪರಮಾಣು ಸಾಮರ್ಥ್ಯದ ಕ್ಷಿಪಣಿಗಳನ್ನ ಪ್ರಯೋಗ ಮಾಡುತ್ತಿದ್ದ. ಇದು ಸಾಲದು ಎಂಬಂತೆ ಅಮೆರಿಕ ಕೂಡ ಆಗಾಗ ದಕ್ಷಿಣ ಕೊರಿಯಾ ಮತ್ತು ಜಪಾನ್ ಜೊತೆ ಸಮರಾಭ್ಯಾಸ ನಡೆಸಿ, ಉತ್ತರ ಕೊರಿಯಾಗೆ ಬಿಸಿ ಮುಟ್ಟಿಸುತ್ತಿತ್ತು. ಇದೆಲ್ಲದರ ಪರಿಣಾಮ ಕಿಮ್ ಜಾಂಗ್ ಉನ್ ಪಿತ್ತ ನೆತ್ತಿಗೇರಿ ಕಳೆದ ವಾರ ಅತ್ಯಂತ ವಿನಾಶಕಾರಿ ಪರಮಾಣು ಕ್ಷಿಪಣಿಯನ್ನೇ ಪ್ರಯೋಗ ಮಾಡಿದ್ದ. ಈ ಘಟನೆ ಬಳಿಕ ಉತ್ತರ ಕೊರಿಯಾದ ಕಿಮ್‌ಗೆ ಅಮೆರಿಕ ಸರ್ವನಾಶದ ಎಚ್ಚರಿಕೆ ನೀಡಿದೆ.

USA warns Kim Jong Un about nuclear weapons use

ಬಾಂಬ್ ಹಾಕಿದ್ರೆ ನೀನು ಉಳಿಯಲ್ಲ!

ಅಮೆರಿಕ ನೀಡಿರುವ ಎಚ್ಚರಿಕೆ ಪ್ರಕಾರ, ಅಕಸ್ಮಾತ್ ಉತ್ತರ ಕೊರಿಯಾ ಸರ್ವಾಧಿಕಾರಿ ಅಮೆರಿಕ ಅಥವಾ ಅದರ ಮಿತ್ರರ ಮೇಲೆ ನ್ಯೂಕ್ಲಿಯರ್ ಬಾಂಬ್ ಹಾಕಿದರೆ ಕ್ಷಣಮಾತ್ರದಲ್ಲಿ ಉತ್ತರ ಕೊರಿಯಾ ನಾಶವಾಗಲಿದೆ ಅಂತೆ. ಈ ಮಾತಿನ ಅರ್ಥ ದಕ್ಷಿಣ ಕೊರಿಯಾ ಇಲ್ಲವೇ ಜಪಾನ್ ವಿರುದ್ಧ ನ್ಯೂಕ್ಲಿಯರ್ ಬಾಂಬ್ ಪ್ರಯೋಗ ಮಾಡಿದರೆ ಸಂಪೂರ್ಣ ಉ.ಕೊರಿಯಾ ಸರ್ವನಾಶ ಆಗುತ್ತದೆ ಎಂದು. ಜೊತೆಗೆ ಕಿಮ್ ಜಾಂಗ್ ಉನ್ ಆಡಳಿತ ಆ ಬಾಂಬ್ ಹಾಕಿದ ದಿನವೇ ಕೊನೆಯಾಗಲಿದೆ ಎನ್ನುವ ಮೂಲಕ ವಿಶ್ವದ ದೊಡ್ಡಣ್ಣ ತೊಡೆತಟ್ಟಿದ್ದಾನೆ.

ಮೊದಲೇ ತಿಕ್ಕಲು, ಏನಾಗುತ್ತೋ ಗೊತ್ತಿಲ್ಲ!

ಹೌದು, ಉತ್ತರ ಕೊರಿಯಾ ಸರ್ವಾಧಿಕಾರಿ ಮೊದಲೇ ತಿಕ್ಕಲು ಮನುಷ್ಯ. ಇಂತಹ ಮನುಷ್ಯನಿಗೆ ಅಮೆರಿಕ ಈ ರೀತಿ ಎಚ್ಚರಿಕೆ ನೀಡಿದೆ. ಹೀಗಾಗಿ ಮುಂದೆ ಏನಾಗುತ್ತೋ ಗೊತ್ತಿಲ್ಲ ಎಂಬ ಚರ್ಚೆ ಶುರುವಾಗಿದೆ. ಈಗಾಗಲೇ ತನ್ನ ಬಳಿ ನೂರಾರು ಪರಮಾಣು ಕ್ಷಿಪಣಿಗಳನ್ನ ಇಟ್ಟುಕೊಂಡು ಕಾಯುತ್ತಿದ್ದಾನೆ ಉತ್ತರ ಕೊರಿಯಾ ಸರ್ವಾಧಿಕಾರಿ. ಈ ಹೊತ್ತಲ್ಲೇ ಅಮೆರಿಕ ಧಮ್ಕಿ ಹಾಕಿರೋದು ಕಿಮ್ ಜಾಂಗ್ ಉನ್‌ಗೆ ಹಾವಿನ ಬಾಲ ತುಳಿದಂತಾಗಿದೆ. ಇದಕ್ಕೆ ಮತ್ತೆ ಯಾವ ಮಿಸೈಲ್ ಮೂಲಕ ಕಿಮ್ ಜಾಂಗ್ ಉನ್ ಉತ್ತರ ಕೊಡುತ್ತಾನೋ ಗೊತ್ತಿಲ್ಲ.

ಉ.ಕೊರಿಯಾ ಬಳಿ ಡೆಡ್ಲಿ ವೆಪನ್ಸ್

ಸರ್ವಾಧಿಕಾರಿ ಕಿಮ್ ಸುಲಭವಾಗಿ ಪತ್ತೆ ಮಾಡಲು ಆಗದ ಮತ್ತು ಶತ್ರುಗಳ ನೆಲ ಸರ್ವನಾಶ ಮಾಡಬಲ್ಲ ಖಂಡಾಂತರ ಕ್ಷಿಪಣಿ ಪರೀಕ್ಷೆ ಮಾಡಿದ ಕೆಲ ದಿನದಲ್ಲಿ ಗುಪ್ತಚರ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸಿದ್ದಾನೆ. ಘನ-ಇಂಧನ ಬಳಸಿಕೊಂಡು ಉಡಾಯಿಸಬಲ್ಲ ಹೊಸ ಖಂಡಾಂತರ ಕ್ಷಿಪಣಿ (ICBM) ಅಮೆರಿಕ ಮಾತ್ರವಲ್ಲ ಉ.ಕೊರಿಯಾ ಪಕ್ಕದ ಶತ್ರು ರಾಷ್ಟ್ರ ದಕ್ಷಿಣ ಕೊರಿಯಾ ಹಾಗೂ ಜಪಾನ್ ಬುಡಕ್ಕೂ ಬತ್ತಿ ಇಡುವುದು ಪಕ್ಕಾ ಎಂಬ ಎಚ್ಚರಿಕೆ ಸಿಕ್ಕಿದೆ. ಈ ಹೊತ್ತಲ್ಲೇ ಶತ್ರುಗಳ ಎದೆ ನಡುಗಿಸಲು ಗುಪ್ತಚರ ಉಪಗ್ರಹ ಕೂಡ ಉಡಾಯಿಸುತ್ತಿದ್ದಾನೆ ಕಿಮ್. ಮತ್ತೊಂದು ಕಡೆ ಅಮೆರಿಕ ಬೇರೆ ಎಚ್ಚರಿಕೆ ನೀಡುತ್ತಿದೆ.

USA warns Kim Jong Un about nuclear weapons use

ಕಿಮ್ ಬಳಿ ಪರಮಾಣು ಕ್ಷಿಪಣಿಗಳ ರಾಶಿ

ಅಮೆರಿಕ ಮತ್ತು ಜಪಾನ್, ದಕ್ಷಿಣ ಕೊರಿಯಾ ವಿರುದ್ಧ ಕಿಮ್ ಜಾಂಗ್ ಉನ್ ಅದೆಷ್ಟು ಗರಂ ಆಗಿದ್ದಾನೆ ಎಂದರೆ, ಕಳೆದ 1 ವರ್ಷದಲ್ಲಿ 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಸಮುದ್ರಕ್ಕೆ ಉಡಾಯಿಸಿದ್ದಾನೆ. ಈ ಮೂಲಕ ಶತ್ರುಗಳಿಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುವ ಜೊತೆಗೆ, ತಂಟೆಗೆ ಬಂದ್ರೆ ಸುಮ್ಮನೆ ಇರಲ್ಲ ಎಂದು ಉತ್ತರಿಸುತ್ತಿದ್ದಾನೆ. ಆದರೆ ಮೊನ್ನೆ ಮೊನ್ನೆ ತಾನೆ ಜಪಾನ್ ನಗರದಲ್ಲಿ ಕಿಮ್ ಹಾರಿಸಿದ ಕ್ಷಿಪಣಿ ಬೀಳಲಿದೆ ಎಂಬ ಆತಂಕ ಶುರುವಾಗಿತ್ತು. ಈ ಘಟನೆ ಬಳಿಕ ದಕ್ಷಿಣ ಕೊರಿಯಾ ಮತ್ತು ಜಪಾನ್ ಅಮೆರಿಕದ ಬಳಿ ದೂರು ನೀಡಿದ್ದವು. ಇದೀಗ ಖುದ್ದು ಅಮೆರಿಕ ಅಧ್ಯಕ್ಷರು ಕಿಮ್ ಜಾಂಗ್ ಉನ್‌ಗೆ ವಾರ್ನಿಂಗ್ ಕೊಟ್ಟಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಅಮೆರಿಕ ಈಗಾಗಲೇ ತನ್ನ ಪರಮಾಣು ಜಲಾಂತರ್ಗಾಮಿ ಅಥವಾ ಸಬ್ ಮರೀನ್ ಅನ್ನ ದಕ್ಷಿಣ ಕೊರಿಯಾಗೆ ಕಳುಹಿಸಿದೆ. ಹಾಗೇ ಉತ್ತರ ಕೊರಿಯಾ ಗಡಿಯ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಇದನ್ನೆಲ್ಲಾ ನೋಡುತ್ತಿದ್ದರೆ ಜಗತ್ತು ಮತ್ತೊಮ್ಮೆ ವಿನಾಶದ ಅಂಚಿಗೆ ತಲುಪುತ್ತಿರುವುದು ಪಕ್ಕಾ. ಹಿಂದೆ 1ನೇ ಮಹಾಯುದ್ಧ ಮತ್ತು 2ನೇ ಮಹಾಯುದ್ಧ ಆರಂಭವಾಗಿದ್ದು ಇದೇ ರೀತಿ ಕೋಳಿ ಜಗಳದಲ್ಲಿ. ಇದೀಗ 3ನೇ ಮಹಾಯುದ್ಧ ಕೂಡ ಹಾಗೇ ಶುರುವಾಗುತ್ತಾ? ಎಂಬ ಭಯ ಇಡೀ ಜಗತ್ತನ್ನು ಕಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+