ಇರಾನ್ ವಿರುದ್ಧ ಇನ್ನಷ್ಟು ರೊಚ್ಚಿಗೆದ್ದ ಅಮೆರಿಕ, ಮುಂದಿನ ಹೆಜ್ಜೆ ಬಗ್ಗೆ ಮತ್ತಷ್ಟು ಕುತೂಹಲ... USA Military
ಅಮೆರಿಕ ಮತ್ತು ಇರಾನ್ ನಡುವೆ ಹೊತ್ತಿಕೊಂಡ ಕಿಚ್ಚು ಇವತ್ತು ತಣ್ಣಗೆ ಆಗಲಿದೆ, ನಾಳೆ ಸೈಲೆಂಟ್ ಆಗಲಿದೆ ಅಂತಾ ಹೇಳಿದ್ದೇ ಬಂತು. ಆದರೆ ಕಳೆದ ಕೆಲವು ದಿನಗಳಿಂದ ಈ ಜಗಳ ನಿರಂತರ ಮತ್ತೆ, ಮತ್ತೆ ಹೆಚ್ಚಾಗುತ್ತಲೇ ಇದೆ. ಅಮೆರಿಕ ಮತ್ತು ಇರಾನ್ ತಿಕ್ಕಾಟ ಹೆಚ್ಚಾದ ಕಾರಣ ಮಧ್ಯಪ್ರಾಚ್ಯ ಭಾಗದಲ್ಲಿ ಆತಂಕ ಮನೆಮಾಡಿದ್ದು, ಯಾವ ಕ್ಷಣದಲ್ಲಿ ಯುದ್ಧ ಶುರುವಾಗುತ್ತೋ ಎಂದು ಜನರು ಕೂಡ ತಮ್ಮ ತಮ್ಮ ಸೂರು ಬಿಟ್ಟು ಹೊರಗೆ ಬರಲು ಯೋಚಿಸುವಂತೆ ಆಗಿದೆ. ಇನ್ನೊಂದು ಕಡೆ ಶಾಂತಿ ಮಾತುಕತೆ ಆರಂಭವಾದ ನಂತರ ಎರಡೂ ದೇಶಗಳು ಒಗ್ಗಟ್ಟಾಗಿ ಸಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದ್ದು, ಅಮೆರಿಕದ ಮುಂದಿನ ಹೆಜ್ಜೆ ಬಗ್ಗೆ ಮತ್ತಷ್ಟು ಕುತೂಹಲ ಕೆರಳಿದೆ.
ಇರಾನ್ ಎಲ್ಲಾ ರೀತಿಯಲ್ಲೂ ನಲುಗಿ ಹೋಗುವಂತೆ ಅಮೆರಿಕ ಈಗಾಗಲೇ ಲಾಕ್ ಮಾಡಿಕೊಂಡಿದ್ದು, ಒಂದು ಕಡೆ ದೊಡ್ಡ ದೊಡ್ಡ ಯುದ್ಧ ನೌಕೆಗಳು ಇರಾನ್ ಸುತ್ತಲೂ ಆವರಿಸಿವೆ. ಹಾಗೇ ಇದರ ಜೊತೆ ಇಸ್ರೇಲ್ ನೆಲದಲ್ಲಿ ಕ್ಷಿಪಣಿಗಳ ಮೂಲಕ ದಾಳಿ ಮಾಡಲು ಕೂಡ ಅಮೆರಿಕ ಸಜ್ಜಾಗಿದ್ದು, ಥಾಡ್ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಕೂಡ ನಿಯೋಜನೆ ಮಾಡಿದೆ. ಇದು ಸಾಲದು ಎನ್ನುವಂತೆ ಇರಾನ್ ಮೇಲೆ ಯಾವ ಯಾವ ರೀತಿಯಲ್ಲಿ ದಾಳಿ ಮಾಡಲು ಸಾಧ್ಯವೋ, ಅದನ್ನೆಲ್ಲಾ ಸಿದ್ಧ ಮಾಡಿಕೊಂಡು ಕಾಯುತ್ತಾ ಇದೆ ಅಮೆರಿಕ. ಮತ್ತೊಂದು ಕಡೆ ಈಗಾಗಲೇ ಅಬ್ರಹಾಂ ಲಿಂಕನ್ ಯುದ್ಧ ನೌಕೆ ಇರಾನ್ ಬಳಿ ಇರುವಾಗಲೇ ವಾಷಿಂಗ್ಟನ್ 2ನೇ ವಿಮಾನ ವಾಹಕ ನೌಕೆ ಕಳಿಸುತ್ತಿದೆಯಾ? ಎಂಬ ಚರ್ಚೆ ಶುರುವಾಗಿದೆ.

ಇರಾನ್ ವಿರುದ್ಧ ಯುದ್ಧ ಫಿಕ್ಸ್?
ಹೌದು, ವರ್ಜೀನಿಯಾ ಮೂಲಕ 2ನೇ ಯುದ್ಧ ನೌಕೆ ಮಧ್ಯಪ್ರಾಚ್ಯದ ಕಡೆಗೆ ಹೊರಡಲು ಸಜ್ಜಾಗಿದೆ ಎಂಬ ಸುದ್ದಿ ಹಬ್ಬಿದೆ. ಕ್ಷಿಪಣಿ ದಾಳಿ ಮಾಡುವ ಜೊತೆಗೆ ಕ್ರೂಸರ್ ಸೇರಿದಂತೆ ಒಟ್ಟು 60ಕ್ಕೂ ಹೆಚ್ಚು ವಿಮಾನಗಳ ಜೊತೆಗೆ ಸಾವಿರಾರು ಸಿಬ್ಬಂದಿಗೆ ಜಾಗ ಇರುವ ಬೃಹತ್ ಯುದ್ಧ ನೌಕೆ ಇರಾನ್ ಕಡೆಗೆ ಹೊರಡಲು ಸಜ್ಜಾಗಿದೆ ಎನ್ನಲಾಗಿದೆ. ಹಾಗೇ ಇನ್ನೊಂದು ಚರ್ಚೆಯ ಪ್ರಕಾರ ಈಗಾಗಲೇ ಈ ಬೃಹತ್ ಯುದ್ಧನೌಕೆ ಈಗಾಗಲೇ ಮಧ್ಯಪ್ರಾಚ್ಯ ಕಡೆಗೆ ಪಯಣ ಆರಂಭಿಸಿದ್ದು, ಶೀಘ್ರದಲ್ಲಿಯೇ ಯುಎಸ್‌ಎಸ್ ಅಬ್ರಹಾಂ ಲಿಂಕನ್ ಜೊತೆಗೆ ಸೇರಲಿದೆ ಎನ್ನಲಾಗಿದೆ.
ದಿಢೀರ್ ದಾಳಿ ಮಾಡಿದರೆ ಪರಿಣಾಮ?
ಅಮೆರಿಕ ಸೇನೆಯ ಎದುರು ಇರಾನ್ ಸೇನೆ ಯಾವುದಕ್ಕೂ ಸಾಲುವುದಿಲ್ಲ, ಏಕೆಂದರೆ ಇಡೀ ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿ ಸೇನೆಯನ್ನು ಅಮೆರಿಕ ಹೊಂದಿದೆ. ಹೀಗಿದ್ದಾಗ ಇರಾನ್ ಮೇಲೆ ಅಮೆರಿಕ ಸೇನೆ ದಾಳಿ ಮಾಡಿದರೆ ಇರಾನ್ ದೊಡ್ಡ ನಷ್ಟ ಅನುಭವಿಸುವ ಭೀತಿ ಇದೆ, ಹಾಗೇ ಇನ್ನೊಂದು ಕಡೆ ಇರಾನ್ ಕೂಡ ಪ್ರತಿದಾಳಿ ಆರಂಭ ಮಾಡುವ ಭೀತಿ ಕೂಡ ಆವರಿಸಿದೆ. ಮಧ್ಯಪ್ರಾಚ್ಯ ಭಾಗದಲ್ಲಿ ಈ ದೊಡ್ಡ ತಲೆನೋವು ಆದಷ್ಟು ಬೇಗ ಬಗೆಹರಿಯಲಿ ಎಂದು ಜನರು ಕೂಡ ಪ್ರಾರ್ಥನೆ ಮಾಡುವಂತೆ ಆಗಿದೆ.












Click it and Unblock the Notifications