ಇರಾನ್ ಮತ್ತು ಅಮೆರಿಕ ಪರಮಾಣು ಮಾತುಕತೆ ಬಹುತೇಕ ಯಶಸ್ಸು ಕಾಣುವ ವಿಶ್ವಾಸ | USA And Iran

ಅಮೆರಿಕ ಮತ್ತು ಇರಾನ್ ನಡುವೆ ಹೇಗಾದರೂ ಒಂದು ಶಾಂತಿ ಒಪ್ಪಂದ ಮಾಡಿಸಬೇಕು, ಈ ಮೂಲಕ ಎರಡೂ ದೇಶಗಳನ್ನ ಸೈಲೆಂಟ್ ಮಾಡಿ ಯುದ್ಧ ತಪ್ಪಿಸಬೇಕು. ಆಗ ಮಧ್ಯಪ್ರಾಚ್ಯ ಮಾತ್ರ ಅಲ್ಲದೇ ಇಡೀ ಜಗತ್ತು ನೆಮ್ಮದಿಯಾಗಿ ಜೀವನ ಮಾಡಬಹುದು ಎಂಬ ನಿರೀಕ್ಷೆ ಮೂಡಿದೆ. ಇಂತಹ ಮಹತ್ವದ ಸಮಯದಲ್ಲಿ ದಿಢೀರ್ ಅಂತಾ ಇರಾನ್ ಮತ್ತು ಅಮೆರಿಕ ಪರಮಾಣು ಮಾತುಕತೆ ಬಹುತೇಕ ಯಶಸ್ಸು ಕಾಣುವ ವಿಶ್ವಾಸ ಕೂಡ ಮೂಡಿದೆ. ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ 3ನೇ ಸುತ್ತಿನ ಪರಮಾಣು ಮಾತುಕತೆ ಅಂತಿಮ ಹಂತ ತಲುಪಿದ್ದು, ಜಗತ್ತಿನ ಗಮನ ಸೆಳೆದಿದೆ.

ಇರಾನ್ ಒಂದೇ ಸಮನೇ ಹಠ ಮಾಡುತ್ತಿದ್ದು, ಅಮೆರಿಕ ಎದುರು ತಗ್ಗಿಬಗ್ಗಿ ನಡೆಯಲ್ಲ ಎನ್ನುತ್ತಿದೆ. ಅದರಲ್ಲೂ ಪರಮಾಣು ಶಕ್ತಿ ವಿಚಾರದಲ್ಲಿ ಪದೇ ಪದೇ ಅಮೆರಿಕ ಮತ್ತು ಇರಾನ್ ಗಲಾಟೆ ನಡೆಯುತ್ತಾ ಇತ್ತು. ಇರಾನ್ ತನ್ನ ಪರಮಾಣು ಶಕ್ತಿಯನ್ನು ಕೇವಲ ಶಾಂತಿ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿಲ್ಲ, ಪರಮಾಣು ಅಸ್ತ್ರಗಳನ್ನು ತಯಾರಿಸಲು ಇರಾನ್ ಮುಂದಾಗಿದೆ ಎಂಬ ಆರೋಪ ಮಾಡಲಾಗಿತ್ತು. ಈ ಹಿನ್ನೆಲೆ ಪದೇ ಪದೇ ಎರಡೂ ದೇಶಗಳ ನಡುವೆ ಕಿರಿಕ್ ಆಗಿ, ಇಸ್ರೇಲ್ ಕೂಡ ಹಲವು ಗಂಭೀರವಾದ ಆರೋಪ ಮಾಡಿತ್ತು. ಹೀಗಿದ್ದಾಗ ಈಗಾಗಲೇ 2 ಸುತ್ತಿನ ಮಾತುಕತೆ ನಡೆಸಲಾಗಿದ್ದು, ಇದೀಗ ಮತ್ತೆ ಒಂದು ಸುತ್ತಿನಲ್ಲಿ ಎಂದರೆ 3ನೇ ಸುತ್ತಿನಲ್ಲಿ ಸ್ವಿಝರ್ಲ್ಯಾಂಡ್‌ನ ಜಿನೇವಾದಲ್ಲಿ ಅಮೆರಿಕ & ಇರಾನ್ ಚರ್ಚೆ ನಡೆಸುತ್ತಿವೆ.

USA And Iran

ಮಾತುಕತೆ ಯಶಸ್ಸು ಕಾಣುವ ವಿಶ್ವಾಸ

ಇರಾನ್ ವಿದೇಶಾಂಗ ಸಚಿವರು ಈ ಚರ್ಚೆಯ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ಅಮೆರಿಕ ಜೊತೆಗಿನ ಚರ್ಚೆ ಯಶಸ್ಸು ಕಾಣುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ 2 ಸುತ್ತಿನ ಮಾತುಕತೆ ಸೋತು ಹೋಗಿದ್ದು ಯುದ್ಧದ ಆತಂಕ ಹೆಚ್ಚಿಸಿತ್ತು. ಆದರೆ ಇದೀಗ ಖುದ್ದು ಇರಾನ್ ಹೊಸ ಹಂತದ ಮಾತುಕತೆ ಯಶಸ್ಸು ಕಾಣುವ ವಿಶ್ವಾಸ ವ್ಯಕ್ತಪಡಿಸಿರುವುದು ಗಮನ ಸೆಳೆದಿದೆ. ಮತ್ತೊಂದು ಕಡೆ ಅಮೆರಿಕದ ಅಧಿಕಾರಿಗಳು ಕೂಡ ಈ ಬಗ್ಗೆ ವಿಶ್ವಾಸ ತುಂಬಿಕೊಂಡಿದ್ದು, ಇಂದು ಕೂಡ ಚರ್ಚೆ ಮುಂದುವರಿಯಲಿದೆ. ಹೀಗಾಗಿ ಇಂದೇ ಪರಮಾಣು ಒಪ್ಪಂದಕ್ಕೆ ಎರಡೂ ದೇಶಗಳು ಸಹಿ ಹಾಕುವ ನಿರೀಕ್ಷೆ ಕೂಡ ಇದೆ. ಪ್ರಪಂಚದ ಕಣ್ಣು ಸ್ವಿಝರ್ಲ್ಯಾಂಡ್‌ನ ಜಿನೇವಾದ ಮೇಲೆ ನೆಟ್ಟಿದ್ದು, ದೊಡ್ಡ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+