• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏರ್‌ಪೋರ್ಟ್‌ನಲ್ಲಿ ಮಹಿಳೆಯ ಕೈಚೀಲದೊಳಗಿತ್ತು 6 ದಿನದ ಶಿಶು

|

ಮನಿಲಾ, ಸೆಪ್ಟೆಂಬರ್ 6: ಅಮೆರಿಕದ ಮಹಿಳೆಯು ಮಗುವಿನ ಕಳ್ಳಸಾಗಣಿಕೆಯಲ್ಲಿ ಫಿಲಿಪೈನ್ಸ್‌ ರಾಜಧಾನಿಯಾದ ಮನಿಲಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಾಳೆ.

ಆಕೆಯ ಬ್ಯಾಗಿನಲ್ಲಿ 6 ದಿನದ ಹಸುಗೂಸು ಇತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಕೆಯ ವಿರುದ್ಧ ಮಾನವ ಕಳ್ಳಸಾಗಣೆ ಹಾಗೂ ಅಪಹರಣ ಪ್ರಕರಣ ದಾಖಲಿಸಲಾಗಿದೆ.

ತಾಯಿಯ ಬೆಚ್ಚನೆ ಅಪ್ಪುಗೆಯಲ್ಲಿ ಮಲಗಿದ್ದ ಮಗು ಅಪಹರಣ, ಅತ್ಯಾಚಾರ, ಕೊಲೆ

ಜನಿಫರ್ ಟಾಲ್‌ಬೋಟ್ (43) ಆರೋಪಿ ಮಹಿಳೆ, ವಿದೇಶದಿಂದ ಮಕ್ಕಳನ್ನು ಕದ್ದು ತಮ್ಮ ದೇಶಕ್ಕೆ ತರುತ್ತಿದ್ದರು , ಅವರ ಪಾಸ್‌ಪೋರ್ಟ್, ವೀಸಾ ಯಾವುದರಲ್ಲೂ ದೋಷವಿರಲಿಲ್ಲ. ಆಕೆಯ ಕೈಯಲ್ಲದ್ದ ವೈರ್ ಬ್ಯಾಗಿನಲ್ಲಿ ಶಿಶುವಿತ್ತು.

ಟಾಲ್‌ಬೋಟ್ ಅಮೆರಿಕದ ಓಹಿಯೋ ನಗರದವಳಾಗಿದ್ದು, ಆಕೆ ತನ್ನ ದೇಶಕ್ಕೆ ಹಿಂದಿರುಗುತ್ತಿದ್ದಳು. ಮಗುವಿನ ಕುರಿತ ದಾಖಲೆಯನ್ನು ನೀಡುವುದರಲ್ಲಿ ಆಕೆ ವಿಫಲಳಾದಾಗ ಆಕೆಯ ಮೇಲೆ ಅನುಮಾನ ಬಂದಿತ್ತು. ಪದೇ ಪದೇ ಏರ್‌ಪೋರ್ಟ್ ಅಧಿಕಾರಿಗಳು ಆಕೆಯನ್ನು ಪ್ರಶ್ನಿಸಿದಾಗ ತಾನು ಆ ಮಗುವಿನ ಆಂಟಿ ಎಂದು ಹೇಳಿದ್ದಳು.

ಮಗುವಿನ ತಾಯಿ ನೀಡಿದ್ದ ಹೇಳಿಕೆ ಪತ್ರ ಎನ್ನಲಾದ ಪತ್ರದಲ್ಲಿ ಯಾವುದೇ ಸಹಿ ಇರಲಿಲ್ಲ. ಫಿಲಿಪೈನ್ಸ್‌ನಲ್ಲಿರುವ ಶಿಶುವಿನ ತಾಯಿಯ ವಿರುದ್ಧವೂ ದೂರು ದಾಖಲಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

English summary
A female US national has been charged with human trafficking and kidnapping after she was caught at the international airport in the Philippine capital of Manila with a six-day-old baby hidden inside a bag.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X