ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಂದ ಹೊರಡುವಾಗ 73 ವಿಮಾನಗಳನ್ನು ನಿಷ್ಕ್ರಿಯಗೊಳಿಸಿದ ಅಮೆರಿಕ ಸೇನೆ

|
Google Oneindia Kannada News

ಕಾಬೂಲ್, ಆಗಸ್ಟ್ 31: 20 ವರ್ಷಗಳ ಸಂಘರ್ಷ ಅಂತ್ಯಗೊಳಿಸಿ ಅಫ್ಘಾನಿಸ್ತಾನದಿಂದ ಹೊರಡುವಾಗ ಅಮೆರಿಕ ಸೈನಿಕರು 73 ವಿಮಾನಗಳು ಸೇರಿದಂತೆ ಹಲವು ಸೇನಾ ವಾಹನಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ.

70 ಸೇನಾ ಲಾರಿಗಳು, 27 ಹಮ್ಮರ್ ಜೀಪುಗಳನ್ನೂ ಸೇನೆ ತಾಲಿಬಾನ್ ಕೈಗೆ ಸಿಗದಂತೆ, ಸಿಕ್ಕರೂ ಬಳಸಲು ಸಾಧ್ಯವಾಗದಂತೆ ಅಮೆರಿಕನ್ ಸೈನಿಕರು ಹಾಳುಗೆಡವಿದ್ದಾರೆ. ಒಂದೊಂದು ವಾಹನದ ಬೆಲೆಯೂ ಕೋಟ್ಯಂತರ ರೂ. ಗಳಷ್ಟಿದೆ.

ಅಫ್ಘಾನಿಸ್ತಾನ ತೊರೆದ ಕೊನೆಯ ಅಮೆರಿಕ ಸೇನಾಧಿಕಾರಿ ಚಿತ್ರ ಹಂಚಿಕೊಂಡ ರಕ್ಷಣಾ ಇಲಾಖೆಅಫ್ಘಾನಿಸ್ತಾನ ತೊರೆದ ಕೊನೆಯ ಅಮೆರಿಕ ಸೇನಾಧಿಕಾರಿ ಚಿತ್ರ ಹಂಚಿಕೊಂಡ ರಕ್ಷಣಾ ಇಲಾಖೆ

ಅಮೆರಿಕದ ಕಡೆಯ ಸೈನಿಕ ಆಫ್ಘನ್ ನೆಲದಲ್ಲಿ ಇರುವವರೆಗೂ ನಮ್ಮ ಶಸ್ತ್ರಾಗಾರವನ್ನು ಉಳಿಸಿಕೊಳ್ಳಲು ತೀರ್ಮಾನಿಸಿದ್ದೆವು. ತಾಲಿಬಾನ್ ಆಡಳಿತದಲ್ಲಿ ಪರಿಸ್ಥಿತಿ ಯಾವ ಕ್ಷಣದಲ್ಲಿ ಅಪಾಯಕಾರಿಯಾಗುವುದೋ ಎಂದು ಹೇಳಲು ಆಗದೆ ಇರುವುದರಿಂದ ತಮ್ಮ ಶಸ್ತ್ರಾಗಾರವನ್ನು ಉಳಿಸಿಕೊಂಡೆವು ಎಂದು ಅಮೆರಿಕ ರಕ್ಷಣಾ ಇಲಾಖೆ ತಿಳಿಸಿದೆ.

US Troops Disabled 73 Aircraft, Weapons Systems Before Leaving Kabul

ಅಮೆರಿಕ ಸೈನಿಕರು ನಿಷ್ಕ್ರಿಯಗೊಳಿಸಿರುವ ಸೇನಾ ಸಾಮಗ್ರಿಯಲ್ಲಿ 73 ಯುದ್ಧವಿಮಾನಗಳೂ ಸೇರಿವೆ. ನಿಷ್ಕ್ರಿಯಗೊಳಿಸಲಾಗಿರುವ ಯುದ್ಧವಿಮಾನಗಳನ್ನು ಇನ್ನುಮುಂದೆ ಯಾರೂ ಬಳಸಲಾಗುವುದಿಲ್ಲ ಎಂದು ಅಮೆರಿಕ ಖಚಿತ ಪಡಿಸಿದೆ.

ಬರೋಬ್ಬರಿ 2 ದಶಗಳ ಬಳಿಕ ಅಮೆರಿಕ ಸೇನೆಯು ತಾಲಿಬಾನ್ ಕಪಿಮುಷ್ಠಿಯಲ್ಲಿರುವ ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಹೊರಬಿದ್ದಿದೆ. 20 ವರ್ಷಗಳ ಮಿಲಿಟರಿ ಮಧ್ಯಸ್ಥಿಕೆಯ ನಂತರ ಕೊನೆಯ ಅಮೆರಿಕ ಪಡೆಗಳು ಆಗಸ್ಟ್ 31ರಂದು ಅಫ್ಘಾನ್ ದೇಶವನ್ನು ತೊರೆದಿವೆ. ಈ ಹಿನ್ನೆಲೆ ತಾಲಿಬಾನ್ ಭಯೋತ್ಪಾದಕರು, ಉಗ್ರ ಸಂಘಟನೆಯ ನಾಯಕರು ಭರ್ಜರಿ ಸಂಭ್ರಮಾಚರಣೆ ನಡೆಸಿದ್ದಾರೆ.

ಅಮೆರಿಕ ಸೇನೆ ಅಫ್ಘಾನ್ ದೇಶವನ್ನು ತೊರೆದ ಗಂಟೆಗಳ ಬಳಿಕ ತಾಲಿಬಾನ್ ನಾಯಕರ ಮೊಗದಲ್ಲಿ ಮಂದಹಾಸ ಮೂಡಿತ್ತು. ಮಂಗಳವಾರದಂದು ಅಫ್ಘಾನಿಸ್ತಾನದ ವಿಜಯಕ್ಕಾಗಿ ತಾಲಿಬಾನ್ ನ ಉನ್ನತ ವಕ್ತಾರರು ಅಭಿನಂದನೆ ಸಲ್ಲಿಸಿದರು. 'ಅಫ್ಘಾನಿಸ್ತಾನಕ್ಕೆ ಅಭಿನಂದನೆಗಳು ಈ ಗೆಲುವು ನಮ್ಮೆಲ್ಲರದ್ದು' ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಕಾಬೂಲ್ ವಿಮಾನ ನಿಲ್ದಾಣದ ರನ್ ವೇನಲ್ಲಿ ನಿಂತು ಸಂತೋಷ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 31ರಂದು ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಅಮೆರಿಕ ಸೇನೆ ವಾಪಸ್ ಆಗಲಿದೆ ಎಂದು ಅಧ್ಯಕ್ಷ ಜೋ ಬಿಡೆನ್ಹೇಳಿಕೆ ನೀಡಿದ್ದರು. ಅಮೆರಿಕ ಸೇನಾಪಡೆಯನ್ನು ಹಂತ ಹಂತವಾಗಿ ಅಮೆರಿಕ ವಾಪಸ್ ಕರೆಸಿಕೊಂಡ ಬಳಿಕ ತಾಲಿಬಾನ್ ಉಗ್ರರು ಕೂಡ ಹಂತ ಹಂತವಾಗಿ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ್ದರು.

ಇತ್ತೀಚೆಗಷ್ಟೇ ರಾಜಧಾನಿ ಕಾಬೂಲ್ ಅನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಜಯೋತ್ಸವ ಆಚರಿಸಿದ್ದರು. ಆ.31ರೊಳಗೆ ಅಮೆರಿಕ ಸೇನೆಯನ್ನು ಸಂಪೂರ್ಣವಾಗಿ ವಾಪಸ್‌ ಪಡೆಯದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ತಾಲಿಬಾನ್ ನಾಯಕರು ದೊಡ್ಡಣ್ಣನಿಗೆ ಎಚ್ಚರಿಕೆ ನೀಡಿದ್ದರು.

ಹೇಳಿದಂತೆ ನಡೆದುಕೊಂಡಿರುವ ಜೋ ಬೈಡನ್ ಸಂಪೂರ್ಣವಾಗಿ ತಮ್ಮ ಸೇನೆಯನ್ನು ವಾಪಸ್ ದೇಶಕ್ಕೆ ಕರೆಸಿಕೊಂಡಿದ್ದಾರೆ. ಮಂಗಳವಾರ ಅಫ್ಘಾನ್​​ನಿಂದ ಹೊರಬಿದ್ದ ಅಮೆರಿಕದ ಕೊನೆಯ ಯೋಧನ ಫೋಟೋವನ್ನು ಅಮೆರಿಕದ ರಕ್ಷಣಾ ಇಲಾಖೆ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

English summary
The US troops made their final exit from Afghanistan late on Monday night in a hasty retreat after 20 years of war that turned out to be America’s longest. Before leaving, the US military disabled a number of their choppers and armoured vehicles at the Kabul airport hangar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X