ಅಮೆರಿಕದಿಂದ ಭಾರತಕ್ಕೆ 200 ಅತ್ಯಮೂಲ್ಯ ಕಲಾಕೃತಿ ವಾಪಸ್

Posted By:
Subscribe to Oneindia Kannada

ವಾಷಿಂಗ್ಟನ್, ಜೂನ್ 07: ಭಾರತಕ್ಕೆ ಸೇರಿದ 200ಕ್ಕೂ ಅತ್ಯಮೂಲ್ಯ ಕಲಾಕೃತಿಗಳನ್ನು ಅಮೆರಿಕ ಹಿಂತಿರುಗಿಸಿದೆ. ಪ್ರಧಾನಿ ಮೋದಿ ಅವರು ಉಪಸ್ಥಿತರಿದ್ದ ಸಮಾರಂಭದಲ್ಲಿ ಸುಮಾರು 67 ಕೋಟಿ ರು ಗೂ ಅಧಿಕ ಮೌಲ್ಯದ ಕಲಾಕೃತಿಗಳನ್ನು ಹಸ್ತಾಂತರಿಸಲಾಯಿತು.

ವಾಷಿಂಗ್ಟನ್​ನ ಬ್ಲೇರ್ ಹೌಸ್​ನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೊದಿ ಅವರಿಗೆ ಕಲಾಕೃತಿಗಳನ್ನು ಹಸ್ತಾಂತರಿಸಲಾಯಿತು.
ಈ ಕಲಾಕೃತಿಗಳನ್ನು ಹಣಕ್ಕಾಗಿ ಮಾರಾಟ ಮಾಡಿರಬಹುದು. ಆದರೆ, ಇವು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಒಂದು ಭಾಗ. ಇವುಗಳನ್ನು ಭಾರತಕ್ಕೆ ಹಸ್ತಾಂತರಿರುವ ಅಮೆರಿಕಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರಧಾನಿ ಮೋದಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.

US returns 200 artifacts worth $100 million to India

ಅಮೆರಿಕ ಹಿಂದಿರುಗಿಸಿರುವ ಕಲಾಕೃತಿಗಳಲ್ಲಿ ಹಲವು ಸುಮಾರು 2000 ವರ್ಷಗಳಷ್ಟು ಹಳೆಯದಾಗಿವೆ. ಚೋಳರ ಕಾಲದ ಕವಿ ಸಂತ ಮನಿಕ್ಕವಿಚವಕರ್ ಪ್ರತಿಮೆಯನ್ನು ಚೆನ್ನೈನ ಶಿವನ್ ದೇವಾಲಯದಿಂದ ಕಳವು ಮಾಡಲಾಗಿತ್ತು. ಸುಮಾರು 1000 ವರ್ಷ ಹಳೆಯದಾದ ಗಣೇಶನ ಕಂಚಿನ ವಿಗ್ರಹ ಸೇರಿದಂತೆ ಹಲವು ಪುರಾತನ ಕಲ್ಲಿನ, ಕಂಚಿನ ಮತ್ತು ಟೆರ್ರಾಕೋಟಾದ ವಿಗ್ರಹ ಮತ್ತು ಕಲಾಕೃತಿಗಳನ್ನು ಅಮೆರಿಕ ಭಾರತಕ್ಕೆ ಹಸ್ತಾಂತರಿಸಿದೆ.

ಕಲಾಕೃತಿಗಳಿಗೆ ನೂರಾರು ಡಾಲರ್ ಮೌಲ್ಯ (ಯುಎಸ್ ಡಿ 100ಮಿಲಿಯನ್) ನಿಗದಿ ಪಡಿಸಬಹುದಾದರೂ ಅವುಗಳ ಪಾರಂಪರಿಕ, ಸಾಂಸ್ಕೃತಿಕ ಮೌಲ್ಯಗಳಿಗೆ ಬೆಲೆ ಕಟ್ಟಲಾಗದು ಎಂದು ಹೋಮ್ ಲ್ಯಾಂಡ್ ಕಾರ್ಯದರ್ಶಿ ಜೆಹ್ ಜಾನ್ಸನ್ ಅವರು ಅಭಿಪ್ರಾಯಪಟ್ಟಿದ್ದಾರೆ.

-
ಅಮೆರಿಕದಿಂದ ಭಾರತಕ್ಕೆ 200 ಅತ್ಯಮೂಲ್ಯ ಕಲಾಕೃತಿ ವಾಪಸ್

ಅಮೆರಿಕದಿಂದ ಭಾರತಕ್ಕೆ 200 ಅತ್ಯಮೂಲ್ಯ ಕಲಾಕೃತಿ ವಾಪಸ್

-
-
-
-
-
-
-
-
-
-

ಹುತಾತ್ಮರಿಗೆ ನಮನ ಸಲ್ಲಿಸಿದ ಮೋದಿ: ಅನಾಮಿಕ ಯೋಧರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ಮೋದಿ ಅವರು ನಂತರ ಭಾರತ ಮೂಲದ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಸಮಾಧಿ ಬಳಿ ತೆರಳಿ ನಮನ ಸಲ್ಲಿಸಿದರು.ಗಗನಯಾತ್ರಿ ಸುನಿತಾ ವಿಲಿಯಮ್ಸ್ ಹಾಗೂ ಅವರ ತಂದೆ ದೀಪಕ್ ಪಾಂಡ್ಯ ಮತ್ತು ನಾಸಾ ಅಧಿಕಾರಿಗಳನ್ನು ಮೋದಿ ಅವರು ಭೇಟಿ ಮಾಡಿ ಮಾತನಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The US today returned to India over 200 stolen cultural artifacts , some dating back 2,000 years, estimated at $100 million, with Prime Minister Narendra Modi describing the cultural heritage as a great binding force in bilateral relationships.
Please Wait while comments are loading...