ಭಾರತ, ಚೀನಾದಂಥ ದೇಶಗಳಿಗೆ ಅಮೆರಿಕ ಸಹಾಯಧನ ನೀಡಲ್ಲ: ಟ್ರಂಪ್
ಶಿಕಾಗೋ, ಸೆಪ್ಟೆಂಬರ್ 8 : ಅಭಿವೃದ್ಧಿ ಆಗುತ್ತಿರುವ ಭಾರತ ಹಾಗೂ ಚೀನಾದಂಥ ದೇಶಗಳಿಗೆ 'ಸಹಾಯಧನ' ನಿಲ್ಲಿಸಲು ಬಯಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ. ನನ್ನ ಪ್ರಕಾರ ಅಮೆರಿಕ ಕೂಡ ಅಭಿವೃದ್ಧಿ ಆಗುತ್ತಿರುವ ದೇಶ. ಉಳಿದೆಲ್ಲರಿಗಿಂತ ಅಮೆರಿಕ ವೇಗವಾಗಿ ಬೆಳೆಯಬೇಕು ಎಂದಿದ್ದಾರೆ.
ಉತ್ತರ ಡಕೋಟಾದ ಫಾರ್ಗೋ ನಗರದಲ್ಲಿ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿ, ಚೀನಾ ಇಷ್ಟು ದೊಡ್ಡ ಆರ್ಥಿಕ ದೈತ್ಯವಾಗಿ ಬೆಳೆಯಲು ಅವಕಾಶ ನೀಡಿದ್ದಕ್ಕೆ ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ವಿರುದ್ಧ ಆರೋಪ ಮಾಡಿದ್ದಾರೆ.
ನಾವು ಕೆಲವು ದೇಶವನ್ನು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆ ಅಂತ ಪರಿಗಣಿಸುತ್ತೇವೆ. ಆದರೆ ಅವು ಪ್ರಬುದ್ಧವಾಗಿವೆ. ಆದ್ದರಿಂದ ಅಂಥ ದೇಶಗಳಿಗೆ ನಾವು ಸಹಾಯ ಧನ (ಸಬ್ಸಿಡಿ) ನೀಡುವುದು ಹುಚ್ಚುತನ. ಭಾರತ, ಚೀನಾದಂಥ ದೇಶಗಳು ಅಭಿವೃದ್ಧಿ ಹೊಂದುತ್ತಿವೆ ಎಂದು ಅವರು ಹೇಳಿದ್ದಾರೆ.

ನಾವೂ ಅಭಿವೃದ್ಧಿ ಆಗುತ್ತಿರುವ ದೇಶ ಸರಿನಾ? ನನ್ನ ಪ್ರಕಾರ ಅಮೆರಿಕವೂ ಅಭಿವೃದ್ಧಿ ಹೊಂದುತ್ತಿರುವ ದೇಶ. ನಾವು ಆ ಸಾಲಿನಲ್ಲಿ ನಿಂತರೆ ಉಳಿದೆಲ್ಲರಿಗಿಂತ ವೇಗವಾಗಿ ಬೆಳೆಯುತ್ತೇವೆ ಎಂದು ಟ್ರಂಪ್ ಹೇಳುತ್ತಿದ್ದಂತೆ ಪ್ರೇಕ್ಷಕರಿಂದ ಚಪ್ಪಾಳೆ ಕೇಳಿಬಂತು.
ನಾನು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ದೊಡ್ಡ ಅಭಿಮಾನಿ. ಆದರೆ ಅವರಿಗೆ ನಾನು ಹೇಳಿದ್ದೇನೆ: ನಾವು ನ್ಯಾಯಬದ್ಧವಾಗಿ ಇರಬೇಕು. ಅಮೆರಿಕದಿಂದ 500 ಬಿಲಿಯನ್ ಡಾಲರ್ ಅನ್ನು ತೆಗೆದುಕೊಂಡು ಹೋಗುವುದಕ್ಕೆ ಹಾಗೂ ತಾನು ಮತ್ತೆ ಬೆಳೆಯಲು ಬಿಡುವುದಕ್ಕೆ ಆಗಲ್ಲ ಎಂದು ಹೇಳಿದ್ದಾರೆ.
ಇದೂ ಸರಿ. ಆದರೆ ಇದಕ್ಕೆ ನಮಗೆ ವಾಪಸ್ ಏನಾದರೂ ನೀಡಬೇಕು. ಆದರೆ ಇಡೀ ಜಗತ್ತು ನೋಡುತ್ತಿದ್ದೇವೆ ಮತ್ತು ನಾವು ನೀಡುವುದನ್ನು ಸುಮ್ಮನೆ ಸ್ವೀಕರಿಸುತ್ತಿವೆ ಅಷ್ಟೇ ಎಂದಿದ್ದಾರೆ.
"ವರ್ಷಗಟ್ಟಲೆ ಕಾಲ ಈ ದೇಶಗಳ ರಕ್ಷಣೆ ಮಾಡುತ್ತಿದ್ದೇವೆ. ಅವರು ಅದೃಷ್ಟ ಮಾಡಿದ್ದಾರೆ. ಅವರ ಸೇನೆಯ ಖರ್ಚು ವಿಪರೀತ ಕಡಿಮೆ. ಆದರೆ ನಮಗೆ ಜಗತ್ತಿನಲ್ಲೇ ಅತಿ ಹೆಚ್ಚು ಖರ್ಚು ಸೇನೆಗೆ ಆಗುತ್ತದೆ. ಹೊರ ದೇಶಗಳ ರಕ್ಷಣೆಗೇ ಇದರಲ್ಲಿ ಬಹು ಪಾಲು ವೆಚ್ಚ ವಾಗುತ್ತದೆ. ಆ ಪೈಕಿ ಕೆಲವರಿಗೆ ನಮ್ಮನ್ನು ಕಂಡರೆ ಕೂಡ ಆಗಲ್ಲ" ಎಂದು ಟ್ರಂಪ್ ಕಿಡಿ ಕಾರಿದ್ದಾರೆ.
"ನಾವು ಯಾವ ದೇಶಗಳ ರಕ್ಷಣೆ ಮಾಡುತ್ತಿದ್ದೇವೋ ಅವುಗಳ ಬಗ್ಗೆ ಹೇಳುತ್ತಿದ್ದೇನೆ. ಅವರು ನಮ್ಮ ಬಗ್ಗೆ ಗೌರಬ ಇಟ್ಟುಕೊಳ್ಳಲೇಬೇಕು. ಆದರೆ ನಮ್ಮ ಬಗ್ಗೆ ಗೌರವವಿಲ್ಲ ಅಂತಾದರೆ ವಾಪಸ್ ಪಾವತಿ ಮಾಡಬೇಕು. ಅವರು ಶ್ರೀಮಂತರಾದಾಗ ನಮಗೆ ವಾಪಸ್ ಮಾಡಬೇಕು" ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.












Click it and Unblock the Notifications