ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡ ಯುಎಸ್

|
Google Oneindia Kannada News

ವಾಶಿಂಗ್ಟನ್, ಫೆಬ್ರವರಿ 25: ಉಕ್ರೇನ್‌ನ ಮೇಲೆ ದಾಳಿ ನಡೆಸುವುದಕ್ಕೆ ಒಂದು ತಿಂಗಳಿಗಿಂತ ಮೊದಲೇ ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿದ್ದ ರಷ್ಯಾದ ಯುದ್ಧದಾಹದ ವಿರುದ್ಧ ಯುಎಸ್ ಅಧ್ಯಕ್ಷ ಜೋ ಬೈಡನ್ ಸಿಡಿಮಿಡಿಗೊಂಡಿದ್ದಾರೆ.

ಗುರುವಾರ ರಾತ್ರಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಧ್ಯಕ್ಷ ಜೋ ಬೈಡನ್, ಅಮೆರಿಕಾದಲ್ಲಿರುವ ರಷ್ಯಾದ ಎಲ್ಲಾ ಸ್ವತ್ತುಗಳನ್ನು ಫ್ರೀಜ್ ಮಾಡಲಾಗುವುದು ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇದರ ಜೊತೆಗಿನ ರಫ್ತು ನಿಯಮಗಳ ಮೇಲೆ ನಿರ್ಬಂಧ ಮತ್ತು ನಿಯಂತ್ರಣವನ್ನು ಘೋಷಿಸಿದ್ದಾರೆ.

ಉಕ್ರೇನ್‌ನಲ್ಲಿ ರಷ್ಯಾದ ವಿರುದ್ಧ ನಮ್ಮ ಸೇನೆ ಸಂಘರ್ಷಕ್ಕೆ ಇಳಿಯಲ್ಲ: ಜೋ ಬೈಡೆನ್‌ಉಕ್ರೇನ್‌ನಲ್ಲಿ ರಷ್ಯಾದ ವಿರುದ್ಧ ನಮ್ಮ ಸೇನೆ ಸಂಘರ್ಷಕ್ಕೆ ಇಳಿಯಲ್ಲ: ಜೋ ಬೈಡೆನ್‌

"ಇಂದು ರಷ್ಯಾದ ರಫ್ತು ನಿಯಮಗಳ ಮೇಲೆ ಹೆಚ್ಚುವರಿ ನಿರ್ಬಂಧ ಹಾಗೂ ನಿಯಂತ್ರಣವನ್ನು ಘೋಷಿಸುತ್ತಿದ್ದೇನೆ. ಅಮೆರಿಕಾದಲ್ಲಿ ಇರುವ ರಷ್ಯಾದ ಎಲ್ಲಾ ಸ್ವತ್ತನ್ನು ಫ್ರೀಜ್ ಮಾಡಲಾಗುತ್ತದೆ," ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ತಿಳಿಸಿರುವ ಬಗ್ಗೆ ಶ್ವೇತ ಭವನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

US President Joe Biden Decided to Frozen All Russian Assets in America

ರಷ್ಯಾದ ಹಣಕಾಸು ಸಾಮರ್ಥ್ಯ ತಗ್ಗಿಸಲು ನಿರ್ಧಾರ:

ಜಾಗತಿಕ ಮಾರುಕಟ್ಟೆಯ ಭಾಗವೇ ಆಗಿರುವ ಡಾಲರ್, ಯುರೋ, ಪೌಂಡ್ ಮತ್ತು ಯೆನ್ ವಹಿವಾಟಿನ ಮೇಲೆ ರಷ್ಯಾದ ಸಾಮರ್ಥ್ಯವನ್ನು ನಿಯಂತ್ರಿಸಲಾಗುವುದು ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ರಷ್ಯಾದ ಹಣಕಾಸು ಸಾಮರ್ಥ್ಯ ಹಾಗೂ ಸೇನಾ ಬೆಳವಣಿಗೆಯ ಸಾಮರ್ಥ್ಯವನ್ನು ತಡೆಯಲು ನಿರ್ಧರಿಸಿದ್ದೇವೆ. 21ನೇ ಶತಮಾನದ ಹೈಟೆಕ್ ಆರ್ಥಿಕತೆಯಲ್ಲಿ ರಷ್ಯಾ ಸ್ಪರ್ಧಿಸುವ ಶಕ್ತಿಯ ಮೇಲೆ ನಿರ್ಬಂಧ ವಿಧಿಸಲಾಗುತ್ತದೆ ಎಂದಿದ್ದಾರೆ.

ರಷ್ಯಾದ ನಾಲ್ಕು ಬ್ಯಾಂಕುಗಳ ಮೇಲೆ ನಿರ್ಬಂಧ:

ಯುನೈಟೆಡ್ ಸ್ಟೇಟ್ಸ್ ರಷ್ಯಾದ ನಾಲ್ಕು ಪ್ರಮುಖ ಬ್ಯಾಂಕುಗಳ ಮೇಲೆ ನಿರ್ಬಂಧವನ್ನು ವಿಧಿಸಿದೆ. ಇದರ ಅರ್ಥ ಅಮೆರಿಕಾದಲ್ಲಿ ಇರುವ ರಷ್ಯಾದ ಎಲ್ಲಾ ಸ್ವತ್ತುಗಳನ್ನು ಫ್ರೀಜ್ ಮಾಡುವುದೇ ಆಗಿದೆ. ಅದರ ಭಾಗವಾಗಿ ರಷ್ಯಾದ ಎರಡನೇ ಅತಿದೊಡ್ಡ ಬ್ಯಾಂಕ್ ಆಗಿರುವ ವಿಟಿಬಿಯನ್ನು ನಿರ್ಬಂಧಿಸಲಾಗಿದೆ," ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಪುಟಿನ್ ಜೊತೆ ಮಾತನಾಡುವ ಪ್ರಶ್ನೆಯೇ ಇಲ್ಲ:

ನ್ಯಾಟೋ ರಾಷ್ಟ್ರಗಳ ಪ್ರತಿ ಇಂಚು ಪ್ರದೇಶವನ್ನು ರಕ್ಷಿಸುವುದಕ್ಕೆ ನಾವು ಪ್ರತಿಜ್ಞೆ ಮಾಡಿದ್ದೇವೆ. ಈ ವಿಷಯದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಮಾತನಾಡುವ ಪ್ರಶ್ನೆಯೇ ಇಲ್ಲ ಎಂದು ಜೋ ಬೈಡನ್ ಪ್ರತಿಕ್ರಿಯೆ ನೀಡಿದ್ದಾರೆ.

Recommended Video

ಯುದ್ಧ ನಿಲ್ಲಿಸಿ ಎಂದ ಮೋದಿ ಮನವಿಗೆ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದ್ದೇನು? | Oneindia Kannada

ನಾನು ಪ್ರತಿಜ್ಞೆ ಮಾಡುತ್ತಿದ್ದೇನೆ, ನ್ಯಾಟೋ ಪ್ರದೇಶದ ಪ್ರತಿಯೊಂದು ಇಂಚು ಪ್ರದೇಶವನ್ನು ರಕ್ಷಿಸಿಕೊಳ್ಳುವುದಕ್ಕೆ ಯುಎಸ್ ಸಂಪೂರ್ಣ ಬದ್ಧವಾಗಿದೆ. ರಷ್ಯಾ ದಾಳಿಗೆ ಪ್ರತಿಯಾಗಿ ಉಕ್ರೇನ್‌ನಲ್ಲಿ ಯುಎಸ್ ಸೇನೆಯು ತೊಡಗಿಸಿಕೊಳ್ಳುವುದಿಲ್ಲ ಎಂದು ಬೈಡನ್ ಸ್ಪಷ್ಟಪಡಿಸಿದ್ದಾರೆ.

English summary
US President Joe Biden Decided to Frozen All Russian Assets in America. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X