ಮಾಧ್ಯಮಗಳ ಮೇಲೆ ಹರಿಹಾಯ್ದ ಯುಎಸ್ ಅಧ್ಯಕ್ಷ ಟ್ರಂಪ್

Posted By:
Subscribe to Oneindia Kannada

ವಾಷಿಂಗ್ಟನ್, ಜನವರಿ 22: 'ಅಮೆರಿಕದ 45ನೇ ಅಧ್ಯಕ್ಷನಾಗಿ ಪ್ರಮಾಣವಚನ ಸ್ವೀಕಾರದ ವೇಳೆ ಹೆಚ್ಚು ಜನರು ಸೇರಿರಲಿಲ್ಲ ಎಂದು ವರದಿ ಮಾಡಿರುವ 'ಮಾಧ್ಯಮದವರು ಜಗತ್ತಿನ ಅತ್ಯಂತ ಅಪ್ರಮಾಣಿಕ ಜೀವಿಗಳು' ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ.

ನಾನು ಅಧ್ಯಕ್ಷ ಪದವಿ ಸ್ವೀಕರಿಸಿದ ಸಂದರ್ಭದಲ್ಲಿ ಲಕ್ಷಾಂತ್ರ ಮಂದಿ ಕಿಕ್ಕಿರಿದು ಸೇರಿದ್ದರು. ಆದರೆ, ಬೆಳಗ್ಗೆ ಸುದ್ದಿವಾಹಿಯೊಂದರ ವರದಿ ನೋಡಿದಾಗ ಅಚ್ಚರಿಯಾಯಿತು. ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಹೆಚ್ಚು ಜನರು ಸೇರಿರಲಿಲ್ಲ ಎಂದು ಖಾಲಿ ಜಾಗ ತೋರಿಸಲಾಗುತ್ತಿತ್ತು.

US President Donald Trump wages war on Media

ಆದರೆ, ಮಾಧ್ಯಮ ವರದಿ ಸುಳ್ಳು. ನಾನು ಪ್ರಮಾಣವಚನ ಸ್ವೀಕರಿಸಿದ್ದನ್ನು ಸುಮಾರು ಒಂದೂವರೆ ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಭಾಂಗಣದಲ್ಲಿ ಮಾತ್ರವಲ್ಲ, ವಾಷಿಂಗ್ಟನ್ ಸ್ಮಾರಕದ ಸೇರಿದಂತೆ ಬೀದಿ ಬದಿಯಲ್ಲೂ ಜನರು ಕಿಕ್ಕಿರಿದು ಸೇರಿದ್ದರು ಎಂದು ಟ್ರಂಪ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
US President Donald Trump used his first full day in office to wage war on the media, accusing news organizations of lying about the size of his inauguration crowd as Saturday's huge protests served notice that a vocal and resolute opposition would be a hallmark of his presidency.
Please Wait while comments are loading...