Donald Trump: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಗ್ಯ ತಪಾಸಣೆ
ಅಮೆರಿಕ ಅಧ್ಯಕ್ಷರು ಅಂದ್ರೆ ಇಡೀ ಜಗತ್ತಿನಲ್ಲೇ ಪವರ್‌ಫುಲ್ ಮನುಷ್ಯ, ಯಾಕೆ ಅಂದ್ರೆ ಇದೇ ಅಮೆರಿಕ ಇಡೀ ಜಗತ್ತಿನ ಅತ್ಯಂತ ಶಕ್ತಿಶಾಲಿ ದೇಶವಾಗಿದೆ. ಇಂತಹ ದೇಶಕ್ಕೆ ಅಧ್ಯಕ್ಷರ ಮಾತೇ ಫೈನಲ್. ಹೀಗಿದ್ದಾಗ ಅಮೆರಿಕ ಅಧ್ಯಕ್ಷರ ಬಗ್ಗೆ ಸಾಕಷ್ಟು ದೊಡ್ಡ ಮಟ್ಟದ ಕಾಳಜಿಯನ್ನು ವಹಿಸಲಾಗುತ್ತದೆ. ಅದೇ ರೀತಿ ಅಮೆರಿಕ ಅಧ್ಯಕ್ಷರ ಆರೋಗ್ಯದ ಬಗ್ಗೆ ಕೂಡ ಕಾಳಜಿ ವಹಿಸಿ ಪ್ರತಿಕ್ಷಣವೂ ಕಣ್ಣಿಟ್ಟಿರುತ್ತಾರೆ ವೈದ್ಯರು. ಇದೀಗ ದಿಢೀರ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ.
ವಾಷಿಂಗ್ಟನ್ ಆಸ್ಪತ್ರೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೆಲ್ತ್ ಚೆಕಪ್‌ಗೆ ಒಳಗಾಗಿದ್ದಾರೆ. 78 ವರ್ಷ ವಯಸ್ಸಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೀಗ 2ನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದ್ದರು ಡೊನಾಲ್ಡ್ ಟ್ರಂಪ್. ಆದ್ರೆ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಹೀನಾಯ ಸೋಲು ಕಂಡಿದ್ದರು. ಇದೀಗ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲೂ ಗೆದ್ದು 2ನೇ ಬಾರಿಗೆ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಾಗಾದ್ರೆ ದಿಢೀರ್ ಅವರಿಗೆ ಹೆಲ್ತ್ ಚೆಕಪ್ ಮಾಡಿದ್ದು ಏಕೆ?

ಡೊನಾಲ್ಡ್ ಟ್ರಂಪ್ ಆರೋಗ್ಯ ಹೇಗಿದೆ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆರೋಗ್ಯ ತಪಾಸಣೆ ಬಳಿಕ ಮಾಹಿತಿ ನೀಡಿದ್ದು, ನಾನು ಆರೋಗ್ಯವಾಗೇ ಇದ್ದೇನೆ ಎಂದಿದ್ದಾರೆ. ಅಲ್ಲದೆ ಹೃದಯದ ಕಾರ್ಯ ಹಾಗೂ ನೆನಪಿನ ಸಾಮರ್ಥ್ಯವೂ ಚೆನ್ನಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಆದ್ರೆ ಶ್ವೇತಭವನದ ವೈದ್ಯರ ಪ್ರಕಾರ ಟ್ರಂಪ್ ಅವರ ಆರೋಗ್ಯ ತಪಾಸಣಾ ವರದಿ ಈ ವಾರದ ಅಂತ್ಯಕ್ಕೆ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ. ಹೀಗಾಗಿ ಟ್ರಂಪ್ ಬೆಂಬಲಿಗರಿಗೆ ಒಂದಷ್ಟು ನೆಮ್ಮದಿಯ ಸುದ್ದಿ ಸಿಕ್ಕಂತಾಗಿದ್ದು, ರಾಷ್ಟ್ರೀಯ ಸೇನಾ ಆರೋಗ್ಯ ಕೇಂದ್ರದಲ್ಲಿ ಸತತ 5 ಗಂಟೆಗಳ ಕಾಲ ಟ್ರಂಪ್ ಇದ್ದರು.
ಆರ್ಥಿಕ ಸಂಕಷ್ಟಕ್ಕೆ ನಲುಗಿದ ಅಮೆರಿಕ
ಅಮೆರಿಕ ಶ್ರೀಮಂತ ದೇಶವಾಗಿದ್ದರೂ ಮೈತುಂಬಾ ಸಾಲ ಮಾತ್ರ ಇದ್ದು, ಹೀಗಾಗಿ ಅಲ್ಲಿನ ಸರ್ಕಾರ ದುಡ್ಡು ಹೊಂದಿಸಲು ಪರದಾಡುತ್ತಿದೆ. ಅಮೆರಿಕದ ಸರ್ಕಾರಗಳು ಈಗಾಗಲೇ ಭಾರಿ ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿಕೊಂಡು ನರಳಾಡುತ್ತಿದ್ದು, ಸಾಲಕ್ಕೆ ಬಡ್ಡಿ ಕಟ್ಟೋಕು ಒದ್ದಾಡಿ ಹೋಗಿವೆ.
ಅದರಲ್ಲೂ ಡೊನಾಲ್ಡ್ ಟ್ರಂಪ್ ಅವರು ಈಗ ಈ ವಿಚಾರದಲ್ಲಿ ಸಿಕ್ಕಾಪಟ್ಟೆ ಚಿಂತೆ ಮಾಡುವಂತೆ ಆಗಿದೆ. ಇದೇ ಕಾರಣಕ್ಕೆ, ಬೇರೆ ಬೇರೆ ದೇಶಗಳ ಮೇಲೆ ಹೆಚ್ಚಿನ ಟ್ಯಾಕ್ಸ್ ಹಾಕುವ ಮೂಲಕ ತಾವು ಆರ್ಥಿಕ ಸಂಕಷ್ಟದಿಂದ ಬಚಾವ್ ಆಗಲು ಟ್ರಂಪ್ ಮುಂದಾಗಿದ್ದರು. ಡೊನಾಲ್ಡ್ ಟ್ರಂಪ್ ಇಷ್ಟೆಲ್ಲಾ ಕಠಿಣ ನಿರ್ಧಾರ ಕೈಗೊಂಡರೂ ಅಮೆರಿಕದ ಆರ್ಥಿಕ ಪರಿಸ್ಥಿತಿ ಸರಿಯಾಗುವ ಬಗ್ಗೆ ನಿರೀಕ್ಷೆ ಇಲ್ಲ.












Click it and Unblock the Notifications