ಜಿಇಎಸ್ ಕುರಿತು ಫೋನಿನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್, ಡಿಸೆಂಬರ್ 02: ಕಳೆದ ವಾರ ಹೈದರಾಬಾದಿನಲ್ಲಿ ನಡೆದ ಮೂರು ದಿನಗಳ ಜಾಗತಿಕ ಉದ್ಯಮಶೀಲತಾ ಸಭೆ(GES) ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಫೋನಿನಲ್ಲಿ ಮಾತನಾಡಿದ ಟ್ರಂಪ್, ಜಾಗತಿಕ ಸಮಾವೇಶವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Women, First Priority for All(ಮಹಿಳೆ, ಎಲ್ಲರ ಮೊದಲ ಆದ್ಯತೆ) ಎಂಬ ಧ್ಯೇಯ ವಾಕ್ಯದೊಂದಿಗೆ ನಡೆದ ಮೂರು ದಿನಗಳ ಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಭಾಗವಹಿಸಿದ್ದರು. ಅಮೆರಿಕವನ್ನು ಪ್ರತಿನಿಧಿಸಿದ್ದ ಅವರು 150 ದೇಶಗಳ, 1500 ಸದಸ್ಯರ ಎದುರು ಮಾತನಾಡಿದ್ದರು. ಭಾರತದ ಕುರಿತು ಈ ಸಂದರ್ಭದಲ್ಲಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.












Click it and Unblock the Notifications