Donald Trump: ಚೀನಾ ವಿರುದ್ಧ ಗುಡುಗಿದ ಡೊನಾಲ್ಡ್ ಟ್ರಂಪ್- ಮುಂದೇನು ಕಥೆ?
ಡೊನಾಲ್ಡ್ ಟ್ರಂಪ್ & ಚೀನಾ ನಡುವೆ ಘೋರ ತೆರಿಗೆ ಯುದ್ಧ ಆರಂಭವಾಗಿ, ಇಡೀ ಜಗತ್ತು ಇದೀಗ ವಿಲವಿಲ ಒದ್ದಾಡುವ ಪರಿಸ್ಥಿತಿ ಬಂದಿದೆ. ಡೊನಾಲ್ಡ್ ಟ್ರಂಪ್ ಮನಸ್ಸಿಗೆ ಬಂದಂತೆ, ಬೇಕಾಬಿಟ್ಟಿ ತೆರಿಗೆ ಹೇರಿಕೆ ಮಾಡುತ್ತಿದ್ದಾರೆ ಅನ್ನೋ ಆರೋಪ ಹಿನ್ನೆಲೆ ಚೀನಾ ಕೂಡ ಈಗ ರೊಚ್ಚಿಗೆದ್ದು ಅಮೆರಿಕ ವಿರುದ್ಧ ರಣತಂತ್ರ ರೂಪಿಸುತ್ತಿದೆ. ಇದೇ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಚೀನಾ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?
ಟ್ರಂಪ್ ತಮ್ಮ ಹಠಮಾರಿ ಧೋರಣೆ ಕಾರಣಕ್ಕೆ ಈಗಾಗಲೇ ಸಾಕಷ್ಟು ವಿಚಾರದಲ್ಲಿ ಅಮೆರಿಕ ಹಿಂದುಳಿಯುವ ರೀತಿ ಮಾಡಿದ್ದಾರೆ ಎಂಬ ಆರೋಪ ಇದೆ. ಅದರಲ್ಲೂ ಆರ್ಥಿಕವಾಗಿ ಇದೇ ಟ್ರಂಪ್ ಅಮೆರಿಕದ ಪರಿಸ್ಥಿತಿಯನ್ನು ಬೀದಿಗೆ ತಳ್ಳುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ. ಒಂದು ಕಡೆ ಎದುರಾಳಿ ದೇಶಗಳ ವಿರುದ್ಧ ಅತಿಹೆಚ್ಚು ತೆರಿಗೆ ಹೇರಿಕೆ ಮಾಡುವ ಮೂಲಕ, ಅಮೆರಿಕದ ಆರ್ಥಿಕತೆ ಸುಧಾರಿಸುವ ಮಾತು ಆಡುತ್ತಿದ್ದಾರೆ ಟ್ರಂಪ್. ಈ ಮೂಲಕ ಮತ್ತೊಂದು ಕಡೆ ಯುರೋಪ್, ಭಾರತ & ಚೀನಾ ಸೇರಿದಂತೆ ಕೆನಡಾ ಮೇಲೂ ತೆರಿಗೆಯ ಭಾರ ಬಿದ್ದಿದೆ.

ಟ್ರಂಪ್ ರೊಚ್ಚಿಗೇಳಲು ಕಾರಣ ಏನು?
ಹೀಗಿದ್ದಾಗ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವೇ ಇದೀಗ ಅಮೆರಿಕದ ಆರ್ಥಿಕತೆಯ ಬುಡ ಅಲುಗಾಡುವಂತೆ ಮಾಡುತ್ತಿದೆ. ಅದರಲ್ಲೂ ಚೀನಾ ದೇಶದ ಅಧ್ಯಕ್ಷ ಜಿನ್‌ಪಿಂಗ್ ಅವರು ಈಗ ದೊಡ್ಡಣ್ಣ ಅಮೆರಿಕ ವಿರುದ್ಧ ಹಲವು ದೇಶಗಳನ್ನ ಎತ್ತಿಕಟ್ಟುತ್ತಿರುವ ಆರೋಪ ಕೇಳಿ ಬಂದಿದೆ. ಈಗಾಗಲೇ ಯುರೋಪ್ ಜೊತೆಯಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಿರುವ ಚೀನಾ, ಭಾರತದ ಜೊತೆಯಲ್ಲೂ ಸಭೆಗಳ ಮೇಲೆ ಸಭೆಯನ್ನು ನಡೆಸುತ್ತಿದೆ. ಇದು ಸಾಲದು ಎನ್ನುವಂತೆ ಇದೀಗ ವಿಯೇಟ್ನಾಂ ಜೊತೆಯಲ್ಲೂ ಚೀನಾ ಮೀಟಿಂಗ್ ಮಾಡಿರುವುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಿತ್ತ ನೆತ್ತಿಗೇರಿಸಿದೆ!
ಹೀಗಾಗಿಯೇ ಇದೀಗ ಚೀನಾ ವಿರುದ್ಧ ಮತ್ತಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಬಗ್ಗೆ ಕೂಡ ಟ್ರಂಪ್ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಚೀನಾ ನಾಯಕರು ಅಮೆರಿಕ ವಿರುದ್ಧ ತೆರಿಗೆ ವಿಚಾರದಲ್ಲಿ ದೊಡ್ಡ ಸಂಘಟನೆ ಮಾಡುತ್ತಾ, ಜಾಗತಿಕ ಮಟ್ಟದಲ್ಲಿ ಟ್ರಂಪ್ ನೀತಿಯ ವಿರುದ್ಧ ಇರುವ ದೇಶಗಳನ್ನು ಒಗ್ಗೂಡಿಸುತ್ತಿದ್ದಾರೆ. ಇದೇ ಕಾರಣಕ್ಕೆ ಇದೀಗ ಅಲರ್ಟ್ ಆಗಿ ಗುಡುಗಿರುವ ಟ್ರಂಪ್ ಮುಂದೆ ಏನು ಮಾಡುತ್ತಾರೋ? ಅನ್ನೋ ಕುತೂಹಲ ಮೂಡಿದೆ.
ಭರ್ಜರಿ ಸುದ್ದಿ ಕೊಟ್ಟ ಟ್ರಂಪ್!
ಭಾರತ ನಮ್ಮ ಕಾರುಗಳ ಮೇಲೆ ಅತಿ ಹೆಚ್ಚಿನ ತೆರಿಗೆ ವಿಧಿಸುತ್ತಿದ್ದು ಇದೇ ಕಾರಣಕ್ಕೆ ನಾವು ಕೂಡ ಹೆಚ್ಚಿನ ತೆರಿಗೆ ಹಾಕುತ್ತಿದ್ದೇವೆ ಅಂತಾ ಅಮೆರಿಕ ತನ್ನ ನಿರ್ಧಾರ ಸಮರ್ಥನೆ ಮಾಡಿತ್ತು. ಹಾಗೇ ಏಪ್ರಿಲ್ 2 ರಿಂದ ಜಾರಿಗೆ ಬರುವಂತೆ ಹೊಸ ತೆರಿಗೆ ನೀತಿ ಘೋಷಣೆ ಮಾಡಿ, ಆತಂಕವನ್ನ ಕೂಡ ಹುಟ್ಟು ಹಾಕಿದ್ದರು ಡೊನಾಲ್ಡ್ ಟ್ರಂಪ್. ಭಾರತ ಮಾತ್ರವಲ್ಲದೆ ಚೀನಾ ಕೂಡ ಟ್ರಂಪ್ ಅವರ ನಿರ್ಧಾರದಿಂದ ದೊಡ್ಡ ನಷ್ಟ ಅನುಭವಿಸುವ ಆತಂಕದಲ್ಲಿ ಇತ್ತು. ಆದರೆ, ಅಮೆರಿಕ ಇದೀಗ ತೆರಿಗೆ ಹೇರಿಕೆಯನ್ನು ಮುಂದೂಡಿಕೆ ಮಾಡಿದ್ದು, ಭಾರತೀಯ ಷೇರು ಮಾರುಕಟ್ಟೆ ದೊಡ್ಡ ಪ್ರಮಾಣದಲ್ಲಿ ಚೇತರಿಕೆ ಕಂಡಿದೆ.












Click it and Unblock the Notifications