ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಮಸೂದೆ; ಎಚ್-1ಬಿ ವೀಸಾಧಾರರಿಗೆ ಅಮೆರಿಕ ಪೌರತ್ವ ಸುಲಭ

|
Google Oneindia Kannada News

ವಾಷಿಂಗ್ಟನ್, ಸೆ. 30: ಅಮೆರಿಕದಲ್ಲಿ ಹೊಸ ಮಸೂದೆ ತರಲಾಗಿದ್ದು, ಅದೇನಾದರೂ ಅನುಮೋದನೆಯಾಗಿ ಜಾರಿಗೆ ಬಂದರೆ 80 ಲಕ್ಷ ಮಂದಿಗೆ ಅಮೆರಿಕದ ಗ್ರೀನ್ ಕಾರ್ಡ್ ಸಿಗಲಿದೆ. ಇವರಲ್ಲಿ ಹೆಚ್ಚಿನವರು ಭಾರತೀಯರೇ ಆಗಿದ್ದಾರೆ.

ಆಡಳಿತಾರೂಢ ಡೆಮಾಕ್ರಟ್ ಪಕ್ಷದ ನಾಲ್ವರು ಸೆನೆಟರ್‌ಗಳ (ಸಂಸದರು) ಗುಂಪೊಂದು ರಿನಿವಿಂಗ್ ಇಮಿಗ್ರೇಶನ್ ಪ್ರಾವಿಶನ್ಸ್ ಆಫ್ ದಿ ಇಮೈಗ್ರೇಷನ್ ಆ್ಯಕ್ಟ್ ಮಸೂದೆ ರೂಪಿಸಿ ಮಂಡಿಸಿದ್ದಾರೆ. ಇದು ವಲಸಿಗರಿಗೆ ಅಮೆರಿಕದ ಪೌರತ್ವ ಕಲ್ಪಿಸುವ ಅವಕಾಶ ನೀಡುವ ಒಂದು ಕಾಯ್ದೆಯಾಗಿದೆ. ಕೆಲ ನಿರ್ದಿಷ್ಟ ವರ್ಗಗಳ ವಲಸಿಗರಿಗೆ ಗ್ರೀನ್ ಕಾರ್ಡ್ ಸಿಗಲು ಸಾಧ್ಯವಾಗಿಸುತ್ತದೆ ಈ ಕಾಯ್ದೆ.

ಕೆನಡಾ ಬ್ರಾಂಪ್ಟಾನ್ ನಗರದ ಪ್ರಮುಖ ಉದ್ಯಾನವನಕ್ಕೆ ಭಗವದ್ಗೀತೆ ಹೆಸರುಕೆನಡಾ ಬ್ರಾಂಪ್ಟಾನ್ ನಗರದ ಪ್ರಮುಖ ಉದ್ಯಾನವನಕ್ಕೆ ಭಗವದ್ಗೀತೆ ಹೆಸರು

ಈ ಮಸೂದೆ ಜಾರಿಯಾದರೆ 80 ಲಕ್ಷ ವಲಸಿಗರ ಅಮೆರಿಕ ಪೌರತ್ವ ಕನಸು ನನಸಾಗುತ್ತದೆ. ಎಚ್-1ಬಿ ವೀಸಾ ಹೊಂದಿರುವವರು, ದೀರ್ಘಾವಧಿ ವೀಸಾ ಹೊಂದಿರುವವರು, ಡ್ರೀಮರ್ಸ್ ಮೊದಲಾದವರಿಗೆ ಅಮೆರಿಕದ ಗ್ರೀನ್ ಕಾರ್ಡ್ ಸಿಗಲಿದೆ. ಈ ವಿಭಾಗಗಳಲ್ಲಿ ಅಮೆರಿಕದ ಗ್ರೀನ್ ಕಾರ್ಡ್‌ಗಾಗಿ ಕಾಯುತ್ತಿರುವ 80 ಲಕ್ಷ ಜನರ ಪೈಕಿ ಭಾರತೀಯರು ಅಧಿಕ ಸಂಖ್ಯೆಯಲ್ಲಿದ್ದಾರೆ.

US New Bill If Approved Will Provide US Citizenship for Lakhs of Indians

ಏನಿದು ಗ್ರೀನ್ ಕಾರ್ಡ್?
ಗ್ರೀನ್ ಕಾರ್ಡ್ ಎಂದರೆ ಖಾಯಂ ನಿವಾಸಿ ಕಾರ್ಡ್. ಅಮೆರಿಕಕ್ಕೆ ಹೋಗುವ ವಲಸಿಗರಿಗೆ ಖಾಯಂ ನಿವಾಸದ ಸವಲತ್ತನ್ನು ಕಲ್ಪಿಸುವ ಒಂದು ಪರವಾನಗಿ.

ಅಮೆರಿಕಕ್ಕೆ ವಲಸೆ ಬಂದ ಡ್ರೀಮರ್ಸ್, ನಿರಾಶ್ರಿತರು, ದೀರ್ಘಾವಧಿ ವೀಸಾಧಾರರ ಮಕ್ಕಳು, ಅಗತ್ಯ ಕಾರ್ಮಿಕರು, ಹೆಚ್-1 ಬಿ ವೀಸಾಧಾರರಂತಹ ಉನ್ನತ ಕೌಶಲ್ಯದ ಉದ್ಯೋಗಿಗಳ ಅಮೆರಿಕ ಪೌರತ್ವದ ಕನಸು ನನಸಾಗುತ್ತದೆ. ಇಲ್ಲಿ ಡ್ರೀಮರ್ಸ್ ಎಂದರೆ 16 ವರ್ಷದೊಳಗಿನ ವಯಸ್ಸಿನಲ್ಲಿ ಅಮೆರಿಕಕ್ಕೆ ಅಕ್ರಮವಾಗಿ ವಲಸೆ ಬಂದವರು.

ಅಮೆರಿಕದ ಫ್ಲೋರಿಡಾದಲ್ಲಿ ಚಂಡಮಾರುತ: ಭಯಾನಕ ದೃಶ್ಯಗಳು ವೈರಲ್ಅಮೆರಿಕದ ಫ್ಲೋರಿಡಾದಲ್ಲಿ ಚಂಡಮಾರುತ: ಭಯಾನಕ ದೃಶ್ಯಗಳು ವೈರಲ್

"ತುಕ್ಕು ಹಿಡಿದ ವಲಸೆ ನೀತಿ ವ್ಯವಸ್ಥೆಯು ಅಸಂಖ್ಯಾತ ಜನರಿಗೆ ವೇದನೆ ಉಂಟು ಮಾಡುತ್ತಿದೆ. ನಮ್ಮ ಆರ್ಥಿಕತೆಗೆ ಹಿನ್ನಡೆ ತರುತ್ತಿದೆ. ಹೆಚ್ಚು ವಲಸಿಗರು ಖಾಯಂ ನಿವಾಸಿ ಹಕ್ಕು ಹೊಂದಲು ಸಾಧ್ಯವಾಗುವ ರೀತಿಯಲ್ಲಿ ರಿಜಿಸ್ಟ್ರಿ ಕಟ್ ಆಫ್ ದಿನವನ್ನು ಬದಲಾಯಿಸಲು ಈ ಮಸೂದೆ ತರುತ್ತಿದ್ದೇವೆ.

US New Bill If Approved Will Provide US Citizenship for Lakhs of Indians

"ಇದರು ಲಕ್ಷಾಂತರ ವಲಸಿಗರಿಗೆ ಅನುಕೂಲವಾಗಲಿದೆ. ಇವರಲ್ಲಿ ಹಲವರು ಅಮೆರಿಕದಲ್ಲಿ ದಶಕಗಳ ಕಾಲ ಕೆಲಸ ಮಾಡುತ್ತಾ ಅಮೆರಿಕದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದವರಾಗಿದ್ದಾರೆ. ಇವರು ಇನ್ಮುಂದೆ ಅನಿಶ್ಚಿತ ಸ್ಥಿತಿಗೆ ಸಿಲುಕದೆ ನಿರಾತಂಕವಾಗಿ ಮತ್ತು ಮುಕ್ತವಾಗಿ ಅಮೆರಿಕದಲ್ಲಿ ಇರಲು ಸಾಧ್ಯವಾಗುತ್ತದೆ" ಎಂದು ಮಸೂದೆ ಮಂಡಿಸಿದ ಸೆನೆಟರ್ ಅಲೆಕ್ಸ್ ಪಾಡಿಲಾ ಹೇಳಿದ್ದಾರೆ. ಪಾಡಿಲಾ ಜೊತೆ ಇತರ ಸೆನೆಟರ್‌ಗಳಾದ ಎಲಿಜಬೆತ್ ವಾರೆನ್, ಬೆನ್ ರೇ ಲುಜನ್, ಡಿಕ್ ಡರ್ಬಿನ್ ಅವರೂ ಈ ಮಸೂದೆ ಬೆನ್ನಿಗಿದ್ದಾರೆ.

ಅಮೆರಿಕಕ್ಕೆ ಏನ ಅನುಕೂಲ?
ಅಮೆರಿಕದಲ್ಲಿ ಜನಸಂಖ್ಯೆ ಕಡಿಮೆ ಇದೆ. ಆರ್ಥಿಕ ಚಟುವಟಿಕೆ ಹೆಚ್ಚು. ಹೀಗಾಗಿ, ವಲಸಿಗರ ಮೇಲೆ ಹೆಚ್ಚು ಅವಲಂಬನೆಯಾಗಿದೆ. ಈಗ ಹೊಸ ಮಸೂದೆ ಜಾರಿಯಾಗಿ 80 ಲಕ್ಷ ಮಂದಿ ಖಾಯಂ ನಿವಾಸಿಗಳಾದರೆ ಅಮೆರಿಕಕ್ಕೆ ವರ್ಷಕ್ಕೆ 100 ಬಿಲಿಯನ್ ಡಾಲರ್‌ಗೂ ಹೆಚ್ಚು ಹಣದ ಲಾಭವಾಗುತ್ತದೆ. ಅಂದರೆ 8 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಆದಾಯವನ್ನು ಅಮೆರಿಕಕ್ಕೆ ತಂದುಕೊಡಲಿದ್ದಾರೆ ಈ 80 ಲಕ್ಷ ವಲಸಿಗರು.

ಇವರ ಪೈಕಿ ಎಚ್1 ಬಿ ವೀಸಾ ಕೋಟಾದಲ್ಲಿ ಉನ್ನತ ಕೌಶಲ್ಯದ ಉದ್ಯೋಗಿಗಳಿದ್ದಾರೆ. ಈ ವೀಸಾ ಹೊಂದಿರುವವರಲ್ಲಿ ಭಾರತೀಯರು ಹೆಚ್ಚು. ಅಮೆರಿಕದ ಆರ್ಥಿಕತೆಗೆ ಹೆಚ್ಚು ಕೊಡುಗೆ ನೀಡುತ್ತಿರುವುದು ಎಚ್1 ಬಿ ವೀಸಾ ಹೊಂದಿರುವ ಉದ್ಯೋಗಿಗಳೇ. ಹೀಗಾಗಿ, ಅಮೆರಿಕದ ಹೊಸ ಮಸೂದೆಯಿಂದ ಆ ದೇಶಕ್ಕೂ ಉಪಯೋಗ, ಭಾರತೀಯ ವಲಸಿಗರಿಗೂ ಅನುಕೂಲ.

ಅಮೆರಿಕಕ್ಕೆ ಹಾನಿಯಾಗದ ರೀತಿಯಲ್ಲಿ ಅಲ್ಲಿನ ವ್ಯವಸ್ಥೆಯೊಳಗೆ ಭಾರತೀಯರು ಪೂರಕವಾಗಿ ಬೆರೆತುಹೋಗಿದ್ದಾರೆ. ಅಲ್ಲಿನ ಆಡಳಿತಾತ್ಮಕವಾಗಿ, ಸಾಮಾಜಿಕವಾಗಿ ಭಾರತೀಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಭಾರತೀಯ ಮೂಲದ ಸಮುದಾಯ ಅಮೆರಿಕದ ಆರ್ಥಿಕತೆಯ ಬೆಳವಣಿಗೆಯಲ್ಲಿ ಹೆಚ್ಚಿನ ಪಾತ್ರ ವಹಿಸುತ್ತಿದೆ.

(ಒನ್ಇಂಡಿಯಾ ಸುದ್ದಿ)

English summary
A group of four top Democratic senators have introduced a new bill, which proposes to offer citizenship to certain categories of people, and would benefit Indian tech sector workers in the United States.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X