ಇರಾನ್ ಪರ ನಿಂತ ರಷ್ಯಾ ಮತ್ತು ಚೀನಾ, ಅಮೆರಿಕಗೆ ಶುರುವಾಯ್ತು ಹೊಸ ಚಿಂತೆ... US Military
ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಯುದ್ಧದ ಆಟ ಶುರುವಾಗಿದೆ, ಈ ಬಾರಿ ಘೋರ ಯುದ್ಧ ಶುರುವಾಗಿ ಅದು ದೊಡ್ಡ ಹಂತಕ್ಕೆ ತಿರುಗಿದರೆ ಇಡೀ ಭೂಮಿ ನಾಶವಾಗಿ ಹೋಗುವ ಭಯ ಕೂಡ ಆವರಿಸುತ್ತಿದೆ. ಎಲ್ಲಾ ಆತಂಕದ ನಡುವೆ ಕೂಡ ಇರಾನ್ ಮತ್ತು ಅಮೆರಿಕ ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿ ಸೇನಾ ಕಾರ್ಯಾಚರಣೆ ಹಂತಕ್ಕೆ ಹೋಗಿದ್ದಾರೆ. ಇದು ಸಾಕಷ್ಟು ಆತಂಕ ಸೃಷ್ಟಿಸಿದ್ದು, ಒಂದು ಕಡೆ ಇರಾನ್ ಪರಮಾಣು ಬಾಂಬ್ ತಯಾರಿಸುತ್ತಿದೆ ಎಂಬ ಸುದ್ದಿ ಇದೆ. ಇನ್ನೊಂದು ಕಡೆ ಈಗಾಗಲೇ ತನ್ನ ಬಳಿ ವಿನಾಶಕಾರಿ ಅಸ್ತ್ರಗಳನ್ನು ಹೊಂದಿರುವ ಅಮೆರಿಕ ಕೂಡ, ಯಾವುದೇ ಕ್ಷಣದಲ್ಲಿ ಇರಾನ್ ಮೇಲೆ ಅವುಗಳನ್ನ ಬಳಸಬಹುದು ಎಂಬ ಸುದ್ದಿ ತಲ್ಲಣ ಎಬ್ಬಿಸಿದೆ.
ಇರಾನ್ ಪಕ್ಕದಲ್ಲೇ ಎಂದರೆ ಮಧ್ಯಪ್ರಾಚ್ಯ ಭಾಗದಲ್ಲಿ ಗಾಜಾ ಪಟ್ಟಿಯಲ್ಲಿ ಹಿಂಸಾಚಾರ ನಡೆಯುತ್ತಿದೆ. 50,000ಕ್ಕೂ ಹೆಚ್ಚು ಜನರ ಬಲಿ ಪಡೆದಿರುವ ಈ ಇಸ್ರೇಲ್ & ಹಮಾಸ್ ವಾರ್, ಜಗತ್ತಿನ ಅತ್ಯಂತ ಭೀಕರ ಯುದ್ಧಗಳ ಪೈಕಿ ಒಂದು ಎನಿಸಿಕೊಂಡಿದೆ. ಅದರಲ್ಲೂ, ಮಧ್ಯಪ್ರಾಚ್ಯ ಭಾಗದಲ್ಲಿ ಇಸ್ರೇಲ್ & ಹಮಾಸ್ ಯುದ್ಧ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿತ್ತು. ಇಸ್ರೇಲ್ ಸೇನೆಯಿಂದ ಗಾಜಾ ಪಟ್ಟಿಯ ಮೇಲೆ ಭೀಕರ ದಾಳಿ ನಡೆಯುತ್ತಿದೆ ಅಂತಾ ಆರೋಪಿಸಿ ಇರಾನ್ ಕೂಡ ಯುದ್ಧ ಸಾರಿತ್ತು. ಕೊನೆಗೆ ಆ ಯುದ್ಧ ನಿಲ್ಲಿಸಲು ಅಮೆರಿಕ ಹೆಣಗಾಡಿತ್ತು. 2025 ಜೂನ್ ತಿಂಗಳಲ್ಲಿ ನಡೆದಿದ್ದ ಈ ತಿಕ್ಕಾಟ ತಣ್ಣಗಾಗುತ್ತಲೇ ಇದೀಗ ಮತ್ತೊಂದು ವಾರ್ ಶುರುವಾಗುವ ಲಕ್ಷಣ ಗೋಚರಿಸಿದೆ. ಇದೇ ಸಮಯದಲ್ಲಿ ಇರಾನ್ ಪರ ನಿಂತ ರಷ್ಯಾ ಮತ್ತು ಚೀನಾ ದೇಶಗಳು ಅಮೆರಿಕಗೆ ಟೆನ್ಷನ್ ಹೆಚ್ಚಿಸಿವೆ.

ನೇರವಾಗಿ ಎಂಟ್ರಿ ಕೊಡಬಹುದು ರಷ್ಯಾ ಸೇನೆ
ಚೀನಾ ಮತ್ತು ರಷ್ಯಾ ಕೂಡಾ ತೆರೆಮರೆಯಲ್ಲಿ ಸಕ್ರಿಯವಾಗಿದ್ದು, ಈ ಎರಡೂ ದೇಶಗಳು ಇದೀಗ ಹೊಸ ಕಾರ್ಯತಂತ್ರದ ಆಟಕ್ಕೆ ಸಿದ್ಧತೆ ನಡೆಸುತ್ತಿರುವಂತೆ ಕಾಣುತ್ತಿದೆ. ಇರಾನ್ ಪರವಾಗಿ ಚೀನಾ ಮತ್ತು ರಷ್ಯಾ ನಾಯಕರು ಈಗಾಗಲೇ ಸೇನಾ ಸಿದ್ಧತೆ ನಡೆಸಿದ್ದು, ಅಕಸ್ಮಾತ್ ಇರಾನ್ ಮೇಲೆ ಅಮೆರಿಕ ದಾಳಿಯನ್ನ ನಡೆಸಿಬಿಟ್ಟರೆ ಆಗ ಮೊದಲಿಗೆ ರಷ್ಯಾ ನೇರವಾಗಿ ಇರಾನ್ ಸಹಾಯಕ್ಕೆ ನಿಲ್ಲುವ ಸಾಧ್ಯತೆ ದಟ್ಟವಾಗಿದೆ. ಇನ್ನೊಂದು ಕಡೆ ಚೀನಾ ಕೂಡ ಇದೇ ರೀತಿಯಾಗಿ ಚೀನಾ ಹಿಂದೆ ನಿಂತು ಅಗತ್ಯ ಇರುವ ಅಸ್ತ್ರಗಳ ಪೂರೈಕೆ ಮಾಡುವ ಭೀತಿ ಕೂಡ ಅಮೆರಿಕಗೆ ಕಾಡಯುತ್ತಿದ್ದು, ಆ ಎಲ್ಲಾ ಸಾಧ್ಯತೆಗಳು ಈಗ ಜಾಗತಿಕ ಗಮನ ಸೆಳೆಯುತ್ತಿದೆ.












Click it and Unblock the Notifications