Pahalgam: ಜಮ್ಮು & ಕಾಶ್ಮೀರಕ್ಕೆ ಹೋಗಬೇಡಿ ಅಂತಾ ಹೇಳಿತಾ ಅಮೆರಿಕ?

ಕಣಿವೆ ರಾಜ್ಯ ಕಾಶ್ಮೀರ ಭಾರತದ ಕಿರೀಟ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಬಿಡಿ, ಯಾಕಂದ್ರೆ ಭಾರತದ ಶತ್ರು ದೇಶಗಳು ಅದೆಷ್ಟೇ ಪ್ರಯತ್ನ ಮಾಡಿದರೂ ಕಾಶ್ಮೀರವನ್ನ ಮಾತ್ರ ಭಾರತದ ಕೈಯಿಂದ ಕಿತ್ತುಕೊಳ್ಳಲು ಆಗಿಲ್ಲ. ಅದರಲ್ಲೂ ಪಾಪಿ ಪಾಕಿಸ್ತಾನ ಈಗಲೂ ಅದೇ ಕೆಲಸ ಮಾಡುತ್ತಿದ್ದು, ಪದೇ ಪದೇ ಉಗ್ರರನ್ನು ಕಳುಹಿಸುತ್ತಾ ಭಾರತಕ್ಕೆ ಸಮಸ್ಯೆ ಮಾಡುತ್ತಿದೆ. ಇದೇ ರೀತಿ ಮತ್ತೆ ಕಾಶ್ಮೀರಕ್ಕೆ ಉಗ್ರರನ್ನ ನುಗ್ಗಿಸಿದ್ದ ಪಾಕಿಸ್ತಾನದ ಮಾನ ಹರಾಜು ಆಗಿರುವ ಸಮಯದಲ್ಲೇ ಅಮೆರಿಕದ ಆದೇಶ ಹೊಸ ಸಂಚಲನ ಸೃಷ್ಟಿ ಮಾಡಿದೆ.

ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಉಗ್ರರ ಕೃತ್ಯ ಹಿನ್ನೆಲೆ 26 ಜನರು ಜೀವ ಬಿಟ್ಟಿದ್ದಾರೆ. ಪ್ರವಾಸಕ್ಕೆ ಎಂದು ಪಹಲ್ಗಾಮ್ ಪ್ರದೇಶಕ್ಕೆ ಹೋಗಿದ್ದ ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳ ಪ್ರಜೆಗಳು, ಕಾಶ್ಮೀರದ ಸುಂದರ ವಾತಾವರಣದಲ್ಲಿ ಸುತ್ತಾಡುವ ಸಮಯದಲ್ಲೇ ಈ ಪಾಪಿ ಉಗ್ರರು ದಿಢೀರ್ ಗನ್ ಹಿಡಿದು ನುಗ್ಗಿ ಅಮಾಯಕರ ಮೇಲೆ ಶೂಟ್ ಮಾಡಿ ಹತ್ಯೆಯನ್ನು ಮಾಡಿದ್ದರು. ಪಾಪಿ ಉಗ್ರರ ಈ ಕೃತ್ಯ ಇದೀಗ ಜಾಗತಿಕ ಮಟ್ಟದಲ್ಲೂ ದೊಡ್ಡ ಸಂಚಲನ ಸೃಷ್ಟಿ ಮಾಡಿದ್ದು, ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಬೆಂಬಲ ವ್ಯಕ್ತವಾಗುತ್ತಿದೆ. ಇದೇ ಸಮಯದಲ್ಲಿ ಅಮೆರಿಕ ಕೂಡ ಸಂಚಲನ ಸೃಷ್ಟಿಸುವ ಹೇಳಿಕೆ ನೀಡಿದೆ.

US Issues Travel Advisory for Jammu and Kashmir Following Pahalgam Terror Attack

ದೊಡ್ಡಣ್ಣ ಅಮೆರಿಕ ಹೇಳಿದ್ದು ಏನು?

ಅಂದಹಾಗೆ 2019ರ ಪುಲ್ವಾಮಾ ದಾಳಿ ನಂತರ ನಡೆದ ಅತ್ಯಂತ ಘೋರ ದುರಂತ ಇದಾಗಿದೆ, ಹೀಗಾಗಿ ಕೇಂದ್ರ ಸರ್ಕಾರ ಕೂಡ ಪಾಪಿ ಪಾಕಿಸ್ತಾನಕ್ಕೆ & ಪಾಕಿಸ್ತಾನ ಬೆಳೆಸಿರುವ ಉಗ್ರರಿಗೂ ಸರಿಯಾಗಿ ಪಾಠ ಕಲಿಸಲು ನಿರ್ಧರಿಸಿದೆ. ಇಂತಹ ಸಮಯದಲ್ಲೇ, ಅಮೆರಿಕ ತನ್ನ ಪ್ರಜೆಗಳಿಗೆ ಮಹತ್ವದ ಸೂಚನೆ ಒಂದನ್ನ ನೀಡಿದೆ. ಜಮ್ಮು & ಕಾಶ್ಮೀರಕ್ಕೆ ಹೋಗಬೇಡಿ ಎಂಬ ಸೂಚನೆ ನೀಡಿದ್ದು, ಈ ಮೂಲಕ ಜಮ್ಮು & ಕಾಶ್ಮೀರದ ಬಗ್ಗೆ ಮತ್ತೊಮ್ಮೆ ದೊಡ್ಡ ಚರ್ಚೆ ಶುರುವಾಗಿದೆ.

10 ಕಿಮೀ ವ್ಯಾಪ್ತಿಯಲ್ಲಿ ನಿಷೇಧ?

ಅಮೆರಿಕ ಇದೀಗ ತನ್ನ ಪ್ರಜೆಗಳಿಗೆ ನೀಡಿರುವ ಸೂಚನೆ ಪ್ರಕಾರ, ಜಮ್ಮು ಮತ್ತು ಕಾಶ್ಮೀರವೂ ಸೇರಿದಂತೆ ಭಾರತ-ಪಾಕಿಸ್ತಾನ ಗಡಿ ಭಾಗದಿಂದ 10 ಕಿಲೋ ಮೀಟರ್ ವ್ಯಾಪ್ತಿ ಒಳಗೆ ಇರುವ ಪ್ರದೇಶಕ್ಕೆ ಯಾವುದೇ ಕಾರಣಕ್ಕೂ ಭೇಟಿಯನ್ನ ನೀಡಬೇಡಿ ಎಂದಿದೆ. ಪಹಲ್ಗಾಮ್ ಪ್ರದೇಶಕ್ಕೆ ಬಂದಿದ್ದ ಪ್ರವಾಸಿಗರ ಮೇಲೆ ಉಗ್ರರು ದಾಳಿ ಮಾಡಿ, 26ಕ್ಕೂ ಹೆಚ್ಚು ಜನರನ್ನು ಹತ್ಯೆಗೈದ ಘಟನೆ ನಂತರ ಅಮೆರಿಕ ಈ ಆದೇಶ ಹೊರಡಿಸಿದೆ.

ಒಟ್ನಲ್ಲಿ ಜಮ್ಮು & ಕಾಶ್ಮೀರದ ಪರಿಸ್ಥಿತಿ ಇನ್ನಷ್ಟು ಸೂಕ್ಷ್ಮವಾಗಿದ್ದು, ಇದೇ ಸಮಯಕ್ಕೆ ಅತ್ತ ಜಾಗತಿಕ ಮಟ್ಟದಲ್ಲೂ ಈ ವಿಚಾರವಾಗಿ ಮಹತ್ವದ ಸೂಚನೆ ನೀಡಲಾಗುತ್ತಿದೆ. ಇನ್ನೊಂದು ಕಡೆ ಅಮೆರಿಕ ಕೂಡ ಅಲರ್ಟ್ ಆಗಿ ತನ್ನ ಪ್ರಜೆಗಳಿಗೆ ಸೂಚನೆ ನೀಡಿದೆ. ಆದರೆ ಈ ರೀತಿ, ದಿಢೀರ್ ಅಮೆರಿಕ ನೀಡಿರುವ ಸೂಚನೆ ಬಗ್ಗೆ ಬೇಸರ ಕೂಡ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+