India Vs Pakistan: ಭಾರತದ ಪರ ಪರೋಕ್ಷವಾಗಿ ಸಿದ್ಧತೆ ಆರಂಭಿಸಿದ ದೊಡ್ಡಣ್ಣ ಅಮೆರಿಕ?
ಭಾರತ & ಪಾಕಿಸ್ತಾನ ನಡುವೆ ಉಂಟಾಗಿರುವ ಸಂಘರ್ಷ ಪರಿಸ್ಥಿತಿ ಇದೇ ರೀತಿಯಾಗಿ ಇದ್ದರೆ ಮುಂದೆ ದೊಡ್ಡ ದೊಡ್ಡ ಅವಾಂತರಕ್ಕೆ ಕಾರಣ ಆಗಬಹುದು ಎಂಬುದು ಇಡೀ ಪ್ರಪಂಚಕ್ಕೇ ಗೊತ್ತಾಗಿದೆ. ಅದರಲ್ಲೂ ಭಾರತ & ಪಾಕಿಸ್ತಾನ ಎರಡೂ ಅಣ್ವಸ್ತ್ರ ಇರುವ ದೇಶಗಳು, ಹೀಗೆ ಎರಡೂ ದೇಶಗಳ ನಡುವೆ ಅಪ್ಪಿತಪ್ಪಿ ಯುದ್ಧ ಶುರುವಾದರೆ ಮುಂದೆ ನ್ಯೂಕ್ಲಿಯರ್ ಬಾಂಬ್ ಬಳಕೆ ಗ್ಯಾರಂಟಿ ಎಂಬ ಭಯ ಕಾಡ್ತಿದೆ. ಇಂತಹ ಸಮಯದಲ್ಲೇ, ಭಾರತದ ಪರ ಪರೋಕ್ಷವಾಗಿ ಸಿದ್ಧತೆ ಆರಂಭಿಸಿದ ದೊಡ್ಡಣ್ಣ ಅಮೆರಿಕ?
ಅಮೆರಿಕ ಇದೀಗ ಭಾರತದ ಬೆನ್ನಿಗೆ ನಿಲ್ಲಲ್ಲು ಸಜ್ಜಾಗಿದ್ದು, ಭಾರತದ ಪರವಾಗಿ & ಪಾಕಿಸ್ತಾನದ ವಿರುದ್ಧ ನಿಲ್ಲಲಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಅದರಲ್ಲೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತದ ಮೇಲೆ ವಿಶೇಷ ಪ್ರೀತಿ ಇದ್ದು, ಭಾರತದ ಜೊತೆಗೆ ಅತ್ಯುತ್ತಮ ಸ್ನೇಹ ಇಟ್ಟುಕೊಂಡಿದ್ದಾರೆ. ಭಾರತದ ಪ್ರಧಾನಿ ಮೋದಿ ಅವರ ಜೊತೆಗೆ ಕೂಡ ಡೊನಾಲ್ಡ್ ಟ್ರಂಪ್ ಉತ್ತಮ ಸ್ನೇಹ ಬೆಳೆಸಿದ್ದಾರೆ. ಈ ಎಲ್ಲಾ ಕಾರಣಗಳಿಂದ ಭಾರತ & ಪಾಕಿಸ್ತಾನದ ನಡುವೆ ಯುದ್ಧ ಶುರುವಾದರೆ ಅಮೆರಿಕ ಭಾರತದ ಬೆನ್ನಿಗೆ ನಿಲ್ಲುವುದು ಗ್ಯಾರಂಟಿ ಎನ್ನಲಾಗುತ್ತಿದೆ.

ಭಾರತ & ಪಾಕಿಸ್ತಾನ ಯುದ್ಧ ಫಿಕ್ಸ್?
ಜಮ್ಮು & ಕಾಶ್ಮೀರ ಬಿಟ್ಟು ಭಾರತವನ್ನು ಕಲ್ಪಿಸಿಕೊಳ್ಳುವುದಕ್ಕೂ ಅಸಾಧ್ಯ, ಹೀಗಿದ್ದಾಗಲೇ ಪಾಪಿ ಪಾಕಿಸ್ತಾನ ಸೇರಿದಂತೆ ಭಾರತದ ಶತ್ರು ದೇಶಗಳು ಜಮ್ಮು & ಕಾಶ್ಮೀರದ ಮೇಲೆ ಕಣ್ಣು ಹಾಕಿ ಕೂತಿವೆ. ಇದೇ ಕಾರಣಕ್ಕೆ ಜಮ್ಮು & ಕಾಶ್ಮೀರ ಭಾಗದಲ್ಲಿ ಉಗ್ರರಿಗೆ ಕೂಡ ಪ್ರಚೋದನೆ ನೀಡುತ್ತಿರುವ ಆರೋಪ ಪಾಪಿ ಪಾಕಿಸ್ತಾನದ ಮೇಲೆ ಇದೆ. ಹೀಗಿದ್ದಾಗ ಎರಡೂ ದೇಶಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣ ಆಗಿದ್ದು, ಇದೇ ಕಾರಣಕ್ಕೆ ಅಮೆರಿಕ ಭಾರತದ ಬೆನ್ನಿಗೆ ನಿಲ್ಲುವ ನಿರೀಕ್ಷೆ ಇದೆ.
ಭಾರತದ ಬೆನ್ನಿಗೆ ಡೊನಾಲ್ಡ್ ಟ್ರಂಪ್!
ಹಲವು ವರ್ಷಗಳಿಂದಲೂ ಕಾಶ್ಮೀರದಲ್ಲಿ ನೆಮ್ಮದಿ ಇಲ್ಲ, ಹೀಗಿದ್ದರೂ ಕಳೆದ ಕೆಲವು ವರ್ಷಗಳಿಂದ ಉಗ್ರರ ಹಾವಳಿಯು ಒಂದಷ್ಟು ಕಡಿಮೆ ಆಗಿತ್ತು. ಆದ್ರೆ ಈಗ ಮತ್ತೆ ಬಾಲ ಬಿಚ್ಚಿರುವ ಉಗ್ರರು ಜಮ್ಮು & ಕಾಶ್ಮೀರದಲ್ಲಿ ರಕ್ತಪಾತ ನಡೆಸಿದ್ದಾರೆ. ಈ ದುರ್ಘಟನೆಯು 2019ರ ಪುಲ್ವಾಮಾ ದಾಳಿ ನಂತರದ ಅತ್ಯಂತ ಘೋರ & ಭೀಕರ ದಾಳಿ ಆಗಿದೆ. ಹೀಗಾಗಿ ಭಾರತ ಇದೀಗ ಪಾಕಿಸ್ತಾನಕ್ಕೆ ಬುದ್ದಿ ಕಲಿಸಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದೆ. ಹೀಗಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಭಾರತದ ಪರವಾಗಿ ನಿಲ್ಲುವುದು ಬಹುತೇಕ ಗ್ಯಾರಂಟಿ ಆಗಿದೆ.












Click it and Unblock the Notifications