ತೈವಾನ್ ವಿಷಯದಲ್ಲಿ ಹಿಂದೆ ಸರಿಯಿತೇ ಯುಎಸ್: ಅನುಮಾನಕ್ಕೆ ಕಾರಣ?

ಹಾಂಗ್ ಕಾಂಗ್, ಆಗಸ್ಟ್ 1: ಯುನೈಟೆಡ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಏಷ್ಯಾ ಪ್ರವಾಸವು ಸಖತ್ ಸುದ್ದಿಯಾಗಿದೆ. ಭಾನುವಾರ ಹವಾಯಿಯಲ್ಲಿ ಇಳಿದ ಅವರು ಪರ್ಲ್ ಹಾರ್ಬರ್ ಸ್ಮಾರಕ ಮತ್ತು USS ಅರಿಝೋನಾಗೆ ಭೇಟಿ ನೀಡಿದರು.

ಇಂಡೋ-ಪೆಸಿಫಿಕ್‌ಗೆ ಕಾಂಗ್ರೆಷನಲ್ ನಿಯೋಗವನ್ನು ಪೆಲೋಸಿ ಮುನ್ನಡೆಸುತ್ತಿದ್ದಾರೆ.

ಇದರ ಜೊತೆಗೆ ಸಿಂಗಾಪುರ, ಮಲೇಷ್ಯಾ, ದಕ್ಷಿಣ ಕೊರಿಯಾ ಮತ್ತು ಜಪಾನ್ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ನೀಡಲು ಯೋಜನೆ ಹಾಕಿಕೊಂಡಿದ್ದಾರೆ ಎಂದು ಕಚೇರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಪೆಲೋಸಿ 24 ಮಿಲಿಯನ್ ಜನರ ಸ್ವ-ಆಡಳಿತ ಪ್ರಜಾಪ್ರಭುತ್ವವನ್ನು ಭೇಟಿ ಮಾಡಲು ಯೋಜಿಸುತ್ತಿರಬಹುದು ಎಂಬ ಊಹಾಪೋಹಗಳು ಕೇಳಿ ಬಂದಿದ್ದವು. ಇದರ ಹೊರತಾಗಿಯೂ ತೈವಾನ್ ಭೇಟಿಯ ಬಗ್ಗೆ ಹೇಳಿಕೆಯಲ್ಲಿ ಯಾವುದೇ ಉಲ್ಲೇಖವನ್ನು ಮಾಡಿಲ್ಲ ಎಂದು ತಿಳಿದು ಬಂದಿದೆ.

ತೈವಾನ್ ವಿಷಯಕ್ಕೆ ಬಾರದಂತೆ ಚೀನಾ ಎಚ್ಚರಿಕೆ

ತೈವಾನ್ ವಿಷಯಕ್ಕೆ ಬಾರದಂತೆ ಚೀನಾ ಎಚ್ಚರಿಕೆ

ಚೀನಾದ ಕಮ್ಯುನಿಸ್ಟ್ ಪಕ್ಷವು ತೈವಾನ್ ಅನ್ನು ತನ್ನ ಭೂಪ್ರದೇಶದ ಭಾಗವೆಂದು ಹೇಳಿಕೊಂಡಿದೆ. ಅದನ್ನು ಎಂದಿಗೂ ನಿಯಂತ್ರಿಸದಿದ್ದರೂ - ಪೆಲೋಸಿ ದ್ವೀಪಕ್ಕೆ ಭೇಟಿ ನೀಡುವುದರ ವಿರುದ್ಧ ಎಚ್ಚರಿಕೆ ನೀಡಿದೆ. ಯುಎಸ್ ಅಧ್ಯಕ್ಷ ಜೋ ಬಿಡೆನ್ ಇತ್ತೀಚೆಗೆ ಯುಎಸ್ ಮಿಲಿಟರಿಯು ಅಂತಹ ಪ್ರವಾಸವಿಲ್ಲ ಎಂದು ಹೇಳಿತ್ತು. ಆದಾಗ್ಯೂ, ವಾಷಿಂಗ್ಟನ್‌ನ ರಾಜಕೀಯ ವಿಭಜನೆಯ ಎರಡೂ ಬಣಗಳ US ಶಾಸಕರು ತೈವಾನ್ ಭೇಟಿ ನೀಡುವಂತೆ ಪೆಲೋಸಿಯವರನ್ನು ಒತ್ತಾಯಿಸಿದ್ದಾರೆ.

ಇಂಡೋ-ಪೆಸಿಫಿಕ್‌ಗೆ ಯುಎಸ್ ಕಾಂಗ್ರೆಷನಲ್ ನಿಯೋಗ

ಇಂಡೋ-ಪೆಸಿಫಿಕ್‌ಗೆ ಯುಎಸ್ ಕಾಂಗ್ರೆಷನಲ್ ನಿಯೋಗ

"ಇಂದು ನಮ್ಮ ಕಾಂಗ್ರೆಷನಲ್ ನಿಯೋಗವು ಇಂಡೋ-ಪೆಸಿಫಿಕ್‌ಗೆ ಪ್ರಯಾಣಿಸುತ್ತದೆ, ಈ ಪ್ರದೇಶದಲ್ಲಿನ ನಮ್ಮ ಮಿತ್ರರಾಷ್ಟ್ರಗಳು ಮತ್ತು ಸ್ನೇಹಿತರಿಗೆ ಅಮೆರಿಕದ ಬಲವಾದ ಮತ್ತು ಅಚಲವಾದ ಬದ್ಧತೆಯನ್ನು ಪುನರುಚ್ಚರಿಸುತ್ತದೆ," ಎಂದು ಪೆಲೋಸಿ ಕಚೇರಿಯ ಹೇಳಿಕೆಯಲ್ಲಿ ತಿಳಿಸಿದ್ದರು. ಹವಾಯಿಯಲ್ಲಿ ನಿಯೋಗವು ಯುನೈಟೆಡ್ ಸ್ಟೇಟ್ಸ್ ಇಂಡೋ-ಪೆಸಿಫಿಕ್ ಕಮಾಂಡ್ ನಾಯಕರಿಂದ ಗೌರವ ಸ್ವೀಕರಿಸಿದೆ ಎಂದು ಪೆಲೋಸಿ ಹೇಳಿದ್ದು, ನಂತರ ಪರ್ಲ್ ಹಾರ್ಬರ್ ಸ್ಮಾರಕ ಮತ್ತು USS ಅರಿಜೋನಾಗೆ ಭೇಟಿ ನೀಡಿದರು.

ಜಾಗತಿಕ ಸಮಸ್ಯೆಗಳ ಕುರಿತು ಮಿತ್ರರಾಷ್ಟ್ರಗಳೊಂದಿಗೆ ಚರ್ಚೆ

ಜಾಗತಿಕ ಸಮಸ್ಯೆಗಳ ಕುರಿತು ಮಿತ್ರರಾಷ್ಟ್ರಗಳೊಂದಿಗೆ ಚರ್ಚೆ

"ಶಾಂತಿ ಮತ್ತು ಭದ್ರತೆ, ಆರ್ಥಿಕ ಬೆಳವಣಿಗೆ ಮತ್ತು ವ್ಯಾಪಾರ, ಕೋವಿಡ್ -19 ಸಾಂಕ್ರಾಮಿಕ, ಹವಾಮಾನ ಬಿಕ್ಕಟ್ಟು, ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಆಡಳಿತ ಸೇರಿದಂತೆ ನಮ್ಮ ಹಂಚಿಕೆಯ ಆಸಕ್ತಿಗಳು ಮತ್ತು ಮೌಲ್ಯಗಳನ್ನು ಮತ್ತಷ್ಟು ಮುನ್ನಡೆಸಲು ಪ್ರತಿ ದೇಶದಲ್ಲಿ ಉನ್ನತ ಮಟ್ಟದ ಸಭೆಗಳನ್ನು ನಡೆಸಲಾಗುವುದು" ಎಂದು ಅವರು ಪೆಲೋಸಿ ತಿಳಿಸಿದ್ದಾರೆ.

ಕಾಂಗ್ರೆಷನಲ್ ನಿಯೋಗದಲ್ಲಿನ ಸದಸ್ಯರು ಯಾರು?

ಕಾಂಗ್ರೆಷನಲ್ ನಿಯೋಗದಲ್ಲಿನ ಸದಸ್ಯರು ಯಾರು?

ಕಾಂಗ್ರೆಷನಲ್ ನಿಯೋಗದ ಭಾಗವಾಗಿ ಪೆಲೋಸಿ ಜೊತೆಗೆ ಹೌಸ್ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಗ್ರೆಗೊರಿ ಮೀಕ್ಸ್, ವೆಟರನ್ಸ್ ಅಫೇರ್ಸ್ ಹೌಸ್ ಕಮಿಟಿಯ ಅಧ್ಯಕ್ಷ ಮಾರ್ಕ್ ಟಕಾನೊ, ಕಾಂಗ್ರೆಸ್ ಮಹಿಳೆ ಸುಜಾನ್ ಡೆಲ್ಬೆನ್, ಕಾಂಗ್ರೆಸ್ಸಿಗ ರಾಜಾ ಕೃಷ್ಣಮೂರ್ತಿ ಮತ್ತು ಕಾಂಗ್ರೆಸ್ ಸದಸ್ಯ ಆಂಡಿ ಕಿಮ್ ಪ್ರವಾಸದಲ್ಲಿ ಭಾಗಿಯಾಗಿದ್ದಾರೆ. "ಅಧ್ಯಕ್ಷ ಜೋ ಬಿಡೆನ್ ನಾಯಕತ್ವದಲ್ಲಿ, ಅಮೆರಿಕವು ಈ ಪ್ರದೇಶದಲ್ಲಿ ಸ್ಮಾರ್ಟ್, ಕಾರ್ಯತಂತ್ರದ ಒಪ್ಪಂದಕ್ಕೆ ಬದ್ಧವಾಗಿದೆ. ನಮ್ಮ ರಾಷ್ಟ್ರದಲ್ಲಿ ಮತ್ತು ಜಗತ್ತಿನಾದ್ಯಂತ ಸಮೃದ್ಧಿಗೆ ಇಂಡೋ-ಪೆಸಿಫಿಕ್ ಮುಕ್ತ ಮತ್ತು ಪ್ರವರ್ಧಮಾನವು ಮುಖ್ಯವಾಗಿದೆ," ಎಂದು ಪೆಲೋಸಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+