ಭಾರತದ ಸೇನಾ ಶಕ್ತಿ ಹೆಚ್ಚಳಕ್ಕೆ 600 ಬಿಲಿಯನ್ ಅಮೆರಿಕ ನೆರವು

Posted By:
Subscribe to Oneindia Kannada

ವಾಷಿಂಗ್ಟನ್, ಜುಲೈ 15: ಭಾರತದ ಮಿಲಿಟರಿ ಶಕ್ತಿಯ ಹೆಚ್ಚಳಕ್ಕೆ ಸುಮಾರು 621.15 ಬಿಲಿಯನ್ ಅಮೆರಿಕನ್ ಡಾಲರ್ (39 ಲಕ್ಷದ 92 ಸಾವಿರ ಕೋಟಿ ರು.) ನೆರವು ನೀಡುವ ಮಸೂದೆಗೆ ಅಮೆರಿಕದ ಸಂಸತ್ತು ಶುಕ್ರವಾರ ಒಪ್ಪಿಗೆ ನೀಡಿದೆ. ಆದರೆ, ಇದೇ ವೇಳೆ, ಪಾಕಿಸ್ತಾನಕ್ಕೆ ಈವರೆಗೆ ನೀಡುತ್ತಿದ್ದ ಆರ್ಥಿಕ ನೆರವಿನ ಮೇಲೆ ಕೆಲವಾರು ಕಟ್ಟುಪಾಡುಗಳನ್ನು ಹಾಕುವಂತೆ ಅಮೆರಿಕ ಸಂಸತ್, ಡೊನಾಲ್ಡ್ ಟ್ರಂಪ್ ಸರ್ಕಾರಕ್ಕೆ ತಾಕೀತು ಮಾಡಿದೆ.

ಉಗ್ರವಾದವನ್ನು ನಿರ್ಮೂಲನೆ ಮಾಡುವಲ್ಲಿ ಭಾರತವು ನಿಷ್ಠೆಯಿಂದ ಪರಿಶ್ರಮ ಪಡುತ್ತಿರುವುದರಿಂದ ಭಾರತಕ್ಕೆ ಮರುಮಾತಿಲ್ಲದೆ ಆ 600 ಬಿಲಿಯನ್ ಡಾಲರ್ ಮೊತ್ತದ ಮಸೂದೆಗೆ ಸದನ ಅಂಗೀಕಾರ ನೀಡಿದೆಯೆಂದು ಹೇಳಲಾಗಿದೆ.

US House clears over $600 billion bill to boost defence cooperation with India

ಅಂದಹಾಗೆ, ಭಾರತಕ್ಕೆ ಇಷ್ಟು ದೊಡ್ಡ ಮೊತ್ತದ ಅಮೆರಿಕನ್ ಡಾಲರ್ ಮೊತ್ತದ ಮಿಲಿಟರಿ ಸಹಾಯ ಧನ ನೀಡಬೇಕೆಂದು ಅಲ್ಲಿನ ಸಂಸದರಾದ ಭಾರತದ ಮೂಲದ ಅಮಿ ಬೆರಾ ಅವರು ಸಂಸತ್ತಿನಲ್ಲಿ ಮನವಿಯೊಂದನ್ನು ಸಲ್ಲಿಸಿದ್ದರು. ಆನಂತರ, ಆ ಮನವಿಯ ಬಗ್ಗೆ ಹಲವಾರು ಸುತ್ತುಗಳ ಮಾತುಕತೆಗಳು ನಡೆದ ನಂತರ, ಈಗ ಇಷ್ಟು ದೊಡ್ಡ ಮೊತ್ತದ ಮಿಲಿಟರಿ ಸಹಾಯ ಧನವನ್ನು ನೀಡಲು ಸಂಸತ್ತು ಒಪ್ಪಿಗೆ ನೀಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The United States House of Representatives on Friday passed a $621.5 billion defence policy bill which proposes to advance defence cooperation with India.
Please Wait while comments are loading...