US Election 2024: ಅಮೆರಿಕ ಚುನಾವಣೆ ದಿನಾಂಕ, ಮತದಾನದ ಸಮಯ: ಮಾಹಿತಿ, ವಿವರ
ಅಮೆರಿಕ ಅಧ್ಯಕ್ಷೀಯ ಚುನಾವಣೆ 2024 ಬಿಸಿ ಹೆಚ್ಚಾಗುತ್ತಿದೆ. ಈ ಬಾರಿ ಫಲಿತಾಂಶಗಳು ಅನಿಶ್ಚಿತವಾಗಿದ್ದು ಭಾರಿ ಕುತೂಹಲ ಹೆಚ್ಚಿಸಿದೆ. ಇಬ್ಬರ ನಡುವೆ ತೀವ್ರ ಹಣಾಹಣಿ ನಡೆಯುತ್ತಿದ್ದು ಆರೋಪ, ಪ್ರತ್ಯಾರೋಪಗಳು ಕೂಡ ಜೋರಾಗಿದೆ. ಡೊನಾಲ್ಡ್ ಟ್ರಂಪ್ ಗೆ ಉದ್ಯಮಿ ಎಲಾನ್ ಮಸ್ಕ್ ಬೆಂಬಲ ಕೊಟ್ಟಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಯುಎಸ್ ಚುನಾವಣೆ ಇತಿಹಾಸದಲ್ಲಿ ಇದು ರೋಚಕ ಸ್ಪರ್ಧೆ ಎನ್ನಲಾಗುತ್ತಿದೆ.
ಯುಎಸ್ ಚುನಾವಣೆ ಎಂದರೆ ಇಡೀ ವಿಶ್ವವೇ ಕುತೂಹಲದಿಂದ ನೋಡುತ್ತದೆ. ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲಿ ಅಮೆರಿಕ ಕೂಡ ಒಂದಾಗಿರುವ ಕಾರಣ, ಅಲ್ಲಿನ ಸರ್ಕಾರದ ಆಯ್ಕೆ ಕೂಡ ವಿದೇಶಾಂಗ ನೀತಿಗಳ ಮೇಲೆ ಪರಿಣಾಮ ಬೀರುವ ಕಾರಣ, ವಿವಿಧ ದೇಶಗಳು ಚುನಾವಣೆ ಫಲಿತಾಂಶದ ಮೇಲೆ ಹೆಚ್ಚು ಆಸಕ್ತಿ ತೋರಿಸುತ್ತವೆ.

ಹಾಗಾದರೆ ಇಡೀ ಜಗತ್ತಿನ ಗಮನ ಸೆಳೆದಿರುವ ಯುಎಸ್ ಅಧ್ಯಕ್ಷೀಯ ಚುನಾವಣೆ ಎಂದು ನಡೆಯುತ್ತದೆ. ಫಲಿತಾಂಶ ಯಾವಾಗ ಹೊರಬೀಳುತ್ತದೆ, ನೇರಪ್ರಸಾರ ವೀಕ್ಷಣೆ ಮಾಡುವುದು ಎನ್ನುವ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ.
ಚುನಾವಣೆ ದಿನಾಂಕ ಮತ್ತು ಸಮಯ
ಅಮೆರಿಕ ಅಧ್ಯಕ್ಷೀಯ ಚುನಾವಣೆ ನವೆಂಬರ್ 5ರಂದು ಮಂಗಳವಾರ ನಡೆಯಲಿದೆ. ಮತದಾನದ ಸಮಯ ಹಲವು ರಾಜ್ಯಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದ್ದರೂ, ಬಹುತೇಕ ಬೆಳಗ್ಗೆ 6 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ನಡೆಯಲಿದೆ. (ಭಾರತೀಯ ಕಾಲಮಾನದ ಪ್ರಕಾರ ನವೆಂಬರ್ 6, ಸಂಜೆ 4.30 ರಿಂದ ಮರುದಿನ ಮುಂಜಾನೆ 6.30ರವರೆಗೆ).
ಚುನಾವಣೋತ್ತರ ಸಮೀಕ್ಷೆಗಳು ಯಾವಾಗ
ಭಾರತದಲ್ಲಿ ನಡೆದಂತೆ ಯುಎಸ್ ಚುನಾವಣೆಯಲ್ಲಿ ಕೂಡ ಚುನಾವಣೋತ್ತರ ಸಮೀಕ್ಷೆಗಳು ನಡೆಯುತ್ತವೆ. ನವೆಂಬರ್ 5 ರಂದು ಸಂಜೆ 5 ಗಂಟೆ ಬಳಿಕ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶಗಳು ಹೊರಬೀಳಲಿದೆ. (ಭಾರತೀಯ ಕಾಲಮಾನ ನವೆಂಬರ್ 6, ಮಧ್ಯರಾತ್ರಿ 2.30 ಗಂಟೆಗೆ)
ಫಲಿತಾಂಶ ಘೋಷಣೆ ಯಾವಾಗ?
ಸುದ್ದಿ ಸಂಸ್ಥೆಗಳು ರಾಜ್ಯವಾರು ನಿರ್ದಿಷ್ಟ ಅಂಕಿ ಅಂಶಗಳನ್ನು ಮಾತ್ರ ಹಂಚಿಕೊಳ್ಳಬಹುದು. ಆದರೆ ಆ ರಾಜ್ಯದ ಎಲ್ಲಾ ಮತಗಳನ್ನು ಎಣಿಕೆ ಮಾಡುವವರೆಗೆ ಫಲಿತಾಂಶಗಳನ್ನು ಘೋಷಣೆ ಮಾಡುವುದಿಲ್ಲ. ಪ್ರಮುಖವಾಗಿ ಯುದ್ಧಭೂಮಿ ರಾಜ್ಯಗಳಲ್ಲಿ ಸಮಗ್ರವಾಗಿ ಮತ ಎಣಿಕೆ ಮುಗಿಯುವವರೆಗೂ ಫಲಿತಾಂಶಗಳನ್ನು ಪ್ರಕಟಿಸುವುದಿಲ್ಲ.
ಒಬ್ಬ ಅಭ್ಯರ್ಥಿ ಭಾರಿ ಅಂತರದಲ್ಲಿ ಮುನ್ನಡೆ ಪಡೆದಿದ್ದರೆ ಮಾತ್ರ ಕೆಲವೇ ಗಂಟೆಗಳಲ್ಲಿ ವಿಜೇತರನ್ನು ಘೋಷಣೆ ಮಾಡಲಾಗುತ್ತದೆ. ಆದರೆ ಸಮಬಲದ ಸ್ಪರ್ಧೆ ಇದ್ದಾಗ ಮಾತ್ರ ಫಲಿತಾಂಶ ಘೋಷಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳಲಾಗುತ್ತದೆ. ಮತಗಳ ಎಣಿಕೆ ವೇಗ ಮತ್ತು ಕಾನೂನು ಸವಾಲುಗಳನ್ನು ನೋಡಿಕೊಂಡು ಫಲಿತಾಂಶ ಪ್ರಕಟಿಸಲಾಗುತ್ತದೆ, ತೀರಾ ಹತ್ತಿರದ ಸ್ಪರ್ಧೆ ಇದ್ದಾಗ ಫಲಿತಾಂಶ ಘೋಷಣೆಗೆ ಕೆಲವು ದಿನ ಅಥವಾ ಕೆಲವು ವಾರಗಳು ಕೂಡ ಬೇಕಾಗುತ್ತದೆ. ಅಮೆರಿಕ ಚುನಾವಣೆಯ ಪ್ರಮುಖ ವಿದ್ಯಮಾನಗಳನ್ನು ಪ್ರಮುಖ ರಾಷ್ಟ್ರೀಯ ವಾಹಿನಿಗಳು, ಅಂತಾರಾಷ್ಟ್ರೀಯ ವಾಹಿನಿಗಳಲ್ಲಿ ನೋಡಬಹುದಾಗಿದೆ.
-
ಸಕಲೇಶಪುರದಲ್ಲಿ ಫೋಟೋಗ್ರಾಫರ್ಗಳ ಮೇಲೆ ಹಲ್ಲೆ ಪ್ರಕರಣ: ದುಬಾರಿ ಕ್ಯಾಮೆರಾಗೆ ಹಾನಿ, ಆರೋಪಿಗಳ ಬಂಧನ -
ಸೋಷಿಯಲ್ ಮೀಡಿಯಾಗೆ ವಯೋಮಿತಿ ಫಿಕ್ಸ್?: ಕಠಿಣ 'ಎಐ' ಕಾನೂನು ಜಾರಿಗೆ ಸಂಸದೀಯ ಸಮಿತಿ ಶಿಫಾರಸು -
ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಕಾಂಗ್ರೆಸ್ ಉಗ್ರರಿಗೆ 'ಗ್ಯಾರಂಟಿ ಭಾಗ್ಯ' ನೀಡಿದರೂ ಅಚ್ಚರಿಯಿಲ್ಲ; ವಿಜಯೇಂದ್ರ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Price Hike: ಕೇಂದ್ರದಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಹೇಳಿಕೆ, ದರ ಹೆಚ್ಚಿಸಿದ್ದೇ ಕಾಂಗ್ರೆಸ್; ಡಿಕೆಶಿಗೆ ತಿರುಗೇಟು -
Gen Z ಪ್ರತಿಭಟನೆಯಲ್ಲಿ 'ಪಾತ್ರ': ಬಲೆನ್ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೇಪಾಳ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ -
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು












Click it and Unblock the Notifications