ಅಮೆರಿಕ ಅಧ್ಯಕ್ಷಿಯ ಚುನಾವಣೆ: ಡೊನಾಲ್ಡ್ ಟ್ರಂಪ್ ಮುನ್ನಡೆ

Posted By:
Subscribe to Oneindia Kannada

ವಾಷಿಂಗ್ಟನ್, ನವೆಂಬರ್, 09: ಅಮೆರಿಕ ಅಧ್ಯಕ್ಷಿಯ ಚುನಾವಣೆಗೆ ಅಮೆರಿಕ ಪ್ರಜೆಗಳು ಮಂಗಳವಾರ ಚಲಾಯಿಸಿದ ಮತ ಎಣಿಕೆ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು.

ಆರಂಭಿಕ ಸುತ್ತಿನಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಪ್ರಮುಖ ರಾಜ್ಯಗಳಾದ ಫ್ಲೋರಿಡಾ, ನಾರ್ತ್ ಕರೊಲಿನಾ, ಒಹಿಯೋ ರಾಜ್ಯಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರು ಹಿನ್ನೆಡೆ ಅನುಭವಿಸಿದ್ದಾರೆ.

ಈ ಮೂರು ಪ್ರಮುಖ ರಾಜ್ಯಗಳಲ್ಲಿ ಟ್ರಂಪ್ ಮುನ್ನಡೆ ಕಾಯ್ದುಕೊಂಡಿರುವುದರಿಂದ ಟ್ರಂಪ್ ಅವರು ಹಿಲರಿ ಅವರಿಗಿಂತ ಸ್ಪಷ್ಟ ಮುನ್ನಡೆ ಕಾಯ್ದುಕೊಂಡಿದ್ದು, ಅಧ್ಯಕ್ಷ ಗಾದಿ ಏರಲಿ ಸಿದ್ಧರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

US election 2016: Donald Trump leading Hillary Cinton

ಅಧ್ಯಕ್ಷ ಗಾದಿ ಏರಬೇಕಾದರೆ 270 ಮತಗಳ ಸ್ಪಷ್ಟ ಬಹುಮತವನ್ನು ಅಭ್ಯರ್ಥಿ ಸಾಧಿಸಬೇಕು. ಇತ್ತೀಚಿನ ಮಾಹಿತಿ ಪ್ರಕಾರ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು 238 ಮತಗಳನ್ನು ಪಡೆದು ಮುನ್ನಡೆ ಕಾಯ್ದುಕೊಂಡಿದ್ದಾರೆ.

ಇನ್ನು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರು 209 ಮತಗಳನ್ನು ಪಡೆದು ಹಿನ್ನಡೆ ಅನುಭವಿಸಿದ್ದಾರೆ.
ಮೊದಲ ಮತದಾನವನ್ನು ಅಮೆರಿಕದ ನ್ಯೂ ಹ್ಯಾಂಪೈರ್ ರಾಜ್ಯದ ಪುಟ್ಟ ಊರು ಡಿಕ್ಸಿಲ್ ನಾಚ್ ನ ನಾಗರಿಕರು ಮಾಡಿದರು.

US election 2016: Donald Trump leading Hillary Cinton

ಡಿಕ್ಸಿಲ್ ನಾಚ್ ನಲ್ಲಿ ಚಲಾವಣೆಯಾದ 8 ಮತಗಳ ಪೈಕಿ ಒಟ್ಟು ನಾಲ್ಕು ಮತಗಳು ಹಿಲರಿ ಕ್ಲಿಂಟನ್ ಅವರ ಪಾಲಾಗಿದ್ದು, ಉಳಿದ 4 ಮತಗಳಲ್ಲಿ 2 ಮತಗಳು ಡೊನಾಲ್ಡ್ ಟ್ರಂಪ್ ಮತ್ತು ಉಳಿದ ಅಭ್ಯರ್ಥಿಗಳಿಗೆ ಹಂಚಿಕೆಯಾಗಿವೆ.

ಇನ್ನು ಡಿಕ್ಸ್ವಿಲ್ ಜತೆ ಹಾರ್ಟ್ಸ್ ಲೊಕೇಶನ್, ಮಿಲ್ಸ್ಫೀಲ್ಡ್ ಗಳಲ್ಲಿಯೂ ಸಹ ಮತದಾನ ನಡೆದಿದ್ದು, ಮೂರು ರಾಜ್ಯಗಳಿಂದ 32 ಮತಗಳು ಟ್ರಂಪ್ ಅವರಿಗೆ 25 ಮತಗಳು ಹಿಲರಿ ಅವರಿಗೆ ಬಿದ್ದಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Donald Trump was projected to win the key swing states of Florida, North Carolina and Ohio early this morning, giving him a clear path to the White House.
Please Wait while comments are loading...