Donald Trump: ಚೀನಾ ಅಧ್ಯಕ್ಷರಿಗೆ ಫೋನ್ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್!
ಅಮೆರಿಕ ಮತ್ತೆ ಮತ್ತೆ ತನ್ನ ಡಬಲ್ ಗೇಮ್ ನೀತಿಯನ್ನ ಮುಂದುವರಿಸಿದೆ, ಒಂದು ಕಡೆ ಭಾರತಕ್ಕೆ ತೆರಿಗೆ ಹೇರಿಕೆ ಹೊರೆ ಹಾಕುತ್ತಿರುವ ಇದೇ ಡೊನಾಲ್ಡ್ ಟ್ರಂಪ್ ಆಡಳಿತ ಮತ್ತೊಂದು ಕಡೆ ಚೀನಾ & ರಷ್ಯಾ ಜೊತೆಗೆ ಸಂಬಂಧ ಗಟ್ಟಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಇದರ ಫಲವಾಗಿ ಇದೀಗ ಟ್ರಂಪ್ ಅವರೇ ನೇರವಾಗಿ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಜೊತೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಇದು ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಬಂದಿದ್ದು, ಮಗು ಚಿವುಟುವುದು & ತೊಟ್ಟಿಲನ್ನು ಕೂಡ ತೂಗುವುದು ಅಮೆರಿಕದ ಬುದ್ಧಿ ಅಂತಾ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಚೀನಾ & ಅಮೆರಿಕ ನಡುವೆ ಕೆಲವು ದಿನಗಳ ಹಿಂದೆ ತೆರಿಗೆ ವಾರ್ ನಡೆದಿತ್ತು. ಮೊದಲಿಗೆ ಚೀನಾದ ಮೂಲಕ ಆಮದು ಆಗುವ ವಸ್ತುಗಳ ಮೇಲೆ ಭಾರಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಹಾಕುವ ಬೆದರಿಕೆ ಹಾಕಿತ್ತು ಅಮೆರಿಕ. ಇದಕ್ಕೆ ಸರಿಯಾಗಿ ಉತ್ತರ ನೀಡಿದ್ದ ಚೀನಾ, ತಾನು ಕೂಡ ಹೆಚ್ಚಿನ ಟ್ಯಾಕ್ಸ್ ಅನ್ನ ಹಾಕುವ ವಾರ್ನಿಂಗ್ ಕೊಟ್ಟಿತ್ತು. ಈ ಮೂಲಕ ಚೀನಾ & ಅಮೆರಿಕ ನಡುವೆ ಭಾರಿ ದೊಡ್ಡ ಗಲಾಟೆ ನಡೆದಿತ್ತು. ಆದರೆ ಅಂತಿಮವಾಗಿ ಇಬ್ಬರೂ ಈಗ ಸರಿ ಹೋಗಿದ್ದು, ಡೊನಾಲ್ಡ್ ಟ್ರಂಪ್ ದಿಢೀರನೇ ಈಗ ಚೀನಾ ಅಧ್ಯಕ್ಷರ ಜೊತೆ ಮಾತನಾಡಿದ್ದಾರೆ.

ಚೀನಾ ಜೊತೆಗೆ ಟ್ರಂಪ್ ಚರ್ಚೆ
ಇತ್ತೀಚೆಗೆ ಚೀನಾ ತನ್ನ ಸೇನಾ ಬಲವನ್ನು ಇಡೀ ಜಗತ್ತಿಗೇ ತೋರಿಸಿತ್ತು. ಅದರಲ್ಲೂ ರಷ್ಯಾ & ಭಾರತ ಸೇರಿ ಅನೇಕ ದೇಶಗಳನ್ನು ತನ್ನ ನೆಲಕ್ಕೆ ಆಹ್ವಾನಿಸಿ ಚೀನಾ ದೊಡ್ಡ ಮಟ್ಟಿಗೆ ಶಕ್ತಿ ಪ್ರದರ್ಶನ ಮಾಡಿ ಎಚ್ಚರಿಕೆ ಸಂದೇಶ ಕೊಟ್ಟಿತ್ತು. ಆ ನಂತರ ಅಮೆರಿಕ ಕೂಡ ಭವಿಷ್ಯದ ಬಗ್ಗೆ ಚಿಂತೆ ಮಾಡುವಂತಾಗಿ ಕೊನೆಗೆ ಇಬ್ಬರೂ ಸಂಧಾನಕ್ಕೆ ಸಿದ್ಧ ಎನ್ನುವ ರೀತಿ ಮೆಸೇಜ್ ಕಳುಹಿಸಿದ್ದರು. ಈ ಸಂದೇಶದ ನಂತರ ಈಗ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಜೊತೆ ನೇರವಾಗಿ ದೂರವಾಣಿ ಮೂಲಕ ಚರ್ಚಿಸಿದ್ದಾರೆ ಟ್ರಂಪ್.
ಭಾರತಕ್ಕೆ ಏನಾದರೂ ಎಫೆಕ್ಟ್ ಆಗುತ್ತಾ?
ಅಮೆರಿಕ ಎಂಬ ದೇಶವನ್ನು ಪೂರ್ತಿಯಾಗಿ ಯಾಕೆ ನಂಬಬಾರದು ಅನ್ನೋ ವಿಷಯ ಇದೀಗ ಮತ್ತೆ ಮತ್ತೆ ಪ್ರೂವ್ ಆಗುತ್ತಿದೆ. ಅದರಲ್ಲೂ ಅಮೆರಿಕ ಯಾವ ಕ್ಷಣದಲ್ಲಿ ಬೇಕಾದರೂ ಮತ್ತೊಂದು ದೇಶದ ಜೊತೆ ಹೋಗುವ ಮೂಲಕ ನಂಬಿದವರಿಗೆ ಕೈಕೊಡುತ್ತೆ ಅನ್ನೋದು ಮತ್ತೆ ಪ್ರೂವ್ ಆಗಿದೆ. ಹೀಗಾಗಿ ಇದೀಗ ಟ್ರಂಪ್ & ಚೀನಾ ಅಧ್ಯಕ್ಷರ ನಡುವಿನ ಚರ್ಚೆ ಬಗ್ಗೆ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಈ ಮಾತುಕತೆ ಭಾರತದ ಮೇಲೆ ಎಫೆಕ್ಟ್ ಮಾಡುವುದು ತುಂಬಾ ಕಡಿಮೆ ಎಂಬ ವಿಶ್ಲೇಷಣೆ ಕೇಳಿಬಂದಿದೆ.












Click it and Unblock the Notifications