ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನಕ್ಕೆ ಅಮೆರಿಕದ ಮಿಲಿಟರಿ ಅನುದಾನ ಕಟ್

By Prasad
|
Google Oneindia Kannada News

ವಾಷಿಂಗ್ಟನ್ ಡಿಸಿ, ಜುಲೈ 21 : ಭಯೋತ್ಪಾದಕ ಸಂಘಟನೆ ಹಕ್ಕಾನಿ ನೆಟ್ವರ್ಕ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ವಿಫಲವಾಗಿದ್ದರಿಂದ ಪಾಕಿಸ್ತಾನಕ್ಕೆ 350 ಮಿಲಿಯನ್ ಡಾಲರ್ ಹಣ ಪಾವತಿಸಲು ಅಮೆರಿಕ ನಿರಾಕರಿಸಿ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

ಪಾಕಿಸ್ತಾನಕ್ಕೆ ಹಣವನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಅವರು ಸಂಸತ್ತಿಗೆ ತಿಳಿಸಿದ್ದಾರೆ. ಹಕ್ಕಾನಿ ನೆಟ್ವರ್ಕ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಒಪ್ಪಂದವಾಗಿತ್ತು.

ಅಫ್ಘನ್ ತಾಲಿಬಾನ್ ಮತ್ತು ಹಕ್ಕಾನಿ ನೆಟ್ವರ್ಕ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಇಸ್ಲಾಮಾಬಾದ್ ಹಿಂದೇಟು ಹಾಕುತ್ತಿರುವುದರಿಂದ ಕಳೆದ ದಶಕಗಳಿಂದಲೇ ಪಾಕಿಸ್ತಾನ ಮತ್ತು ಅಮೆರಿಕದ ನಡುವೆ ಸಂಬಂಧ ಸಾಕಷ್ಟು ಹಳಸಿದೆ.

US blocks 350 million dollar aid to Pakistan

ಆದರೆ, ಪಾಕಿಸ್ತಾನಕ್ಕೆ ಮಿಲಿಟರಿ ಅನುದಾನ ನೀಡದಿರುವ ನಿರ್ಧಾರವನ್ನು ಅಮೆರಿಕ ತೆಗೆದುಕೊಂಡಿರುವುದು ಇದು ಮೊದಲೇನಲ್ಲ. ಕಳೆದ ವರ್ಷ ಕೂಡ ಇದೇ ಕಾರಣದಿಂದ 300 ಮಿಲಿಯನ್ ಡಾಲರ್ ಹಣವನ್ನು ಹಿಡಿದಿಟ್ಟುಕೊಂಡಿತ್ತು.

ಅಮೆರಿಕದ ಪೆಂಟಗಾನ್ ತೆಗೆದುಕೊಂಡಿರುವ ಈ ಮಹತ್ತರ ನಿರ್ಧಾರದಿಂದಾಗಿ ಪಾಕಿಸ್ತಾನಕ್ಕೆ ಭಾರೀ ಹೊಡೆತ ಬಿದ್ದಂತಾಗಿದೆ. ಹಕ್ಕಾನಿ ನೆಟ್ವರ್ಕ್ ಅಮೆರಿಕ ಮತ್ತು ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸುತ್ತಲೇ ಇದೆ. ಈ ಸಂಘಟನೆ ಅಫ್ಘಾನಿಸ್ತಾನದ ಗಡಿಯಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ನೆಲೆ ಕಂಡುಕೊಂಡಿದೆ.

English summary
In a major move United States of America has blocked 350 million dollar aid to Pakistan for not taking any action against Hakkani network. It is a big blow to terror ridden Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X