ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲ್ಲಾ ಬಿಟ್ಟರೆ ಬೇರೆ ದೇವರು ಇರದ ನಾಡಲ್ಲಿ ಏಳಲಿದೆ ದೇಗುಲ!

|
Google Oneindia Kannada News

ಅಬುಧಾಬಿ, ಆಗಸ್ಟ್ 17 : ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಯುನೈಟೆಡ್ ಅರಬ್ ಎಮಿರೈಟ್ಸ್ (ಯುಎಇ) ಪ್ರವಾಸ ಕೈಗೊಂಡಿದ್ದಾರೆ. ಅತ್ತ ಅಬುದಾಬಿಯಲ್ಲಿ ದೇವಾಲಯ ನಿರ್ಮಾಣ ಮಾಡಲು ಭೂಮಿ ನೀಡಲು ಅರಬ್ ರಾಷ್ಟ್ರ ಒಪ್ಪಿಗೆ ನೀಡಿದೆ.

ಎರಡು ದಿನಗಳ ಅರಬ್ ರಾಷ್ಟ್ರ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅಬುಧಾಬಿಗೆ ಆಗಮಿಸಿದ್ದಾರೆ. ಸೋಮವಾರ ಅವರು ರಾಷ್ಟ್ರದಲ್ಲಿರುವ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. [ಅಬುಧಾಬಿ : ಪ್ರಧಾನಿ ಮೋದಿ ಅವರಿಗೆ ಭರ್ಜರಿ ಸ್ವಾಗತ]

narendra modi

ಅರಬ್ ರಾಷ್ಟ್ರದಲ್ಲಿ ದೇವಾಲಯ ನಿರ್ಮಿಸಲು ಅವಕಾಶ ನೀಡಬೇಕು ಎಂಬುದು ಭಾರತೀಯ ಮೂಲದವರ ಬಹುದಿನದ ಬೇಡಿಕೆಯಾಗಿತ್ತು. ನರೇಂದ್ರ ಮೋದಿ ಭೇಟಿ ನೀಡಿದ ನಂತರ ಭೂಮಿ ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ. [ಮೋಡಿಗಾರ, ಸೊಗಸುಗಾರ ಸೆಲ್ಫಿ ಮೋಹಿ ಮೋದಿ]

ದೇವಾಲಯ ನಿರ್ಮಾಣಕ್ಕೆ ಅರಬ್ ರಾಷ್ಟ್ರ ಒಪ್ಪಿಗೆ ನೀಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್‌ ಸ್ವರೂಪ್‌ ಅವರು ಟ್ವಿಟ್ ಮಾಡಿದ್ದಾರೆ.

ಅರಬ್ ರಾಷ್ಟ್ರದಲ್ಲಿ ಸುಮಾರು 2.6 ದಶಲಕ್ಷ ಭಾರತೀಯರು ನೆಲೆಸಿದ್ದಾರೆ. ಅರಬ್ ರಾಷ್ಟ್ರ 'ಮಿನಿ ಭಾರತ' ಎಂದು ಸ್ಥಳೀಯ ಪತ್ರಿಕೆಗೆ ನೀಡಿದ ಚುಟುಕು ಸಂದರ್ಶನದಲ್ಲಿ ಮೋದಿ ಬಣ್ಣಿಸಿದ್ದಾರೆ. ದೇಗುಲ ನಿರ್ಮಾಣಕ್ಕಾಗಿ ಭೂಮಿ ನೀಡಿದ್ದಕ್ಕೆ ಯುಎಇ ಸರಕಾರಕ್ಕೆ ಧನ್ಯವಾದವನ್ನೂ ತಿಳಿಸಿದ್ದಾರೆ.


ಮೋದಿ ಸೋಮವಾರದ ಕಾರ್ಯಕ್ರಮಗಳು

* ಯುವರಾಜ ಶೇಖ್ ಮೊಹಮ್ಮದ್ ಜತೆ ಮಾತುಕತೆ
* ಅಬುದಾಭಿಯಿಂದ ದುಬೈಗೆ ಪ್ರಯಾಣ
* ಪ್ರಧಾನಿ ಮೊಹಮ್ಮದ್ ಬಿನ್ ರಶೀದ್ ಮಕ್ತೌಮ್ ಜತೆ ಮಾತುಕತೆ
* ಬುರ್ಜ್ ಖಲೀಫಾಗೆ ಭೇಟಿ
* ದುಬೈ ಕ್ರಿಕೆಟ್ ಮೈದಾನದಲ್ಲಿ ಭಾರತೀಯರನ್ನು ಉದ್ದೇಶಿಸಿ ಭಾಷಣ

English summary
The United Arab Emirates decided to allot land for building a temple in Abu Dhabi for the Indian community. Indian Prime Minister Narendra Modi in UAE for two-day visit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X