ನೆಲದಡಿಯಲ್ಲೇ ನೆಲೆಸಿದೆ ಇಡೀ ಹಳ್ಳಿ : ಸುರಂಗದೊಳಗೆ ಕಟ್ಟಿರುವ ದೊಡ್ಡ ದೊಡ್ಡ ಮನೆ; ವಿಶಿಷ್ಟ ಮನೆಯ ವಿಡಿಯೋ
Underground Village: ಮನೆಗಳಲ್ಲಿ ತುಂಬಾ ವಿಧ, ಗುಡಿಸಲು, ಬಂಗಲೆ, ಅಪಾರ್ಟ್ಮೆಂಟ್, ಬೋಟ್ ಹೌಸ್, ಸ್ಟಿಲ್ಟ್ ಹೌಸ್ ಹೀಗೆ ಇನ್ನೂ ತುಂಬಾ ಬಗೆ ಇದೆ. ಸಾಮಾನ್ಯವಾಗಿ ಕಲ್ಲು, ಮಣ್ಣು, ಸಿಮೆಂಟ್, ಇಟ್ಟಿಗೆಯನ್ನು ಬಳಸಿ ಮನೆಯನ್ನು ಕಟ್ಟಲಾಗುತ್ತದೆ. ಕೆಲವರು ಪರ್ವತಗಳ ಮೇಲೆ ಮನೆ ಕಟ್ಟುತ್ತಾರೆ. ಇನ್ನು ಕೆಲವರು ಸಮುದ್ರ ತೀರದಲ್ಲಿ ವಾಸ ಮಾಡ್ತಾರೆ. ಆದರೆ ಭೂಮಿಯ ಕೆಳಗೆ ಸುರಂಗ ಕೊರೆದು ಅದರಲ್ಲಿ ಮನೆ ಕಟ್ಟಿ ಬದುಕುವುದನ್ನು ನೋಡಿದ್ದೀರಾ?

ನೆಲದಡಿಯಲ್ಲಿ ಕಟ್ಟಲಾದ ವಿಚಿತ್ರ ಡಿಸೈನಿನ ಮನೆ :
ಹೌದು, ಕೇಳುವುದಕ್ಕೆನೇ ವಿಚಿತ್ರ ಅನ್ನಿಸುತ್ತಿದೆ. ಆದರೂ ಇದು ಸತ್ಯ. ಇಲ್ಲಿ ನೆಲವನ್ನು ಅಗೆದು ಸುರಂಗ ಮಾಡಿ ಅಲ್ಲಿ ಮನೆಯನ್ನು ಕಟ್ಟುತ್ತಾರೆ. ಮನೆ ಅಂದರೆ ಕೋಣೆ, ಕಿಟಕಿ, ಬಾಗಿಲು ಎಲ್ಲವೂ ಇರುವಂಥಹ ನಿಜವಾದ ಮನೆ. ವಿಶಿಷ್ಟ ಎಂಜಿನಿಯರಿಂಗ್ ಪದ್ದತಿಯನ್ನು ಬಳಸಿ ಈ ಮನೆಯನ್ನು ಕಟ್ಟಲಾಗುತ್ತದೆ. ಇದೀಗ ನೆಲದ ಅಡಿಯಲ್ಲಿ ಕಟ್ಟಲಾಗಿರುವ ಇಲ್ಲಿನ ಮನೆಯ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು @sciencegirl ಎನ್ನುವ ಸೋಶಿಯಲ್ ಮೀಡಿಯಾ ಅಕೌಂಟಿನಲ್ಲಿ ಶೇರ್ ಮಾಡಲಾಗಿದೆ. ಈ ಮನೆಯಲ್ಲಿನ ಕೋಣೆಗಳ ಡಿಸೈನನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.
ಈ ವಿಡಿಯೋದ ಶೀರ್ಷಿಕೆಯಲ್ಲಿ ಈ ಮನೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಇಲ್ಲಿ ಕೊಟ್ಟ ಮಾಹಿತಿಯ ಪ್ರಕಾರ, ಈ ಗ್ರಾಮವು ಉತ್ತರ ಆಫ್ರಿಕಾದ ಟ್ಯುನೀಷಿಯಾ ದೇಶದಲ್ಲಿದೆ. ಈ ಊರಿನ ಹೆಸರು ಮತ್ಮಾತ. ಇಲ್ಲಿ ಎಲ್ಲಿ ನೋಡಿದರೂ ನೆಲದಡಿಯಲ್ಲಿ ಕಟ್ಟಲಾದ ಮನೆಗಳೇ ಕಣ್ಣಿಗೆ ಬೀಳುತ್ತದೆ. ಈ ಮನೆಯ ರೂಮನ್ನು ಆಳವಾದ ಗುಂಡಿ ಅಗೆದು ನಿರ್ಮಿಸಲಾಗಿದೆ. ಈ ರೂಮಿಗೆ ಹೋಗಬೇಕಾದರೆ ಸುರಂಗಗಳನ್ನು ಬಳಸಲಾಗುತ್ತದೆ. ಈ ಮನೆಯನ್ನು ನೋಡುವಾಗ ನೆಲದ ಕೆಳಗೆ ವಿಭಿನ್ನ ಜಗತ್ತು (world) ಇರುವಂತೆ ತೋರುತ್ತದೆ.
ನೆಲ ಅಗೆದು ಮನೆ ನಿರ್ಮಾಣ :
ಮತ್ಮಾತದ ಅತ್ಯಂತ ವಿಶೇಷವಾದ ವಿಷಯವೆಂದರೆ ಇಲ್ಲಿನ ಸಾಂಪ್ರದಾಯಿಕ ಭೂಗತ ಮನೆಗಳು. ಈ ಮನೆಯ್ನು ಕಟ್ಟುವುದಕ್ಕೆ ಮೊದಲು ನೆಲದಲ್ಲಿ ದೊಡ್ಡ ಮತ್ತು ಆಳವಾದ ಸುರಂಗವನ್ನು ಅಗೆಯಲಾಗುತ್ತದೆ. ನಂತರ ಗುಂಡಿಯೊಳಗೆಯೇ ಸುತ್ತಲೂ ಕೊಠಡಿ ನಿರ್ಮಿಸಲಾಗುತ್ತದೆ. ಒಂದು ರೂಮಿನಿಂದ ಇನ್ನೊಂದು ರೂಮಿಗೆ ಹೋಗಲು ಸುರಂಗವನ್ನೇ ಬಳಸಿಕೊಂಡೇ ಹೋಗಬೇಕು. ಈ ಮನೆಯ ವಿನ್ಯಾಸ ಸಾಮಾನ್ಯ ಮನೆಗಿಂತ ಸಂಪೂರ್ಣ ಭಿನ್ನವಾಗಿದೆ. ಹೆಚ್ಚಿನ ಮನೆಯ ಛಾವಣಿ ಆಕಾಶದ ಕಡೆಗೆಯೇ ಇದೆ. ಈ ಮನೆಗಳ (home) ಹೆಚ್ಚಿನ ಭಾಗವು ನೆಲದೊಳಗೆ ಆವರಿಸಿಕೊಮಡಿದೆ. ಹೊರಗಿನಿಂದ ನೋಡಿದರೆ, ಬರೀಯ ಗುಂಡಿಯ ತೆರೆದ ಭಾಗ ಮತ್ತು ಒಳಗೆ ಹೋಗುವ ದಾರಿ ಮಾತ್ರ ಕಾಣಿಸುತ್ತದೆ.
ಭೂಗತ ಮನೆಯನ್ನೇ ಯಾಕೆ ಕಟ್ಟುತ್ತಾರೆ ? :
ಇದು ಶುಷ್ಕ ಪ್ರದೇಶ. ಅಲ್ಲಿ ಬೇಸಿಗೆಯಲ್ಲಿ ತಾಪಮಾನ ತುಂಬಾ ಹೆಚ್ಚಾಗಿರುತ್ತದೆ. ಇಲ್ಲಿಯ ಬಿಸಿಲನ್ನು ತಡೆಯುವುದು ಸಾಧ್ಯವೇ ಇಲ್ಲ. ಹೀಗಿರುವಾಗ ನೆಲದ ಅಡಿಯಲ್ಲಿ ಕಟ್ಟಲಾಗಿರುವ ಮನೆಯ ಒಂದು ದೊಡ್ಡ ಪ್ರಯೋಜನವೆಂದರೆ ಅವು ಹೊರಗಿನ ಶಾಖದಿಂದ ಜನರನ್ನು ರಕ್ಷಿಸುತ್ತದೆ. ನೆಲದ ಅಡಿಯಲ್ಲಿನ ತಾಪಮಾನ ಹೊರಗಿನದಕ್ಕಿಂತ ತುಂಬಾ ಕಡಿಮೆಯಿರುತ್ತದೆ. ಇದರಿಂದ ಜನರಿಗೆ ಸುಡುವ ಬಿಸಿಲಿನಿಂದ ಪರಿಹಾರ ನೀಡುತ್ತದೆ. ಅಂತಹ ಮನೆಗಳ ಇನ್ನೊಂದು ಪ್ರಯೋಜನವೆಂದರೆ ಅವು ಹಗಲು ಹೊತ್ತಿನ ಶಾಖವನ್ನು ಕಡಿಮೆ ಮಾಡುವುದಲ್ಲದೆ ರಾತ್ರಿಯ ನಡುಗುವ ಚಳಿಯಿಂದಲೂ ರಕ್ಷಣೆ ನೀಡುತ್ತದೆ. ಇಲ್ಲಿ ಕಟ್ಟಲಾದ ಈ ಮನೆ ಅಲ್ಲಿ ವಾಸಿಸಲು ಇರುವ ಸ್ಥಳ ಮಾತ್ರವಲ್ಲ, ಅಲ್ಲಿನ ಜನರ ಹಳೆಯ ವಾಸ್ತುಶಿಲ್ಪ ಮತ್ತು ತಿಳುವಳಿಕೆಗೆ ಉದಾಹರಣೆಗಳಾಗಿವೆ.
In Matmata, Tunisia, people have lived in underground homes for hundreds of years, with rooms carved into deep pits and connected by tunnels. https://t.co/BRU9Qyaxjh
— Science girl (@sciencegirl) October 23, 2026


Click it and Unblock the Notifications
