ರಷ್ಯಾ ಆಕ್ರಮಣದ ವಿರುದ್ಧ ಜಾಗತಿಕ ಹೋರಾಟಕ್ಕೆ ಝೆಲೆನ್ಸ್ಕಿ ಒತ್ತಾಯ

ವಾಶಿಂಗ್ಟನ್, ಮಾರ್ಚ್ 24: ಉಕ್ರೇನ್ ವಿರುದ್ಧ ನಿರ್ದಾಕ್ಷಿಣ್ಯವಾಗಿ ನಿರಂತರ ಸೇನಾ ಕಾರ್ಯಾಚರಣೆ, ಮಿಸೈಲ್ ದಾಳಿಯನ್ನು ಮಾಡುತ್ತಿರುವ ರಷ್ಯಾ ಯುದ್ಧದ ವಿರುದ್ಧ ಜಾಗತಿಕ ಪ್ರತಿಭಟನೆಗಳನ್ನು ನಡೆಸುವಂತೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಒತ್ತಾಯಿಸಿದ್ದಾರೆ.

"ಮಾರ್ಚ್ 24ರ ಗುರುವಾರದಿಂದ ಉಕ್ರೇನ್ ಅನ್ನು ಬೆಂಬಲಿಸುವ ಸೂಚಕವಾಗಿ ಉಕ್ರೇನಿಯನ್ ಚಿಹ್ನೆಗಳೊಂದಿಗೆ ಬನ್ನಿ, ಸ್ವಾತಂತ್ರ್ಯ ಮತ್ತು ಜೀವನವನ್ನು ಬೆಂಬಲಿಸಲು, ನಿಮ್ಮ ನಗರಗಳಲ್ಲಿನ ವೃತ್ತಗಳು ಹಾಗೂ ನಿಮ್ಮ ಬೀದಿಗಳಿಗೆ ಬನ್ನಿ, ನೀವು ಎಲ್ಲೆಲ್ಲಿಯೂ ಕಾಣಿಸಿಕೊಳ್ಳುವಂತಿರಬೇಕು," ಎಂದು ಝೆಲೆನ್ಸ್ಕಿ ವಿಡಿಯೋವೊಂದರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕಳೆದ ಫೆಬ್ರವರಿ 24ರಂದು ಉಕ್ರೇನ್ ವಿರುದ್ಧ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಮರ ಸಾರಿದರು. ಅಂದಿನಿಂದ ನಿರಂತರವಾಗಿ ಸೇನಾ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಎರಡು ರಾಷ್ಟ್ರಗಳ ನಡುವಿನ ಯುದ್ಧವು ಗುರುವಾರಕ್ಕೆ 29ನೇ ದಿನಕ್ಕೆ ಕಾಲಿಟ್ಟಿದೆ. ಜಾಗತಿಕ ಮಟ್ಟದಲ್ಲಿ ತಮ್ಮನ್ನು ಬೆಂಬಲಿಸುವಂತೆ ಮೇಲಿಂದ ಮೇಲೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

 Ukrainian President Volodymyr Zelensky urges global protests against Russia War

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಗೆ ಭಾರತದ ಗೈರು:

ಉಕ್ರೇನ್‌ನಲ್ಲಿನ ಮಾನವೀಯ ಬಿಕ್ಕಟ್ಟಿನ ಕುರಿತು ರಷ್ಯಾ ಮಾಡಿದ ನಿರ್ಣಯಕ್ಕೆ ಭಾರತವು ಇತರ 12 ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸದಸ್ಯರೊಂದಿಗೆ ಗೈರು ಹಾಜರಾಯಿತು. ರಷ್ಯಾದ ಕರಡು ನಿರ್ಣಯವನ್ನು ಸಿರಿಯಾ, ಉತ್ತರ ಕೊರಿಯಾ ಮತ್ತು ಬೆಲಾರಸ್ ಪ್ರಾಯೋಜಿಸಿದ್ದು, ಬುಧವಾರ ಕೌನ್ಸಿಲ್‌ನಲ್ಲಿ ಅಂಗೀಕರಿಸಲು ಅಗತ್ಯವಾದ 9 ಹೌದು ಎಂಬ ಮತಗಳನ್ನು ಪಡೆದುಕೊಳ್ಳವಲ್ಲಿ ಅದು ವಿಫಲವಾಯಿತು.

ರಷ್ಯಾ ವಿರುದ್ಧ ಹರಿಹಾಯ್ದ ಯುುಎಸ್ ರಾಯಭಾರಿ:

ವಿಶ್ವಸಂಸ್ಥೆಯಲ್ಲಿನ ಯುಎಸ್ ರಾಯಭಾರಿ ಲಿಂಡಾ ಥಾಮಸ್-ಗ್ರೀನ್‌ಫೀಲ್ಡ್, ಭದ್ರತಾ ಮಂಡಳಿಯಲ್ಲಿ ಸೋಲನುಭವಿಸಿದ ಉಕ್ರೇನ್‌ನಲ್ಲಿ ಮಾನವೀಯ ನಿರ್ಣಯವನ್ನು ಪರಿಚಯಿಸಿದ್ದಕ್ಕಾಗಿ ರಷ್ಯಾವನ್ನು ತರಾಟೆಗೆ ತೆಗೆದುಕೊಂಡರು. ಹದಗೆಡುತ್ತಿರುವ ಮಾನವೀಯ ಪರಿಸ್ಥಿತಿಗಳ ಬಗ್ಗೆ ಅಥವಾ ಯುದ್ಧವು ಛಿದ್ರಗೊಂಡ ಲಕ್ಷಾಂತರ ಜೀವನ ಮತ್ತು ಕನಸುಗಳ ಬಗ್ಗೆ ರಷ್ಯಾ ಕಾಳಜಿ ವಹಿಸುವುದಿಲ್ಲ. ಅವರು ಕಾಳಜಿ ವಹಿಸಿದರೆ, ಅವರು ಹೋರಾಟವನ್ನು ನಿಲ್ಲಿಸುತ್ತಾರೆ. ರಷ್ಯಾ ಆಕ್ರಮಣಕಾರಿ, ದಾಳಿಕೋರ, ಆಕ್ರಮಣಕಾರ, ಉಕ್ರೇನ್‌ನಲ್ಲಿ ಜನರ ವಿರುದ್ಧ ಕ್ರೌರ್ಯದ ಅಭಿಯಾನದಲ್ಲಿ ತೊಡಗಿರುವ ಏಕೈಕ ಪಕ್ಷ ಉಕ್ರೇನ್ ಆಗಿದೆ," ಎಂದು ಗ್ರೀನ್‌ಫೀಲ್ಡ್ ಹೇಳಿದರು.

Recommended Video

      RCB vs CSK ಪಂದ್ಯದಲ್ಲಿ Virat ಹಾಗು Dhoni ಟಾಸ್ ಗೆ ಬರೋದಿಲ್ಲ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+