Donald Trump: ಡೊನಾಲ್ಡ್ ಟ್ರಂಪ್ ಕೊಲೆಗೆ ಪ್ರಯತ್ನಿಸಿದವರ ಬಗ್ಗೆ ಉಕ್ರೇನ್ ಅಧ್ಯಕ್ಷನ ಸ್ಫೋಟಕ ಹೇಳಿಕೆ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೀವಕ್ಕೆ ಆಪತ್ತು ಎದುರಾದಂತೆ ಕಾಣುತ್ತಿದೆ. ಯಾಕೆ ಅಂದ್ರೆ ಪದೇ ಪದೇ ಡೊನಾಲ್ಡ್ ಟ್ರಂಪ್ ಹತ್ಯೆಗೆ ಆಗಂತುಕರು ಪ್ರಯತ್ನ ಮಾಡುತ್ತಿದ್ದಾರೆ. ಈ ಹಿನ್ನೆಲೆ ಜಗತ್ತಿನ ವಿವಿಧ ದೇಶಗಳ ಗಣ್ಯರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಆಕ್ರೋಶವನ್ನ ಕೂಡ ಹೊರ ಹಾಕಿದ್ದಾರೆ. ಅದ್ರಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಹಿಂಸೆಯನ್ನ ನಡೆಸಲು ಪ್ರಯತ್ನ ಮಾಡುತ್ತಿರುವುದು, ಸಹಿಸಲು ಅಸಾಧ್ಯ ಎಂಬ ಮಾತು ಕೇಳಿಬಂದಿದೆ. ಹೀಗಿದ್ದಾಗ ಉಕ್ರೇನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆ ನೀಡಿರುವ ಅದೊಂದು ಹೇಳಿಕೆ...

ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಗಿಯಲು & ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು, ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ಇದೇ ಸಮಯದಲ್ಲಿ ಅಮೆರಿಕದ ನೆಲ ನಡುಗುವಂತಹ ಘಟನೆಗಳು ನಡೆಯುತ್ತಿವೆ. ಯಾಕಂದ್ರೆ ಅಮೆರಿಕ ದೇಶದಲ್ಲಿ ಪದೇ ಪದೇ, ಗುಂಡಿನ ಸದ್ದು ಕೇಳಿ ಬರುತ್ತಿದೆ. ಇಷ್ಟುದಿನ ಸಾಮಾನ್ಯ ಜನರ ಮೇಲೆ ಗುಂಡಿನ ದಾಳಿಯ ನಡೆಸುತ್ತಿದ್ದ ದುಷ್ಟರು ಈಗ ನೇರವಾಗಿ ರಾಜಕೀಯ ನಾಯಕರನ್ನ ಕೂಡ ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪರಿಸ್ಥಿತಿ ಹೀಗಿದ್ದಾಗಲೇ ಇಂದು ಕೂಡ ಡೊನಾಲ್ಡ್ ಟ್ರಂಪ್ ಮೇಲೆ ಹತ್ಯೆ ಪ್ರಯತ್ನ ನಡೆದಿದ್ದು, ಈ ಬಗ್ಗೆ ಉಕ್ರೇನ್ ಅಧ್ಯಕ್ಷ ಏನು ಹೇಳಿದ್ದಾರೆ ಗೊತ್ತೆ? ಮಾಹಿತಿ ತಿಳಿಯಲು ಮುಂದೆ ಓದಿ.

Ukrainian President Said This About Donald Trump Assasination Attempt

ಉಕ್ರೇನ್ ಅಧ್ಯಕ್ಷರಿಗೆ ಭಯ ಕಾಡುತ್ತಿದೆಯಾ?

ಡೊನಾಲ್ಡ್ ಟ್ರಂಪ್ ಹತ್ಯೆ ಪ್ರಯತ್ನದ ಬಗ್ಗೆ ಮಾತನಾಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ತೀವ್ರ ಬೇಸರ ಹೊರ ಹಾಕಿದ್ದಾರೆ. ಅಲ್ಲದೆ, ಅಮೆರಿಕದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ & ರಾಜಕೀಯ ಹಿಂಸಾಚಾರ ಖಂಡಿಸಿದ್ದಾರೆ. ಉಕ್ರೇನ್ & ರಷ್ಯಾ ನಡುವೆ ಯುದ್ಧ ನಡೆಯುತ್ತಿದೆ. ಇಂತಹ ಸಮಯದಲ್ಲಿ ಅಮೆರಿಕದ ಬೆಂಬಲ ಇಲ್ಲದೆ ಹೋದರೆ ಉಕ್ರೇನ್ ಸೇನೆ ಒಂದು ಹೆಜ್ಜೆ ಕೂಡ ಮುಂದೆ ಇಡಲು ಆಗುವುದಿಲ್ಲ. ಹೀಗಾಗಿಯೇ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದರೂ, ಉಕ್ರೇನ್ ಹೃದಯದ ಬಡಿತ ಏರುತ್ತಿದೆ. ಯಾಕಂದ್ರೆ ಇಲ್ಲಿನ ಏರುಪೇರು ಉಕ್ರೇನ್ & ರಷ್ಯಾ ಯುದ್ಧದ ಮೇಲೆ ನೇರ ಪರಿಣಾಮ ಬೀರಲಿದೆ.

ಟ್ರಂಪ್ ಜೀವಕ್ಕೆ ಪದೇ ಪದೇ ಆಪತ್ತು?

ಒಟ್ನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಪ್ರಯತ್ನದ ಕುರಿತಾಗಿ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅತ್ಯಂತ ಕಠಿಣವಾದ ಮಾತುಗಳಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೇ ಹತ್ಯೆ ಪ್ರಯತ್ನ ಪ್ರಕರಣದ ಶಂಕಿತ ವ್ಯಕ್ತಿಯನ್ನು ಬೇಗನೆ ಬಂಧಿಸಿರುವುದು ಉತ್ತಮ ಸಂಗತಿ ಅಂತಾ ಕೂಡ ಹೇಳಿದ್ದಾರೆ. ಇನ್ನೊಂದು ಕಡೆ ಟ್ರಂಪ್ ಹತ್ಯೆಗೆ ಯತ್ನಿಸಿದ ಶಂಕಿತ ವ್ಯಕ್ತಿಗೆ ಉಕ್ರೇನ್ ಜೊತೆಗೆ ಸಂಬಂಧ ಇದೆ ಎಂಬ ಆರೋಪ ಇದ್ದು, ಈ ಕುರಿತಾಗಿಯೂ ಉಕ್ರೇನ್ ಈಗಾಗಲೇ ಸ್ಪಷ್ಟನೆ ನೀಡಿದೆ. ಹೀಗಾಗಿ ಟ್ರಂಪ್ ಅವರ ಘಟನೆ ಜಗತ್ತಿನ ಗಮನವನ್ನ ಸಳೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+