ರಷ್ಯಾ ದಾಳಿ ನಡುವೆ 14 ಪ್ರಯಾಣಿಕರಿದ್ದ ಉಕ್ರೇನ್ ಸೇನಾ ವಿಮಾನ ಪತನ
ಕೀವ್ ಫೆಬ್ರವರಿ 24: ರಷ್ಯಾದ ಪಡೆಗಳ ನಿರಂತರ ದಾಳಿಯ ನಡುವೆ ಉಕ್ರೇನ್ ಮಿಲಿಟರಿ ವಿಮಾನವೊಂದು ರಾಜಧಾನಿ ಕೀವ್ ಬಳಿ ಪತನಗೊಂಡಿದೆ. ವಿಮಾನದಲ್ಲಿ 14 ಪ್ರಯಾಣಿಕರಿದ್ದರು ಎನ್ನಲಾಗುತ್ತಿದೆ.
ಉಕ್ರೇನ್‌ನ ತುರ್ತು ಸೇವೆಗಳನ್ನು ಉಲ್ಲೇಖಿಸಿ ಎಎಫ್‌ಪಿ ಸುದ್ದಿ ಸಂಸ್ಥೆ ಈ ಮಾಹಿತಿಯನ್ನು ನೀಡಿದೆ. ರಷ್ಯಾದ ದಾಳಿಯಲ್ಲಿ ಇದುವರೆಗೆ ಉಕ್ರೇನ್‌ನ 40 ಜನರು ಸಾವನ್ನಪ್ಪಿದ್ದಾರೆ. ಲುಹಾನ್ಸ್ಕ್ ಪ್ರದೇಶದ ಮೇಲೆ ರಷ್ಯಾದ ವಿಮಾನವನ್ನು ಹೊಡೆದುರುಳಿಸಿದೆ ಎಂದು ಉಕ್ರೇನ್ ಮಿಲಿಟರಿ ಈ ಹಿಂದೆ ಹೇಳಿಕೊಂಡಿತ್ತು. ಅದೇ ಸಮಯದಲ್ಲಿ, ರಷ್ಯಾದ ಸೈನ್ಯದ ದಾಳಿಯಲ್ಲಿ ಉಕ್ರೇನ್‌ನ ಅನೇಕ ಮಿಲಿಟರಿ ವಾಯುನೆಲೆಗಳು ನಾಶವಾಗಿವೆ.
ವಿಡಿಯೋ: ರಷ್ಯಾದ ದಾಳಿಯ ನಂತರ ಉಕ್ರೇನ್‌ನಲ್ಲಿನ ದೃಶ್ಯ ಹೇಗಿದೆ
ಉಕ್ರೇನ್ ಇತರ ದೇಶಗಳು ಮತ್ತು ಪ್ರಧಾನಿ ಮೋದಿಯವರಿಂದ ಸಹಾಯವನ್ನು ಕೋರಿದೆ. ಇದೇ ವೇಳೆ ಅಮೆರಿಕ ಕೂಡ ರಷ್ಯಾಕ್ಕೆ ಎಚ್ಚರಿಕೆ ನೀಡಿದೆ. ಆದರೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಘೋಷಿಸಿದ ವಿಶೇಷ ಕಾರ್ಯಾಚರಣೆಯು ಉಕ್ರೇನ್ ಜನರನ್ನು ರಕ್ಷಿಸಲು ಎಂದು ರಷ್ಯಾ ಹೇಳಿದೆ. ಅವರು ಅಲ್ಲಿ ವರ್ಷಗಳಿಂದ ಬಳಲುತ್ತಿದ್ದಾರೆ. ಉಕ್ರೇನ್ ಅನ್ನು ನರಮೇಧದಿಂದ ಮುಕ್ತಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ರಷ್ಯಾ ಹೇಳಿಕೊಂಡಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ನಂತರ ಉಕ್ರೇನ್‌ನ ಪೂರ್ವಕ್ಕೆ ಎರಡು ಗ್ರಾಮಗಳನ್ನು ರಷ್ಯಾ ತನ್ನ ವಶಕ್ಕೆ ಪಡೆದಿದೆ. ಉಕ್ರೇನ್ ಮೇಲೆ ಆಕ್ರಮಣ ಮಾಡಿದ ಬಳಿಕ ಟಿವಿ ವಾಹಿನಿಯೊಂದಿಗೆ ಮಾತನಾಡಿದ ಪುಟಿನ್, ಉಕ್ರೇನಿಯನ್ ಸೈನಿಕರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮನೆಗೆ ಹೋಗುವಂತೆ ಮನವಿ ಮಾಡಿದರು. ರಷ್ಯಾ ಮತ್ತು ಉಕ್ರೇನಿಯನ್ ಪಡೆಗಳ ನಡುವಿನ ಘರ್ಷಣೆಗಳು 'ಅನಿವಾರ್ಯ' ಮತ್ತು ವಿಶೇಷ ಮಿಲಿಟರಿ ಕ್ರಮವು 'ಉಕ್ರೇನ್‌ನ ಸಶಸ್ತ್ರೀಕರಣ ಮತ್ತು ಡೆನಾಜಿಫಿಕೇಶನ್ ಗುರಿಯನ್ನು ಹೊಂದಿದೆ' ಎಂದು ಅವರು ಹೇಳಿದರು.
ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆಗಿಳಿಯುವಂತೆ ದೇಶವನ್ನುದ್ದೇಶಿಸಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದಾಳಿಯನ್ನು ಅಧಿಕೃತವಾಗಿ ಘೋಷಿಸಿದರು. ಹಾಗೇ, ರಷ್ಯಾ- ಉಕ್ರೇನ್ ನಡುವಿನ ಸಂಘರ್ಷ ಮಿಲಿಟರಿ ಕಾರ್ಯಾಚರಣೆಯಲ್ಲಿ ಮಧ್ಯೆ ಪ್ರವೇಶಿಸಿದವರ ವಿರುದ್ಧ ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ ಇಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ. ನಮ್ಮ ದೇಶ ಮತ್ತು ನಮ್ಮ ಜನರಿಗೆ ಬೆದರಿಕೆ ಹಾಕಲು ನೋಡಿದರೆ, ಈ ವಿಷಯದಲ್ಲಿ ಮಧ್ಯ ಪ್ರವೇಶಿಸಲು ಪ್ರಯತ್ನಿಸುವ ಯಾರಿಗಾದರೂ ರಷ್ಯಾದಿಂದ ಪ್ರತಿಕ್ರಿಯೆ ನೀಡುತ್ತೇವೆ. ಹಾಗೇನಾದರೂ ಮಧ್ಯ ಪ್ರವೇಶ ಮಾಡಿದರೆ ನಿಮ್ಮ ಇತಿಹಾಸದಲ್ಲಿ ಹಿಂದೆಂದೂ ಅನುಭವಿಸದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ರಷ್ಯಾದ ಅಧ್ಯಕ್ಷ ಪುಟಿನ್ ಎಚ್ಚರಿಕೆ ನೀಡಿದ್ದಾರೆ.
ಅಂತೆಯೇ ಉಕ್ರೇನ್ ದಾಳಿಗೆ 50 ರಷ್ಯಾ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಉಕ್ರೇನ್‌ನ ಕೀವ್, ಬಾರ್ಕೇವಾ, ಒಡೆಸಾ, ಮಾಮ್‌ಪ್ರೀತ್ ಹಾಗೂ ಕ್ರಾಮ್‌ಬೋರೆಸ್ಕೆ ಸೇರಿದಂತೆ 11 ನಗರಗಳನ್ನು ಗುರಿಯಾಗಿರಿಸಿಕೊಂಡು ರಷ್ಯಾ ಸೇನೆ ಕ್ಷಿಪಣಿ ದಾಳಿ ನಡೆಸಿದೆ.ಉಕ್ರೇನ್ ನಗರಗಳ ಮೇಲೆ ಕ್ಷಿಪಣಿ ಮತ್ತು ಬಾಂಬ್ ದಾಳಿಗಳು ನಡೆದಿದ್ದು, ಭಾರಿ ಪ್ರಮಾಣದಲ್ಲಿ ಸ್ಫೋಟದ ಸದ್ದು ಕೇಳಿ ಬಂದಿದ್ದು, ನಾಗರಿಕರು ತಲ್ಲಣಗೊಂಡಿದ್ದಾರೆ ಎಂದು ರಷ್ಯಾ ವಿದೇಶಾಂಗ ಸಚಿವರು ಹೇಳಿದ್ದಾರೆ.
Recommended Video
ರಷ್ಯಾ 8.5 ಲಕ್ಷ ಸಕ್ರಿಯ ಸೈನಿಕರನ್ನು ಹೊಂದಿದ್ದರೆ, ಉಕ್ರೇನ್ ಕೇವಲ 2 ಲಕ್ಷ ಸಕ್ರಿಯ ಸೈನಿಕರನ್ನು ಹೊಂದಿದೆ. ರಷ್ಯಾದ ರಕ್ಷಣಾ ಬಜೆಟ್ ಉಕ್ರೇನ್‌ನ 10 ಪಟ್ಟು ಹೆಚ್ಚು. ಪರಿಸ್ಥಿತಿಗಳಲ್ಲಿ, ಉಕ್ರೇನ್‌ಗೆ ತನ್ನ ರಕ್ಷಣೆಯನ್ನು ಖಾತರಿಪಡಿಸುವ ಮಿಲಿಟರಿ ಸಂಘಟನೆಯ ಅಗತ್ಯವಿದೆ. ಇದೇ ಕಾರಣಕ್ಕೆ ಉಕ್ರೇನ್ ತನ್ನ ಪರ್ಯಾಯ ರಕ್ಷಣಾ ವ್ಯವಸ್ಥೆಯಾಗಿ ನ್ಯಾಟೋವನ್ನು ಆಯ್ಕೆ ಮಾಡಿತ್ತು. ಆದರೆ ಉಕ್ರೇನ್ ನ ಈ ನಿರ್ಧಾರ ರಷ್ಯಾ ಕಣ್ಣು ಕೆಂಪಾಗುವಂತೆ ಮಾಡಿತ್ತು.












Click it and Unblock the Notifications