Ukraine War: ರಷ್ಯಾ ಗ್ಯಾಸ್ ಘಟಕದ ಮೇಲೆ ಉಕ್ರೇನ್ ಸೇನೆಯಿಂದ ಭೀಕರ ದಾಳಿ
ರಷ್ಯಾ ವಿರುದ್ಧ ಉಕ್ರೇನ್ ಸೇನೆ ಇಂದು ಭೀಕರ ದಾಳಿ ನಡೆಸಿದ್ದು, ಈ ಮೂಲಕ ಶಾಂತಿ ಮಾತುಕತೆಗೆ ಬೆಂಕಿ ಬಿದ್ದಿದೆ. ರಷ್ಯಾ ತನ್ನ ಮೇಲೆ ಇತ್ತೀಚೆಗೆ ಮಾಡಿದ್ದ ಭೀಕರ ದಾಳಿಗೆ ಪ್ರತಿಕಾರವಾಗಿ ಉಕ್ರೇನ್‌ನ ಸೇನೆ ಈ ದಾಳಿ ಮಾಡಿದೆ ಎನ್ನಲಾಗಿದೆ. ರಷ್ಯಾ ಗ್ಯಾಸ್ ಘಟಕದ ಮೇಲೆ ಉಕ್ರೇನ್ ಸೇನೆಯಿಂದ ಭೀಕರ ದಾಳಿ ನಡೆದಿದ್ದು, ಉಕ್ರೇನ್ ದಿಢೀರ್ ನಡೆಸಿದ ಇಂತಹ ಅಟ್ಯಾಕ್ ಕಂಡು ಬೆಚ್ಚಿಬಿದ್ದಿದೆ ರಷ್ಯಾ ಸೇನೆ. ಈ ಮೂಲಕ ಪುಟಿನ್ ಪಡೆಗಳು ಕೂಡ ಉಕ್ರೇನ್ ವಿರುದ್ಧ ಮರುದಾಳಿಗೆ ಸಿದ್ಧವಾಗಿವೆ ಎಂಬ ಮಾಹಿತಿ ಉಕ್ರೇನ್ ನೆಲದಲ್ಲಿ ಭಯ ಹುಟ್ಟಿಸಿದೆ.
ಅಂದಹಾಗೆ ಇದೀಗ ಉಕ್ರೇನ್ ಡ್ರೋನ್‌ಗಳು ದಕ್ಷಿಣ ರಷ್ಯಾದ ಪ್ರಮುಖ ಅನಿಲ ಸಂಸ್ಕರಣಾ ಘಟಕವನ್ನೇ ಟಾರ್ಗೆಟ್ ಮಾಡಿ ಡೆಡ್ಲಿ ಅಟ್ಯಾಕ್ ನಡೆಸಿವೆ. ಹೀಗೆ ಉಕ್ರೇನ್ ನಡೆಸಿದ ದಿಢೀರ್ ದಾಳಿಯಿಂದ ರಷ್ಯಾ ತನ್ನ ಅನಿಲ ಸರಬರಾಜನ್ನು ನಿಲ್ಲಿಸಿದ್ದು, ಕಝಕಿಸ್ತಾನ್‌ಗೆ ಅನಿಲ ಸರಬರಾಜು ನಿಂತು ಹೋಗಿದೆ. ಈ ಮೂಲಕ ರಷ್ಯಾ & ಉಕ್ರೇನ್ ಯುದ್ಧ ಇನ್ನಷ್ಟು ಘೋರವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ಕೆಲವು ಗಂಟೆಗಳ ಹಿಂದಷ್ಟೇ ರಷ್ಯಾ ಅಧ್ಯಕ್ಷ ಝೆಲೆನ್ಸ್ಕಿ ಮಾತುಕತೆ ನಡೆಸಿ ಬಂದಿದ್ದರು. ಈ ಭೇಟಿ ನಡೆದ ಕೆಲವೇ ಗಂಟೆಗಳ ನಂತರ ಭೀಕರವಾಗಿ ದಾಳಿ ನಡೆದಿರುವುದು ಸಂಚಲನ ಸೃಷ್ಟಿಸಿದೆ.

ಮತ್ತೆ ಶುರುವಾಯ್ತು ಭೀಕರ ದಾಳಿ
ಉಕ್ರೇನ್ ಸೇನೆ ರಷ್ಯಾ ಎದುರು ಇವತ್ತು ಶರಣಾಗುತ್ತೆ, ನಾಳೆ ಶರಣಾಗುತ್ತೆ ಅಂತಾ ಜಗತ್ತೇ ಈಗ ಕಾಯುತ್ತಿದೆ. ಯಾಕಂದ್ರೆ ಈಗಾಗಲೇ ಒಟ್ಟು 1 ಮಿಲಿಯನ್ ಅಂದ್ರೆ ಸುಮಾರು 10,00,000 ಜನರು ಮೃತಪಟ್ಟಿದ್ದಾರೆ ಎಂಬ ಆರೋಪ ಇದೆ. ಅಲ್ಲದೆ ಇನ್ನೊಂದು ಕಡೆ ರಷ್ಯಾ ಕೊಡ್ತಾ ಇರುವ ಏಟಿಗೆ ಈಗಾಗಲೇ ಭಾಗಶಃ ಉಕ್ರೇನ್ ನೆಲ ನಲುಗಿ ಹೋಗಿದೆ. ಪರಿಸ್ಥಿತಿ ಕೈಮೀರಿದ್ದು ಯಾವ ಕ್ಷಣದಲ್ಲಿ ಈ ರಷ್ಯಾ & ಉಕ್ರೇನ್ ಯುದ್ಧ 3ನೇ ಮಹಾಯುದ್ಧವಾಗಿ ಬದಲಾಗುತ್ತೋ? ಎಂಬ ಭಯ ಕಾಡುತ್ತಿದೆ, ಇಂತಹ ಸಮಯದಲ್ಲೇ ಮತ್ತೆ ದಾಳಿ ಶುರುವಾಗಿದೆ.
ಅಮೆರಿಕ ಕಡೆಯಿಂದ ಹೊಸ ಪ್ಲಾನ್?
ಇದನ್ನೆಲ್ಲಾ ನೋಡುತ್ತಿದ್ದರೆ ರಷ್ಯಾ & ಉಕ್ರೇನ್ ಸೈಲೆಂಟ್ ಆಗಿ ಶಾಂತಿ ಮಾತುಕತೆ ಮಾಡಿ, ಪರಿಸ್ಥಿತಿ ತಣ್ಣಗೆ ಮಾಡಬೇಕಿದೆ. ಇಲ್ಲವಾದರೆ ಚಳಿಗಾಲದ ತೀವ್ರತೆಗೆ ಉಕ್ರೇನ್ ದೇಶದಲ್ಲಿರುವ ಜನ ಸಾಮಾನ್ಯರು ನರಳುವ ಪರಿಸ್ಥಿತಿ ಎದುರಾಗಲಿದೆ. ಅದರಲ್ಲೂ ಅಮೆರಿಕ ಕೂಡ ಇದೀಗ ಬೇರೆ ಪ್ಲಾನ್ ಮಾಡಿದಂತೆ ಕಾಣುತ್ತಿದ್ದು, ಈ ಯುದ್ಧ ಇನ್ನಷ್ಟು ಭೀಕರವಾಗುವ ಲಕ್ಷಣ ಕಾಣುತ್ತಿದೆ.












Click it and Unblock the Notifications