ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹತ್ಯೆಯ ಮೂರು ಸ್ಕೆಚ್ ಮಿಸ್!
ಕೀವ್, ಮಾರ್ಚ್ 4: ಕಳೆದ ವಾರ ಆರಂಭವಾದ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಮಧ್ಯೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮೇಲೆ ಮೂರು ಬಾರಿ ಹತ್ಯೆ ಪ್ರಯತ್ನ ನಡೆದಿದೆ ಎಂದು ವರದಿಯಾಗಿದೆ. ರಷ್ಯಾದ ಸಂಚಿನ ಕುರಿತು ಉಕ್ರೇನಿಯನ್ ಅಧಿಕಾರಿಗಳು ಎಚ್ಚರಿಕೆ ನೀಡಿದ ಹಿನ್ನೆಲೆ ಅವರ ಹತ್ಯೆಯ ಪ್ರಯತ್ನ ವಿಫಲವಾಗಿದೆ ಎಂದು ದಿ ಟೈಮ್ಸ್ ವರದಿ ಮಾಡಿದೆ.
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಕೊಲ್ಲಲು ವ್ಯಾಗ್ನರ್ ಗುಂಪು ಮತ್ತು ಚೆಚೆನ್ ಎಂಬ ಎರಡು ವಿಭಿನ್ನ ಹತ್ಯೆ ಗುಂಪುಗಳನ್ನು ಕಳುಹಿಸಲಾಗಿದೆ ಎಂದು ವರದಿಗಳು ಹೇಳಿವೆ.
ವಾಷಿಂಗ್ಟನ್ ಪೋಸ್ಟ್ ಪ್ರಕಾರ, ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಬಿ) ಉಕ್ರೇನಿಯನ್ನರನ್ನು ಕದಿರೊವೈಟ್ಸ್‌ನ ಘಟಕದ ಬಗ್ಗೆ ಎಚ್ಚರಿಸಿದೆ. ಚೆಚೆನ್ ವಿಶೇಷ ಪಡೆ ಅನ್ನು ಝೆಲೆನ್ಸ್ಕಿ ಹತ್ಯೆಗಾಗಿ ಕಳುಹಿಸಲಾಗಿದೆ. ಆದರೆ ಈ ಘಟಕಗಳನ್ನು "ನಾಶಗೊಳಿಸಲಾಗಿದೆ" ಎಂದು ಉಕ್ರೇನ್‌ನ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಮಂಡಳಿಯ ಕಾರ್ಯದರ್ಶಿ ಒಲೆಕ್ಸಿ ಡ್ಯಾನಿಲೋವ್ ಹೇಳಿದ್ದಾರೆ.

ರಷ್ಯಾ ಕಾರ್ಯತಂತ್ರವೇ ಉಲ್ಟಾ!
ಕಳೆದ ಶನಿವಾರವೇ ಉಕ್ರೇನ್‌ನ ರಾಜಧಾನಿ ಕೀವ್‌ನ ಹೊರವಲಯದಲ್ಲಿ ಚೆಚೆನ್ ವಿಶೇಷ ಪಡೆಗಳನ್ನು ಕೊಲ್ಲಲಾಗಿದೆ. ಇಂದು ಈ ರಕ್ತಸಿಕ್ತ ಯುದ್ಧದಲ್ಲಿ ಭಾಗವಹಿಸಲು ಬಯಸದ ಎಫ್‌ಎಸ್‌ಬಿಯಿಂದ ನಾವು ಮಾಹಿತಿ ಸ್ವೀಕರಿಸಿದ್ದೇವೆ," ಎಂದು ಡ್ಯಾನಿಲೋವ್ ದಿ ಪೋಸ್ಟ್‌ಗೆ ತಿಳಿಸಿದ್ದಾರೆ.
ಎಫ್‌ಎಸ್‌ಬಿಯೊಳಗಿನ ಯುದ್ಧ-ವಿರೋಧಿ ಅಂಶಗಳಿಂದ ಗುಪ್ತಚರ ಮಾಹಿತಿ ಬಂದಿದೆ ಎಂದು ಟೈಮ್ಸ್ ವರದಿ ಮಾಡಿದೆ. ಇದರ ಮಧ್ಯೆ ಉಕ್ರೇನಿಯನ್ನರು ತಮ್ಮ ನಡೆಗಳನ್ನು ಎಷ್ಟು ನಿಖರವಾಗಿ ನಿರೀಕ್ಷಿಸಿದ್ದರು ಎಂಬುದರ ಬಗ್ಗೆ ವರದಿಯಾಗಿದೆ. ಇಲ್ಲಿ ಮಾಹಿತಿಯ ಮೂಲವನ್ನು ಹೆಸರಿಸಿಲ್ಲ, ಆದರೆ ಉನ್ನತ ಶ್ರೇಣಿಯ ಅಧಿಕಾರಿಯು ಝೆಲೆನ್ಸ್ಕಿಯ ಭದ್ರತಾ ತಂಡವು ಎಷ್ಟು ಚೆನ್ನಾಗಿ ವಿವರಿಸಲ್ಪಟ್ಟಿದೆ ಎಂಬುದರ ಬಗ್ಗೆ ವರದಿ ಮಾಡಿದೆ.

ಉಕ್ರೇನ್ ರಾಜಧಾನಿಯಲ್ಲೇ ಉಳಿದ ಝೆಲೆನ್ಸ್ಕಿ
ಉಕ್ರೇನ್‌ನಲ್ಲಿನ ಯುದ್ಧದ ಆರಂಭದಲ್ಲಿಯೇ ಯುನೈಟೆಡ್ ಸ್ಟೇಟ್ಸ್ ವೊಲೊಡಿಮಿರ್ ಝೆಲೆನ್ಸ್ಕಿ ಸ್ಥಳಾಂತರಕ್ಕೆ ಅವಕಾಶ ನೀಡಿತು. ಆದರೆ ಅದನ್ನು ನಿರಾಕರಿಸಿದ ಝೆಲೆನ್ಸ್ಕಿ, ರಷ್ಯಾದ ಬಾಂಬ್ ದಾಳಿಯ ಮಧ್ಯೆ ಕೀವ್‌ನ ತಮ್ಮ ರಕ್ಷಣಾ ಪಡೆ ಮತ್ತು ಹತ್ತಿರದ ಸಹಾಯಕರೊಂದಿಗೆ ಕ್ವಾರ್ಟರ್ಸ್‌ನಲ್ಲಿ ಉಳಿಯಲು ನಿರ್ಧರಿಸಿದರು.

ಪ್ರಜೆಗಳೊಂದಿಗೆ ಉಳಿಯಲು ನಿರ್ಧರಿಸಿದ್ದಕ್ಕೆ ಶ್ಲಾಘನೆ
ರಷ್ಯಾ ನಡೆಸುತ್ತಿದ್ದ ನಿರಂತರ ಬಾಂಬ್, ಶೆಲ್ ದಾಳಿ ನಡುವೆಯೂ ಪ್ರಜೆಗಳೊಂದಿಗೆ ಉಳಿದುಕೊಳ್ಳಲು ನಿರ್ಧರಿಸಿದ ವೊಲೊಡಿಮಿರ್ ಝೆಲೆನ್ಸ್ಕಿ ನಿರ್ಧಾರವನ್ನು ಫ್ರಾನ್ಸ್ ಅಧ್ಯಕ್ಷ ಮ್ಯಾನುಯೆಲ್ ಮ್ಯಾಕ್ರನ್ ಶ್ಲಾಘಿಸಿದ್ದರು. ಝೆಲೆನ್ಸ್ಕಿ ಎಂದರೆ ಗೌರವ, ಸ್ವಾತಂತ್ರ್ಯ ಮತ್ತು ಧೈರ್ಯದ ಇನ್ನೊಂದು ಮುಖ ಎಂದು ಹಾಡಿ ಹೊಗಳಿದ್ದರು.

ಯುದ್ಧ ಅಂತ್ಯಗೊಳಿಸಲು ಪುಟಿನ್ ಜೊತೆಗೆ ಮಾತುಕತೆ
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವನ್ನು ಅಂತ್ಯಗೊಳಿಸುವುದಕ್ಕೆ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ನೇರ ಮಾತುಕತೆ ನಡೆಸುವುದೇ ಏಕೈಕ ಮಾರ್ಗ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಗುರುವಾರ ಹೇಳಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಗೆ ನೇರ ಮಾತುಕತೆ ಮೂಲಕವೇ ಯುದ್ಧವನ್ನು ಕೊನೆಗಾಣಿಸಲು ಸಾಧ್ಯ ಎಂದಿದ್ದಾರೆ. ಉಕ್ರೇನ್‌ನ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಂದ ಹೆಚ್ಚಿದ ಮಿಲಿಟರಿ ಸಹಾಯವನ್ನು ಬಯಸುತ್ತಿರುವಾಗಲೇ ಎಚ್ಚರಿಕೆ ಸಂದೇಶವನ್ನೂ ರವಾನಿಸಿದ್ದಾರೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವು ಒಂಭತ್ತನೇ ದಿನಕ್ಕೆ ಕಾಲಿಟ್ಟಿದೆ. ಇದರ ಮಧ್ಯೆ ಒಂದು ವೇಳೆ ಉಕ್ರೇನ್ ಪತನವಾದರೆ, ಬಾಲ್ಟಿಕ್ ರಾಜ್ಯಗಳು ಮುಂದಿನದಾಗಬಹುದು ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಎಚ್ಚರಿಸಿದ್ದಾರೆ.












Click it and Unblock the Notifications